ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ; ಮುತಾಲಿಕ್
ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ; ಮುತಾಲಿಕ್
ಹೂವಿನಹಡಗಲಿ 19: ’ಆದೋನಿಯ ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿರುವ ಭೂಮಿಯನ್ನು ಮಕ್ಕಾ, ಮದೀನಾ, ಇರಾಕ್, ಇರಾನ್ನಿನಿಂದ ತಂದು ಕೊಟ್ಟಿದ್ದಲ್ಲ. ಆಕ್ರಮಣ ಮಾಡಿಕೊಂಡಿದ್ದ ನಮ್ಮದೇ ಭೂಮಿಯನ್ನು ಮಠಕ್ಕೆ ನೀಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಗೆ ತಿರುಗೇಟು ನೀಡಿದರು.’ವಕ್ಸ್ ಮಂಡಳಿಗೆ ಸುಪ್ರೀಂ ಕೋರ್ಟ್ಗೂ ಮೀರಿದ ಪರಮಾಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ. ಪ್ರಧಾನಿಗಳಾಗಿದ್ದ ನೆಹರೂ, ಪಿ.ವಿ.ನರಸಿಂಹ ರಾವ್, ಮನಮೋಹನ ಸಿಂಗ್ ಅವರ ಕಾಲಾವಧಿಯಲ್ಲಿ ವಕ್ಸ್ ಮಂಡಳಿಗೆ ಸಂವಿಧಾನ ಮೀರಿದ ಹಕ್ಕುಗಳನ್ನು ನೀಡಿದ್ದರಿಂದ ದೇಶಕ್ಕೆ ಗಂಡಾಂತರ ಬಂದೊದಗಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟಿಕರಣದ ಮೂಲಕ ದೇಶದ್ರೋಹಿ ಕೆಲಸ ಮಾಡಿದೆ’ ಎಂದರು.”ಇಸ್ಲಾಂಗೆ ಇರುವುದು 1,500 ವರ್ಷಗಳ ಇತಿಹಾಸ ಮಾತ್ರ. ಅದಕ್ಕೂ ಮುಂಚೆ ಪ್ರಪಂಚದಲ್ಲೇ ಇಸ್ಲಾಂ ಇರಲಿಲ್ಲ. ಅಕ್ರಮಣ, ಯುದ್ಧದಿಂದ ಇಸ್ಲಾಂ 57 ರಾಷ್ಟ್ರಗಳಿಗೆ ವಿಸ್ತರಿಸಿದೆ.
ವಕ್ಸ್ ಮಂಡಳಿಯು ದೇಶದ ಬಡ ಮುಸ್ಲಿಮರಿಗೆ ಭೂಮಿ, ಶಿಕ್ಷಣ, ಉದ್ಯೋಗ ನೀಡುವ ಆಶಯ ಹೊಂದಿಲ್ಲ. ದೇಶದ 9.40 ಲಕ್ಷ ಎಕರೆ ಭೂಮಿಯನ್ನು ಕಬಳಿಸಿ, ಜನಸಂಖ್ಯೆ ಹೆಚ್ಚಳದ ಮೂಲಕ ಭಾರತದಲ್ಲೂ ಇಸ್ಲಾಂ ಪ್ರತಿಷ್ಠಾಪನೆ ಮಾಡುವುದು ಅದರ ಉದ್ದೇಶ’ ಎಂದು ಮುತಾಲಿಕ್ ಹೇಳಿದರು.’ರೈತರ ಕೃಷಿ ಭೂಮಿ, ಗರಡಿ ಮನೆ, ದೇವಸ್ಥಾನ, ಮಠದ ಆಸ್ತಿಗಳನ್ನು ವಕ್ಸ್ ಆಸ್ತಿಗಳೆಂದು ಗುರುತಿಸಲಾಗಿದ್ದು, ವಕ್ಸ್ ವೈರಸ್ ಇಡೀ ಸಮಾಜವನ್ನು ಅವರಿಸಿದೆ. ಇದಕ್ಕೆ ಕಡಿವಾಣ ಹಾಕಲುಪ್ರಧಾನಿ ನರೇಂದ್ರ ಮೋದಿಯವರು ವಕ್ಸ್ ಕಾಯ್ದೆಗೆ 44 ತಿದ್ದುಪಡಿ ತರಲು ಮುಂದಾಗಿದ್ದಾರೆ.
ಇದನ್ನು ಶ್ರೀಲಾಮ ಸೇನೆ ಬೆಂಬಲಿಸುವ ಜತೆಗೆ ಮಕ್ಕ ಭೂ ಕಬಳಿಕೆ ವಿರುದ್ಧ ಜನಹಾಗೃತಿ ಅಭಿಯಾನ ಹಮ್ಮಿಕೊಳ್ಳುತ್ತೇವೆ’ ಎಂದು ಘೋಷಿಸಿದರು.ಹಿಂದೂ ಯುವತಿಯರಿಗೆ ತ್ರಿಶೂಲ ದೀಕ್ಷೆ: ’ದೇಶದಲ್ಲಿ ಯುವತಿಯರನ್ನು ಅಪಹರಿಸಿ ಲವ್ ಜಿಹಾದ್ ಹೆಸರಲ್ಲಿ ಮೋಸಕ್ಕೆ ತಳ್ಳುವ ದೊಡ್ಡ ಜಾಲ ಕಾರ್ಯಪ್ರವೃತ್ತವಾಗಿದೆ. ಈ ಕುರಿತು ರಾಜ್ಯದ ನಾನಾ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಹಿಂದೂ ಯುವತಿಯರಿಗೆ ತ್ರಿಶೂಲ ದೀಕ್ಷೆ ನೀಡುತ್ತಿದ್ದೇವೆ’ ಎಂದು ಮುತಾಲಿಕ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ; ಮುತಾಲಿಕ್