ಮಕ್ಕಳ ಭವಿಷ್ಯದ ಏಳಿಗೆಯಲ್ಲಿ ಶಿಕ್ಷಕರ, ಪಾಲಕರ ಪಾತ್ರ ಪ್ರಮುಖ

ಮಕ್ಕಳ ಭವಿಷ್ಯದ ಏಳಿಗೆಯಲ್ಲಿ ಶಿಕ್ಷಕರ, ಪಾಲಕರ ಪಾತ್ರ ಪ್ರಮುಖ

ಲೋಕದರ್ಶನ ವರದಿ

ಬಳ್ಳಾರಿ 21:ಮಕ್ಕಳ ಭವಿಷ್ಯ ಶಿಕ್ಷಕರು ಮತ್ತು ಪಾಲಕರ ಕೈಯಲ್ಲಿದೆ ಅವರನ್ನು ಹೇಗೆ ರೂಪಿಸಿಬೇಕೆಂಬುದು ತಿಳಿದುಕೊಂಡರೆ ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬಹುದು ಎಂದು ಕಮ್ಮರಚೇಡು ಕಲ್ಯಾಣ ಮಠದ ಕಲ್ಯಾಣಸ್ವಾಮಿಗಳು ಅಭಿಪ್ರಾಯ ಪಟ್ಟರು. 

ಅಂದ್ರಾಳ್ನ ಮಾಡೆಲ್ ಪಬ್ಲಿಕ್ ಹೈಸ್ಕೂಲ್ನ 14ನೇ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರ ಪಾತ್ರ ಅತ್ಯಂತ ಮಹತ್ವದ್ದು ಅದನ್ನು ನಿಭಾಯಿಸುವಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು ಅವರನ್ನು ಚಿಕ್ಕ ವಯಸ್ಸಿನಲ್ಲೇ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಇದೇ ವೇಳೆ ಅವರು ಶಿಕ್ಷಕರಿಗೆ ಮತ್ತು ಪಾಲಕರಿಗೆ ಕಿವಿ ಮಾತು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಕಿಲರ್ೋಸ್ಕರ್ನ ಡೆಪ್ಯೂಟಿ ಮ್ಯಾನೇಜರ್ ಪಿ.ನಾರಾಯಣ, ಮಹಾನಗರಪಾಲಿಕೆ ಸದಸ್ಯರಾದ ಬಿ.ಸೀತಾರಾಮ್,  ಮಾಡೆಲ್ ಪಬ್ಲಿಕ್ ಹೈಸ್ಕೂಲ್ನ ಸಂಸ್ಥಾಪಕ ರಾದ ವಿ.ಹನುಮಂತರಾಯುಡು, ಅಧ್ಯಕ್ಷರಾದ ಸೋಮನಾಥ್, ಕಾರ್ಯದಶರ್ಿ ಜ್ಯೋತಿ, ಕ.ಸಾ.ಪಾ ನಿಕಟಪೂರ್ವ ಅಧ್ಯಕ್ಷರಾದ ನಿಷ್ಟಿ ರುದ್ರಪ್ಪ, ಚಿದಾನಂದ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಬೀಬೀ ಆಯೇಷಾ, ಶಿಕ್ಷಕರು, ಶಿಕ್ಷಕಿಯರು ಮತ್ತು ನೂರಾರು ಮಕ್ಕಳು ಅವರ ಪಾಲಕರು ಉಪಸ್ಥಿರಿದ್ದರು. ಕೊನೆಯಲ್ಲಿ ವಿದ್ಯಾಥರ್ಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


ಸುದ್ದಿ ಓದಿ