ಕಳ್ಳನ ಬಂಧನ 31 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣ ನಗದು ವಶ
ಬಳ್ಳಾರಿ 28:ನಗರದ ಗಾಂಧಿನಗರ ಪೋಲಿಸ್ ಠಾಣೆಯ ಪೋಲಿಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದು. ಆತನಿಂದ 31 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣಗಳು ನಗದು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶ ಮೂಲಕ ನರಸರಾವ್ ಪೇಟೆಯ ರಾಯಪಾಟಿ ವೆಂಕಯ್ಯ 42 ವರ್ಷ ಅಲಿಯಾಸ್ ವೆಂಕಣ್ಣ, ವೆಂಕಟೇಶ ಎಂಬ ಹೆಸರಿನಿಂದ ಗುಂಟುರಿನಲ್ಲಿ ವಾಸಮಾಡಿಕೊಂಡು ಸುತ್ತ-ಮುತ್ತಲ ವಿಜಯವಾಡ, ಓಂಗೊಲ್, ಮತ್ತಿತರ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಮನೆಗಳನ್ನೇ ಟಾಗರ್ೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ. ಇತ ಆಂಧ್ರ ಪ್ರದೇಶದಲ್ಲಿ ಒಟ್ಟಾರೆ 144 ಕಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದಾನೆ. ಹಿತ್ತೇಚೆಗೆ ಓಂಗೊಲಿನ ಮನೆಯೊಂದರಲ್ಲಿ 4 ಕೋಟಿ ರೂ, ಕದ್ದು ಪೋಲಿಸರಿಂದ ಬಂಧಿತನಾಗಿ ಜೈಲು ವಾಸದಿಂದ ಜಾಮಿನಿನ ಮೇಲೆ ಬಿಡುಗಡೆಯಾಗಿದ್ದು ಅಲ್ಲಿಂದ ಆಂಧ್ರ ಬಿಟ್ಟು ಕನರ್ಾಟಕ್ಕೆ ತೆರಳಿ ಕಳ್ಳತನ ಮಾಡಿದರೆ ತನಗೆ ಸುರಕ್ಷಿತ ಎಂದು ಬಳ್ಳಾರಿ ನಗರವನ್ನು ತನ್ನ ದಂದೆಗೆ ಹುಡುಕಿಕೊಂಡಿದ್ದಾನೆ. ಕಳೆದ ಡಿ.13ರಂದು ಇಲ್ಲಿನ ಗಾಂಧಿನಗರದ ಮೂರನೇ ಕ್ರಾಸ್ನ ಮಹಾವೀರ ಎಂಬುವವರ ಮನೆ ಬೀಗ ಮುರಿದು ಮನೆಯಲ್ಲಿದ್ದ ನಗದು ಹಣ, ಬಂಗಾರ, ಬೆಳ್ಳಿ ಆಭರಣಗಳ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗಾಂಧಿನಗರ ಠಾಣೆಯ ಪೋಲಿಸರು ಆರೋಪಿ ರಾಯಪಾಟಿ ವೆಂಕಯ್ಯ ಮತ್ತು ಆತನಿಗೆ ಸಹಕಾರಿಯಾಗಿದ್ದ ಜಂಗಮ್ ಜಂಟಿ ಎಂಬುವವನ್ನು ವಶಕ್ಕೆ ತೆಗೆದುಕೊಂಡು ಅವರಿಂದ 900ಗ್ರಾಂ ಚಿನ್ನಾಭರಣ ಎರಡು ಕಿಲೋ ಬೆಳ್ಳಿ ವಸ್ತುಗಳು, 4 ಲಕ್ಷ 63 ಸಾವಿರ ನಗದು ಮತ್ತು ಗಾಂಧಿನಗರ ಠಾಣೆಯ ಮತ್ತೊಂದು ಪ್ರಕರಣಕ್ಕೆ ಸಂಭಂಧಿಸಿದಂತೆ ಕ್ಯಾಮರ, ಲ್ಯಾಫ್ ಟಾಫ್, ಒಂದು ರೇಬಾನ್ ಕೂಲಿಂಗ್ಗ್ಲಾಸ್, ಮೊದಲಾದವುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನ ನಡೆದ ಒಂದು ತಿಂಗಳಲ್ಲಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುವ ಗಾಂಧಿನಗರ ಠಾಣೆಯ ಪೋಲಿಸರನ್ನು ಅವರ ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.