ಧಾರವಾಡ - ಹುಬ್ಬಳ್ಳಿ

ವಿಪತ್ತು ನಿರ್ವಹಣೆಯಲ್ಲಿ ತಂಡದ ಸಮನ್ವಯ ಕಾರ್ಯ ಮಹತ್ವದ್ದು; ಆಧುನಿಕ ಉಪಕರಣಗಳು, ನುರಿತ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಗತ್ಯ

ವಿಪತ್ತು ನಿರ್ವಹಣೆಯಲ್ಲಿ ತಂಡದ ಸಮನ್ವಯ ಕಾರ್ಯ ಮಹತ್ವದ್ದು;  ಆಧುನಿಕ ಉಪಕರಣಗಳು, ನುರಿತ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಗತ್ಯ
Team coordination is important in disaster management; modern equipment, skilled human resources ar


ಧಾರವಾಡ ಫೆ.06: ವಿಪತ್ತುಗಳು ಆಕಸ್ಮಿಕವಾಗಿ ಘಟಿಸುವದರಿಂದ ತಕ್ಷಣ ಸ್ಪಂದಿಸಿ, ಜನ, ಪ್ರಾಣಿ, ಪಕ್ಷಿಗಳ ಪ್ರಾಣ, ಆಸ್ತಿಪಾಸ್ತಿಗಳನ್ನು ರಕ್ಷಿಸಲು ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನಗಳು ಸಹಾಯಕವಾಗುತ್ತವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು. 

ಅವರು ಇಂದು (ಫೆ.06) ಮಧ್ಯಾಹ್ನ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌.ಪಿ.ಸಿ.ಎಲ್‌.ಆಯಿಲ್ ಘಟಕದಲ್ಲಿ ಜಿಲ್ಲಾಡಳಿತದಿಂದ, ಮೆಽಽ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ​‍್ೋರೇಶನ್ ಲೀಂ. ಹಾಗೂ ವಿಜಯವಾಡದ ಎನ್‌ಡಿಆರ್‌ಎಫ್ ತಂಡದ ಸಂಯೋಗದಲ್ಲಿ ಆಯೋಜಿಸಿದ್ದ ಗ್ಯಾಸ್ ಸೋರಿಕೆ ಅವಘಡ ತಡೆಗಟ್ಟುವ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ವಿವಿಧ ರೀತಿಯಲ್ಲಿ ವಿಪತ್ತುಗಳು ಆಕಸ್ಮಿಕವಾಗಿ ಘಟಿಸಿದರು ಸಹ ಸಂಬಂಧಿಸಿದ ಇಲಾಖೆಗಳು ತಕ್ಷಣ ಸಮನ್ವಯ ಸಾಧಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕು. ವಿಪತ್ತು ನಿರ್ವಹಣೆಯಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಹಾಗೂ ಭಾಗವಹಿಸುವ ಕುರಿತು ಪುನರ್ ಮನನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಪತ್ತು ನಿರ್ವಹಣೆಯ ವಿವಿದ ಪ್ರಕಾರದ ಅಣುಕು ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು. 

ಅಪಘಾತ, ಟ್ಯಾಂಕರ್ ಸೋರಿಕೆ, ಅಗ್ನಿ ಅವಘಡ, ನೆರೆ ಮುಂತಾದ ವಿಪತ್ತುಗಳ ನಿರ್ವಹಣೆಗೆ ತಾಂತ್ರಿಕ ಮತ್ತು ಆಧುನಿಕ ಉಕರಣಗಳು ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಗತ್ಯವಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿವಿದ ರೀತಿಯ ಜೀವ ರಕ್ಷಕ ಉಪಕರಣ, ಸಾಧನ, ಸಲಕರಣೆಗಳನ್ನು ಅಗ್ನಿಶಾಮಕ ಇಲಾಖೆಗೆ ನೀಡಲಾಗಿದೆ ಎಂದು ಅವರು ಹೇಳಿದರು. 

 ಮುಖ್ಯವಾಗಿ ಕಂದಾಯ, ಪೊಲೀಸ್, ಕೈಗಾರಿಕೆ ಇಲಾಖೆ, ಆರೋಗ್ಯ, ಸಾರಿಗೆ ಮತ್ತು ಎನ್‌.ಡಿ.ಆರ್‌ಎಫ್, ಅಗ್ನಿಶಾಮಕ ಇಲಾಖೆಗಳು ಪರಸ್ಪರ ಸಂಪರ್ಕ ಮತ್ತು ಸಮನ್ವಯದಿಂದ ಕೆಲಸ ಮಾಡಬೇಕು. ಅಂದಾಗ ವಿಪತ್ತು ಸಂಭಿವಿಸಿದಾಗ ಹೆಚ್ವಿನ ಅನಾಹುತ, ಹಾನಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು. 

ಜಿಲ್ಲೆಯಲ್ಲಿ ಸಿಲಿಂಡರ್ ಬ್ಲಾಸ್ಟ್‌ ಪ್ರಕರಣಗಳು ಹೆಚ್ಚುತ್ತಿದ್ದು, ಸಿಲಿಂಡರ್ ಬಳಕೆ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಶಾಲಾ ಕಾಲೇಜುಗಳಲ್ಲಿ ತಿಳುವಳಿಕೆ, ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಭುವನೇಶ ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ವಂದಿಸಿದರು. 

ಅಣುಕು ಪ್ರದರ್ಶನದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಎನ್‌.ಡಿ.ಆರ್‌ಎಫ್ ತಂಡದ  ಕಮಾಂಡೆಂಟ್ ಪ್ರದೀಪ್ ಕುಮಾರ, ಹುಬ್ಬಳ್ಳಿ ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕ ರವೀಂದ್ರನಾಥ ರಾಠೋಡ, ಧಾರವಾಡ ಕಾರ್ಖಾನೆಗಳ ಜಂಟಿ ನಿರ್ದೇಶಕ ವೆಂಕಟೇಶ ರಾಠೋಡ,  ಹೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ವಿ ಪಾಗಿ, ರಾಯಪೂರು ಹೆಚ್‌.ಪಿ.ಸಿ.ಎಲ್ ಮುಖ್ಯಸ್ಥ ದೇವ ಧೃವ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಧಾರವಾಡ ತಹಶೀಲ್ದಾರ ಡಾ.ಡಿ.ಎಚ್‌. ಹೂಗಾರ, ಧಾರವಾಡ ತಾಲ್ಲೂಕು ವೈದ್ಯಾಧಿಕಾರಿ ಡಾ ಕೆ.ಎನ್‌.ತನುಜಾ, ಅಮರಗೋಳ ಘಟಕದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ ಕರಿಲಿಂಗಣ್ಣನವರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಾಲೋಚಕ ವೆಂಕಟೇಶ ಬುಳ್ಳಾ ಅವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ