ಸಂಗೀತ ಸಮೃದ್ಧಿಯ ಸಂಕೇತ: ಭಾರತಿ ತಿಮ್ಮಾರೆಡ್ಡಿ

ಸಂಗೀತ ಸಮೃದ್ಧಿಯ ಸಂಕೇತ: ಭಾರತಿ ತಿಮ್ಮಾರೆಡ್ಡಿ

ಬಳ್ಳಾರಿ 22:ಸಂಗೀತ ಸಮೃದ್ಧಿಯ ಸಂಕೇತ ಸಂಗೀತದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ತಿಮ್ಮಾರೆಡ್ಡಿಯವರು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಚಿನ್ಮಯಿ ಸಂಗೀತ ಕಲಾಟ್ರಸ್ಟ್ನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನದಡಿಯಲ್ಲಿ ಹಮ್ಮಿಕೊಂಡ ಗಾನ ಸಂಭ್ರಮ ಹಾಗೂ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡುತ್ತ ಸಂಗೀತ ಒಂದು ನಿರಂತರವಾದ ಸಾಧನೆ, ಇದಕ್ಕೆ ಕೊನೆಯಿಲ್ಲ ಎಂದು ತಿಳಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕನರ್ಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಟಿ.ಹೆಚ.ಎಂ.ಬಸವರಾಜ ರವರು ಮ್ಯೂಸಿಕ್ ಥೆರಪಿ ಈಗ ಎಲ್ಲಾ ಥೆರಪಿಗಳಿಗಿಂತ ಆಸ್ಪತ್ರೆಗಳಲ್ಲಿ ರೋಗ ವಾಸಿ ಮಾಡಲು ವೈದ್ಯರು ಉಪಯೋಗಿಸಿಕೊಳ್ಳುವ ಒಂದು ಸಾಧನ. ಈಗ ಅನೇಕ ಆಸ್ಪತ್ರೆಗಳಲ್ಲಿ ರೋಗಗಳನ್ನು ಮ್ಯೂಸಿಕ್ ಥೆರಪಿಗಳ ಮೂಲಕ ಗುಣಪಡಿಸುತ್ತಿದ್ದಾರೆ. ಪ್ರತಿಯೊಂದು ಖಾಯಿಲಿಗು ಒಂದೊಂದು ಥೆರಪಿಯ ಹಾಡುಗಳಿವೆ. ಹೀಗಾಗಿ ಸಂಗೀತ ಒಂದು ತಪಸ್ಸಿನಿಂಂದ ಬಂದಂತಹ ಸಾಧನೆ. ಕನರ್ಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತಗಳನ್ನು ಈಗಿನ ಬ್ರೇಕ್ ಡ್ಯಾನ್ಸ್ಗಳು ಹಿಂದಿಕ್ಕಿಲು ಪ್ರಯತ್ನಿಸುತ್ತಿವೆ. ಕಾರಣ ನಮ್ಮ ಶೋತ್ರುಗಳು ಸಂಗೀತವನ್ನು ಅಳವಡಿಸಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ|| ರಂಗನಾಥನವರು ಮಾತನಾಡುತ್ತ ರಾಗಗಳಿಂದ ರೋಗಗಳು ವಾಸಿಯಾಗುವುದರಿಂದ ಖೈದಿಗಳ ಮನಸ್ಸನ್ನು ಬದಲಾಯಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸಂಗೀತದದ ಅವಶ್ಯಕತೆ ಇದೆ ಎಂದು ತಿಳಿಸಿದರು. ಹೊಸಪೇಟೆಯ ವಿಕಾಸ ಕೋ-ಆಪರೇಟಿವ್ ಬ್ಯಾಂಕಿನ ಸಲಹೆಗಾರರಾದ ಶ್ರೀ ಬಿ.ಜೆ.ಕುಲಕಣರ್ಿ ಯವರು ಮಾತನಾಡಿದರು. ಸಭೆಯಲ್ಲಿ ವೇದ ವಿದ್ಯಾನಿಧಿ, ಘನಪಾಟಿ ನಿವೃತ್ತ ಸಂಸ್ಕೃತ ಉಪನ್ಯಾಸಕರಾದ ಎಮ್.ಗೋವಿಂದಭಟ್, ಶ್ರೀಮೇಧ ಕಾಲೇಜಿನ ಪ್ರಾಂಶುಪಾಲರಾದ ಕೆ.ರಾಮ್ಕಿರಣ್, ಲಕ್ಷ್ಮಿನಾರಾಯಣ, ಪಿಟೀಲು ವಾದಕರಾದ ಶ್ರೀಮತಿ ಜೆ.ಆರ್.ಶಕುಂತಲ, ಶಿಕ್ಷಕರಾದ ಶ್ರೀಮತಿ ಜೆ.ನಿರ್ಮಲ ಮತ್ತು ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪುರಂದರದಾಸಾರ ಮತ್ತು ತ್ಯಾಗರಾಜರ ಹಾಡುಗಳನ್ನು ಸುಮಾರು 150 ವಿದ್ಯಾಥರ್ಿ, ವಿದ್ಯಾಥರ್ಿನಿಯರು ಪ್ರಸ್ತುತಪಡಿಸಿದರು. ಸಂಗೀತ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಎ.ರಾಜೇಶ್ವರಿ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ಎಂ.ವಿನೋದ್ ನಿರೂಪಿಸಿದರು. ರಂಗಮಂದಿರ ಶೋತ್ರುಗಳಿಂದ ತುಂಬಿ ತುಳುಕುತ್ತಿತ್ತು. ಸುಮಾರು 4 ತಾಸು ಸಂಗೀತ ಲೋಕವೆ ಸೃಷ್ಟಿಯಾಗಿತ್ತು. ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಡ್ಯಾನ್ಸರ್ ಡಾ|| ವೀಣಾ ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನದಡಿಯಲ್ಲಿ ಕನರ್ಾಟಕ ಸಂಗೀತವನ್ನು ಬಿ.ಸಾಯಿನಾಥ ಮತ್ತು ತಂಡದವರು ನಡೆಸಿಕೊಟ್ಟರು.


ಸುದ್ದಿ ಓದಿ