ಕಾರವಾರ

ಉತ್ತರ ಕನ್ನಡ ಪೊಲೀಸ್ ಇಲಾಖೆ ರಾಜ್ಯಕ್ಕೆ ಮಾದರಿ: ಪ್ರವೀಣ ಸೂದ್

ಉತ್ತರ ಕನ್ನಡ ಪೊಲೀಸ್ ಇಲಾಖೆ ರಾಜ್ಯಕ್ಕೆ ಮಾದರಿ: ಪ್ರವೀಣ ಸೂದ್

ಕಾರವಾರ 15: ಅತಿ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದರ ಜೊತೆಗೆ,  ಅತಿಹೆಚ್ಚು  ಸ್ವತ್ತು ಮರಳಿ ವಶಪಡಿಸಿಕೊಂಡ ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ  ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪೊಲೀಸ್ ಮಹಾನಿದರ್ೇಶಕ ಪ್ರವೀಣ ಸೂದ್ ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ದೊಡ್ಡ ದೊಡ್ಡ ನಗರ ಮಹಾನಗರಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸಿ, ಸ್ವತ್ತು ಜಪ್ತು ಪಡಿಸಿಕೊಂಡಿದ್ದು ನೋಡಿದ್ದೇವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸ್ವತ್ತು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿರುವುದು ದಾಖಲೆ. ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಉತ್ತಮ ಸಾಧನೆ ಆಗಿದೆ ಎಂದರು. ಮಾದಕ ವಸ್ತು ಜಪ್ತಿ ಮತ್ತು ಪ್ರಕರಣ ದಾಖಲಿಸುವಲ್ಲೂ ಸಹ ಉತ್ತಮ ಕೆಲಸವಾಗಿದೆ. 

ನಾಗರಿಕ ಪೊಲಿಸ್ ಸಿಬ್ಬಂದಿ ನೇಮಕಾತಿ ಎಪ್ರಿಲ್  2021 ಒಳಗಾಗಿ ಸಂಪೂರ್ಣ ಭತರ್ಿ ಮಾಡಲಾಗುವುದು. ಈಗಾಗಲೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂದಿನ ಆರು ತಿಂಗಳೊಳಗಾಗಿ  ಸಂಪೂರ್ಣ ಹುದ್ದೆ ಭತರ್ಿ ಮಾಡಿಕೊಳ್ಳಲಾಗುವುದು. ಪದೋನ್ನತಿಗೆ ಬಂದಿರುವ ಎಎಸ್ಐ, ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ ಹುದ್ದೆಯಲ್ಲಿನ ಸಿಬ್ಬಂದಿಗಳನ್ನು ನಿಯಮಾನುಸಾರ  ಎಪ್ರಿಲ್ ಒಳಗಾಗಿ ಪದೋನ್ನತಿ ನೀಡಲಾಗುವುದು. ಈವರೆಗೆ ಯಾವುದೇ ಪದೋನ್ನತಿಯನ್ನು ತಡೆ ಹಿಡಿದಿಲ್ಲ. ಎಎಸ್ಐ ಹುದ್ದೆಯಲ್ಲಿರುವ ಸಿಬ್ಬಂದಿಯು 5 ವರ್ಷ ಪೂರ್ಣಗೊಳಿಸಿದ್ದಲ್ಲಿ ಕಡ್ಡಾಯವಾಗಿ ಪದೋನ್ನತಿ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ.  ಇನ್ನು ಐದು ತಿಂಗಳಲ್ಲಿ  ನೇಮಕಾತಿ ಪ್ರಕ್ರಿಯೆ ಮುಗಿದು ಹೊಸ ಕಾನ್ಟೇಬಲ್ ನೇಮಕಾತಿ ನಡೆಯಲಿದ್ದು ,ಈ ವೇಳೆ ಅರ್ಹತೆ ಇರುವ ಎಲ್ಲ ಸಿಬ್ಬಂದಿಗಳನ್ನು ಪದೋನ್ನತಿಗೊಳಿಸಲಾಗುವುದು ಎಂದರು.


ಸುದ್ದಿ ಓದಿ