ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತ ಸುಕೋಬ್ಯಾಂಕ್ನಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತ ಸುಕೋಬ್ಯಾಂಕ್ನಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಬಳ್ಳಾರಿ 02:ಸುಕೋಬ್ಯಾಂಕ್ ತನ್ನ ಬೆಳ್ಳಿ ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ವಿಭಿನ್ನವಾಗಿ ರೂಪಿಸಿ, ವಿಶೇಷ ಪರಿಕಲ್ಪನೆಯ ಮಾಹಿತಿಯನ್ನು ಒಳಗೊಂಡು ಪ್ರಕಟಿಸಿರುವ 2019ರ ಸಾಲಿನ ಕ್ಯಾಲೆಂಡರ್ ಅನ್ನು ಸುಕೋ ಬ್ಯಾಂಕ್ ರಾಯಲ್ ಶಾಖೆ, ಬಳ್ಳಾರಿಯಲ್ಲಿ ಬಿಡುಗಡೆ ಮಾಡಿ, ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಿದ ಚೇಂಬರ್ ಆಫ್ ಕಾಮರ್ಸ, ಬಳ್ಳಾರಿಯ ಉಪಾಧ್ಯಕ್ಷರಾದ ಗಾದೆಂ ಗೋಪಾಲಕ್ರಿಷ್ಣ  ಅವರು ಮಾತನಾಡಿ, ಶುಭ ಹಾರೈಸಿದರು. `ಸುಕೋ ಬ್ಯಾಂಕ್ ಈ ವರ್ಷದ ಕ್ಯಾಲೆಂಡರ್ ಅನ್ನು `ಸಣ್ಣ ವ್ಯಾಪಾರ, ದೊಡ್ಡ ಪ್ರಭಾವ" ಹೊಂದಿರುವ, ಸ್ಥಳೀಯ ಸಣ್ಣ ವ್ಯಾಪಾರ ಉದ್ದಿಮೆಗಳನ್ನು ಗುರುತಿಸಿ ಕ್ಯಾಲೆಂಡರ್ ರೂಪದಲ್ಲಿ ಪ್ರಕಟಿಸಿ, ಬೆಂಬಲ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಳ್ಳಾರಿ ಇದರ ಕಾರ್ಯದಶರ್ಿಗಳಾದ ಜೆ.ಖಲೀಲಸಾಬ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈದೇ ಸಂದರ್ಭದಲ್ಲಿ ಹಾಜರಿದ್ದ ಬಳ್ಳಾರಿ ಕ್ಲಸ್ಟರ್ ವ್ಯವಸ್ಥಾಪಕರಾದ ಸತೀಶ. ಪಿ.ಎಮ್ ಇವರು ಮಾತನಾಡಿ ಸುಕೋ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಷ್ಟೇ ಅಲ್ಲದೇ, ಸಮಾಜದಲ್ಲಿ ಕೃಷಿ, ಶಿಕ್ಷಣ, ನಿಮರ್ಾಣ ಮತ್ತು ಕೃಷಿ ತಂತ್ರಜ್ಞಾನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂಪಾಯಿ ನಗದು ಬಹುಮಾನದ `ಉತ್ತಮ  ಕೃಷಿಕ' ಪ್ರಶಸ್ತಿ ಹಾಗೂ `ಉತ್ತಮ ಕೃಷಿ ತಂತ್ರಜ್ಞಾನ' ಪ್ರಶಸ್ತಿ ಹಾಗೂ 'ಉತ್ತಮ ಕೃಷಿ ಲೇಖನ' ಪ್ರೋತ್ಸಾಹ ಬಹುಮಾನ ನೀಡುತ್ತಿರುವುದು ಸ್ವಾಗತಾರ್ಹ ಎಂದರು. ಸೌರ ಶಕ್ತಿಯನ್ನು ಪ್ರತೀ ಮನೆಗೆ ತಲುಪಿಸಲು 25 ಕಿಲೋ ವ್ಯಾಟ್ ಸಾಮಥ್ರ್ಯದ ಮನೆ ಮೇಲ್ಛಾವಣಿಯ ಗ್ರೀನ್ ವಿದ್ಯುತ್ ಉತ್ಪಾದನೆಯ `ಸುಕೋ ಸೋಲಾರ್ ಶಕ್ತಿ' ಯೋಜನೆಯು ವಿದ್ಯುತ್ ಕಡಿತ, ವಿದ್ಯುತ್ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಸಂರಕ್ಷಿಸಲು ನೆರವಾಗಲಿದೆ. ಈ ಭಾಗದಲ್ಲಿ ಯಥೇಚ್ಛವಾಗಿ ಸಿಗುತ್ತಿರುವ ಸೌರವಿದ್ಯುತ್ ಅನ್ನು ಸದುಪಯೋಗ ಮಾಡಿಕೊಳ್ಳಲು `ಸುಕೋ ಸೋಲಾರ್ ಶಕ್ತಿ' ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು. ನಿವೃತ್ತ ಉಪನ್ಯಾಸಕರಾದ ಸಿದ್ದಲಿಂಗಯ್ಯ ಸ್ವಾಮಿ ಅವರು ಗ್ರಾಹಕರ ಪರವಾಗಿ ಮಾತನಾಡಿ, ಸುಕೋ ಬ್ಯಾಂಕ್ ಆರಂಭದಿಂದಲೂ ಹೊಸತನ, ಪ್ರಯೋಗ ಮತ್ತು ರಚನಾತ್ಮಕ ಚಿಂತನೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಪ್ರತೀ ವರ್ಷ ಪ್ರಕಟಿಸುತ್ತಿರುವ ಕ್ಯಾಲೆಂಡರ್ನ ಚಿಂತನೆ ಕಲ್ಪನೆಗಳೇ ಸಾಕ್ಷಿ ಎಂದರು. ಶ್ರೀಮತಿ ಭವಾನಿ ಇವರು ಪ್ರಾರ್ಥನೆ ಗೀತೆ ಹಾಡಿದರು. ಸಿಬ್ಬಂದಿಯಾದ ಶರಣಪ್ಪ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಅವರು ವಂದನಾರ್ಪಣೆ ಸಲ್ಲಿಸಿದರು. 

ಈ ಸಮಾರಂಭದಲ್ಲಿ ಶಾಖೆಯ ಸಿಬ್ಬಂದಿಗಳಾದ ವೀರಭದ್ರ , ನವೀನ, ಕು.ಸ್ನೇಹ, ಕು.ಶೋಭ ಹಾಗೂ ಕು. ಜ್ಯೋತಿ ಭಾಗವಹಿಸಿದ್ದರು. ವಿವಿಧ ಉದ್ದಿಮೆದಾರರು, ರೈತರು ಸಹ ಉಪಸ್ಥಿತರಿದ್ದರು.

ಸುದ್ದಿ ಓದಿ