ಬಳ್ಳಾರಿಯಲ್ಲಿ ನೀನಾಸಮ್-ರಂಗತೋರಣ ನಾಟಕೋತ್ಸವ ಪೊಸ್ಟರ್ ಬಿಡುಗಡೆ
ಬಳ್ಳಾರಿ 23: ರಂಗಭೂಮಿಯಲ್ಲಿ ವಿಶೇಷ ಪ್ರದರ್ಶನ ಚಟುವಟಿಕೆಗಳನ್ನು ನಡೆಸುತ್ತ ದಶಕವನ್ನು ದಾಟಿ ದಾಪುಗಾಲಿಟ್ಟಿರುವ ನಗರದ ಸೃಜನಶೀಲ ಕ್ರಿಯಾಶೀಲ ರಂಗ ಸಂಘಟನೆಯಾಗಿರುವ ರಂಗತೋರಣ ಈ ವಷರ್ಾಂತ್ಯ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ಈ ನಾಟಕೋತ್ಸವಕ್ಕೆ ಜೋಳದರಾಶಿಯ ರಾಮೇಶ ಟ್ರಸ್ಟ್ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಟ್ರಸ್ಟ್ ಇವರ ಸಂಯುಕ್ತ ಸಹಯೋಗ ದೊರೆತು ಸ್ಥಳೀಯ ಕಲಾ-ನೃತ್ಯ-ಸಾಹಿತ್ಯ ಸಂಘಟನೆಗಳ ಸಹಕಾರ ಶ್ಲಾಘನೀಯವಾಗಿದೆ. ಇದೇ 2018ನೇ ಡಿಸೆಂಬರ್ 24, 25 ಮತ್ತು 26 ರಂದು ಮೂರು ದಿನ ಪ್ರತಿದಿನ ಸಂಜೆ 6.30ಕ್ಕೆ ನಗರದ ಡಾ||ರಾಜಕುಮಾರ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಛಯದ ಬಯಲು ರಂಗಮಂದಿರದಲ್ಲಿ ರಂಗತೋರಣ-ನೀನಾಸಮ್ ನಾಟಕೋತ್ಸವ ನಡೆಯಲಿದೆ.
ಈ ಬಾರಿ ನಾಟಕೋತ್ಸವದಲ್ಲಿ ಮೂರು ವಿಭಿನ್ನ ಅತ್ಯಾಕರ್ಷಣೀಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ಬಳ್ಳಾರಿಯ ಜನಮೆಚ್ಚಿದ ನಾಟಕವೂ ಸೇರಿದಂತೆ ನಾಡಿನಾದ್ಯಂತ ತಿರುಗಾಟದ ಮೂಲಕ ಜಯಭೇರಿ ಬಾರಿಸುತ್ತಿರುವ ನೀನಾಸಮ್ ನಾಟಕಗಳು ಬಳ್ಳಾರಿ ಜನತೆಗೆ ಸಖತ್ ಮನರಂಜನೆ ನೀಡಲಿವೆ. ಡಿಸೆಂಬರ್-24 : ನೀನಾಸಮ್ ನಾಟಕ - ಆಶ್ಚರ್ಯ ಚೂಡಾಮಣಿ:- ಈ ನಾಟಕ ಇಡೀ ರಾಮಾಯಣವನ್ನು ಅಂಗೈಯಲ್ಲಿ ತೋರಿಸುವಂತಿದೆ. ನಮಗೆ ಗೊತ್ತಿರುವ ವಾಲ್ಮೀಕಿ ರಾಮಾಯಣದ ಪುನರ್ ರೂಪಕ ಕಥನವಿದು; ಬಲು ವಿಚಿತ್ರ ... ರಾವಣನು ಮಾಯಾವೇಷದ ರಾಮನಾಗಿ ಸೀತಾಪಹರಣ, ಶೂರ್ಪಣಖಿ ಮಾಯಾ ಸೀತೆಯಾಗುವಿಕೆ, ಅಚ್ಚರಿಯ ಅಂಗುಲೀಯಕ. ಹೀಗೆ ಇದು ವಿಭಿನ್ನ ರಾಮಾಯಣ. ಮಾಯೆಯ ಆಟ, ಮಾನವನ ತೊಳಲಾಟ, ದೈವೀಶಕ್ತಿಯೆದುರಿಗಿನ ಅಸುರೀಶಕ್ತಿಯ ಆರ್ಭಟ... ಶುದ್ಧ ಪ್ರೇಮ, ಕೆಟ್ಟ ಕಾಮ... ಸಮಾಜದ ಕಟ್ಟುಪಾಡುಗಳ ವಿರುದ್ಧ ಯೋಚನೆಗಳನ್ನು ತೋರಿಸುವ ನಮ್ಮ ನಾಟಕ ಆಶ್ವರ್ಯ ಚೂಡಾಮಣಿ. ವಿಚಿತ್ರ ರೀತಿಯಲ್ಲಿ ರಾಮಾಯಣ ನೋಡಲು ತಪ್ಪದೇ ಬನ್ನಿ, ಮೂಲ : ಸಂಸ್ಕೃತ ರಚನೆ-ಕೇರಳದ ಶಕ್ತಿಭದ್ರ ಅನುವಾದ : ಬಿ.ಆರ್. ವೆಂಕಟರಮಣ ಐತಾಳ, ನಿದರ್ೆಶನ :ಜೋಸೆಫ್ ಜಾನ್ ಡಿಸೆಂಬರ್-25 : ನೀನಾಸಮ್ ನಾಟಕ - ಸೇತುಬಂಧನ:- ಯಾತ್ರೆಗೆ ತೆರಳಿದ್ದ ಆತ ಮರಳಿ ಊರಿಗೆ ಬರುಷ್ಟರಲ್ಲಿ ನದಿಗೆ ಸೇತುವೆ ಕಟ್ಟುವ ಕೆಲಸ ಆರಂಭವಾಗಿರುತ್ತದೆ. ಅದಕ್ಕೆ ತಕ್ಕಂತೆ ಅವನ ಮನೆಯೂ ಸೇರಿದಂತೆ ಊರ ಜನರ ಮನೋಧರ್ಮವೂ, ಸಾಮಾಜಿಕ ರಾಜಕೀಯ ಚಹರೆಗಳೂ ಸಂಪೂರ್ಣ ಬದಲಾಗುತ್ತವೆ. ಅದಕ್ಕೆ ಸ್ಪಂದಿಸುವ ಆತನ ಪರಿ ಏನು ... ಸಮಕಾಲೀನ ಜಗತ್ತನ್ನು ಪುರಾಣದ ಪಾತಳಿಯಲ್ಲಿಟ್ಟು ನೋಡುವ ಈ ನಾಟಕ ಊರೊಳಗಿನ ಊರಿನ ಕಥೆ. ಹೀಗೆ ಈಗಾಗಲೇ ಬೆಳೆದ ಕಥೆಯನ್ನು, ಮುಂದಕ್ಕೆ ಬೆಳೆಯಬಹುದಾದ ನಮ್ಮ-ನಿಮ್ಮದೇ ಊರಿನ ಕಥೆಯೊಂದನ್ನು ಹೇಳ್ತೀವಿ ಬನ್ನಿ. ರಚನೆ - ನಿದರ್ೆಶನ : ಅಕ್ಷರ ಕೆ.ವಿ. ತಂಡ ನೀನಾಸಂ. ಹೆಗ್ಗೋಡು, ಡಿಸೆಂಬರ್-26 : ರಂಗತೋರಣ ನಾಟಕ ದೂರದೇಶದ ಹಕ್ಕಿ:- ಅವನಿಗೆ ಹುಲಿವೇಷ ಕೇವಲ ಬಟ್ಟೆಯಲ್ಲ, ಬಣ್ಣವಲ್ಲ; ಅದೊಂದು ದೈವೀ ಕಾಯಕ. ಜನ ಮೆಚ್ಚಿದ ಚಪ್ಪಾಳೆ, ಕೊಟ್ಟ ಪುಡಿಗಾಸು ಅವನಿಗೆ ಕೈಲಾಸ. ಅವಳಿಗೆ ಅವನ ಶುದ್ಧ ಪ್ರೇಮಕ್ಕಿಂತ ಕನಕ, ಕಾಂಚನದ ಕನವರಿಕೆ. ಅದಕ್ಕೆ ಹಣವಂತ ಶೇಠ್ನ ಕುಮ್ಮಕ್ಕು. ಆ ಊರಿಗೆ ಬಂತು ಸರ್ಕಸ್ಸು, ಅಲ್ಲೂ ಒಂದು ಹುಲಿ. ಆ ಹುಲಿ ಈ ಹುಲಿ ಸವಾಲ್. ಶುರುವಾಯ್ತು ಸರ್ಕಸ್ಸು... ಕುಣಿತ ಕಾದಾಟವಾಯ್ತು !!. ಇಲ್ಲಿ ಗೆದ್ದವರಾರು?! ಬಣ್ಣ ಬಟ್ಟೆ ಕಳಚಿ ಬಯಲಾದವರಾರು...?! ನಾಟಕದ
ಈ ಬಾರಿಯ ನಾಟಕೋತ್ಸವದಲ್ಲಿ ಒಂದು ಪೌರಾಣಿಕ ಕಥೆ ಮತ್ತೊಂದು ನಮ್ಮ ನಡುವಿನ ಸಮಕಾಲೀನ ಪ್ರಸಂಗ ಮತ್ತೊಂದು ಗುರುದೇವ ರವೀಂದ್ರನಾಥ ಠಾಗೂರರವರ ಕಥೆಯಾದರಿತ ನಾಟಕಗಳ ಮಿಶ್ರಣವಿದ್ದು ನಾಟಕ ಪ್ರಿಯರಿಗೆ ರಂಗ ರಂಜನೆ ಗ್ಯಾರೆಂಟಿ. ಜೊತೆಗೆ ರಂಗತೋರಣದ ಅಚ್ಚುಕಟ್ಟು, ಆತಿಥ್ಯ... ನಗರದ ಕಲಾಭಿಮಾನಿಗಳು ನಾಟಕ ನೋಡಲು ಬನ್ನಿ ಎಂದು ಕೋರಿದರು.