ಅಥಣಿ

ಸುಕನ್ಯಾ ವೃದ್ಧಾಶ್ರಮ: ವೃದ್ಧ ನಿರಾಶ್ರಿತರನ್ನು ಮಕ್ಕಳಂತೆ ಪೋಷಿಸುತ್ತಿರುವ ಬಿರಾದರ ದಂಪತಿ

ಸುಕನ್ಯಾ ವೃದ್ಧಾಶ್ರಮ: ವೃದ್ಧ ನಿರಾಶ್ರಿತರನ್ನು ಮಕ್ಕಳಂತೆ ಪೋಷಿಸುತ್ತಿರುವ ಬಿರಾದರ ದಂಪತಿ

ಲೋಕದರ್ಶನ ವರದಿ

ಸಂಬರಗಿ 04: ಕರ್ನಾಟಕ ಮಹಾರಾಷ್ಟ್ರದ ಗಡಿಗ್ರಾಮಗಳಲ್ಲಿ ನಿರಾಶ್ರಿತರು ಹಾಗೂ ಅನಾತ ವ್ಯಕ್ತಿಗಳಿಗೆ ಆಶ್ರಯ ನೀಡಿ ಅವರಿಗೆ ಆಧಾರ ಸ್ತಂಭವಾಗಿ ಸುಕನ್ಯಾ ವೃದ್ಧಾಶ್ರಮ. ಭರಮಕೋಡಿ ಗ್ರಾಮದಲ್ಲಿ ಪ್ರಾರಂಭವಾಗಿ ವೃದ್ಧ ಹಾಗೂ ನಿರಾಶ್ರಿತರಿಗೆ ಅನಕೂಲವಾಗಿದೆ.

ಭರಮಕೋಡಿ ಗ್ರಾಮದಲ್ಲಿ ಬುದ್ಧ ಬಸವ ಅಂಬೇಡ್ಕರ ಪ್ರತಿಷ್ಠಾನ ವತಿಯಿಂದ ಸುಕನ್ಯಾ ವೃದ್ಧಾಶ್ರಮ 50 ಹಾಸುಗೆಯ ವೃದ್ಧರಿಗೆ ವ್ಯವಸ್ತೆ ಮಾಡಲಾಗಿದೆ ಈಗಾಗಲೆ ಕೋಲ್ಲಾಪೂರ, ಸಾಂಗಲಿ, ವಿಜಯಪೂರ, ಧಾರವಾಡ ಬೆಳಗಾವಿ, ಜಿಲ್ಲೆಯಿಂದ ವೃದ್ಧರ ಹಾಗೂ ನಿರಾಶ್ರಿತರ ವ್ಯಕ್ತಿಗಳು ಬಂದ ನಂತರ ಮಾಹಾದೇವ ಬಿರಾದರ ಹಾಗೂ ಅವರ ಪತ್ನಿ ಭಾಗ್ಯವಂತಿ ಮಹಾದೇವ ಬಿರಾದರ ಸೇರಿ ವೃದ್ಧರಿಗೆ ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ವಂತ 2 ಎಕರೆ ಜಮಿನವನ್ನು ಮಾರಿ ವೃದ್ಧಾಶ್ರಮ ಪ್ರಾರಂಭ ಮಾಡಿದ್ದಾರೆ. ಸರಕಾರದ ಯಾವುದೇ ಸಹಾಯಧನ ಸಿಕ್ಕಿಲ್ಲ ಚಿಕ್ಕ ದಾನಿಯಿಂದ ವೃದ್ಧಾಶ್ರಮ ನಡೆಸಲಾಗುತ್ತಿದೆ. ಈ ವೃದ್ಧ್ದಾಶ್ರಮ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕನರ್ಾಟಕ ಇದೊಂದು ಆಶ್ರಯವಾಗಿದೆ. ಯಾವುದೇ ನಿರಾಶ್ರಿತ ವ್ಯಕ್ತಿ ಸುಕನ್ಯಾ ವೃದ್ಧಾಶ್ರಮಕ್ಕೆ ಕರೆತಂದು ನಿರಾಶ್ರಿತರಿಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.

ಈ ವೃದ್ಧಾಶ್ರಮದ ಅಧ್ಯಕ್ಷ ಭಾಗ್ಯವಂತಿ ಮಹಾದೇವ ಬಿರಾದರ ಇವರು ಹುಟ್ಟಿರುವ ಮಗುವಿನಂತೆ ಆಶ್ರಮದಲ್ಲಿರುವ ಎಲ್ಲರನ್ನೂ ಉಪಚರಿಸುತ್ತಿದ್ದಾರೆ. ಆ ಕಾರಣ ಇಲ್ಲಿ ವೃದ್ಧಾಶ್ರಮದಲ್ಲಿ ದಿನದಿಂದ ದಿನಕ್ಕೆ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಾಯಿದೆ. ಸದ್ಯದಲ್ಲಿ 4 ಮಹಿಳೆಯರು 10 ಜನ ಪುರುಷ್ಯರು ಇದ್ದಾರೆ. 4 ಕೊಠಡಿ ಇದ್ದು, ಇನ್ನೂ ಕೊಠಡಿಗಳ ಅವಶ್ಯಕತೆಯಿದೆ. ದಾನಿಗಳು ಮುಂದೆ ಬಂದು ಕೊಠಡಿ ನಿರ್ಮಾಣಕ್ಕೆ ಸಹಾಯಮಾಡಿ ಈ ವೃದ್ಧಾಶ್ರಮ ಮಾದರಿಯಾಗಿಸುವ ಗುರಿಹೊಂದಿದ್ದಾರೆ.

ಗದಗ ಜಿಲ್ಲೆಯ ಸುಕನ್ಯಾ ಬಸಲಿಂಗಯ್ಯಾ ಹಿರೇಮಠ ಇವರು, ಭಾಗ್ಯವಂತಿ ಮಹಾದೇವ ಬಿರಾದರ ಪತಿ ಪತ್ನಿ ಮಾಡುವ ಕೆಲಸವನ್ನು ನೋಡಿ, 1 ಎಕರೆ ಜಮೀನವನ್ನು ದಾನಮಾಡಿದ್ದಾರೆ. ಇಂತ ಮಹಾನ ವ್ಯಕ್ತಿ ಬಂದು ಸಹಾಯಕ್ಕೆ ನಿಂತಿದ್ದಾಳೆ. ಇನ್ನೂ ಹಲವರು ಸಹಾಯಕ್ಕೆ ಬಂದರೆ ಇದೊಂದು ಒಳ್ಳೆಯ ವೃದ್ಧಾಶ್ರಮವಾಗಲು ಸಾಧ್ಯವಿದೆ. ಜನರ ಸಹಕಾರ ಸಹಾಯ ಅತ್ಯವಶಕವಾಗಿದೆ.

ವೃದ್ಧಾಶ್ರಮ ಅಧ್ಯಕ್ಷ ಭಾಗ್ಯವಂತಿ ಮಹಾದೇವ ಬಿರಾದರ ಯಾವುದೇ ವ್ಯಕ್ತಿ ಹಸುವಿನಿಂದ ಬಳಲುಬಾರದು, ನಿರಾಶ್ರಿತರು ಬೀದಿಗೆ ಬರಬಾರದು ಎಂಬ ಕಾರಣಕ್ಕೆ ನಾನು ನನ್ನ ಪತಿದೇವರು ಸೇರಿ ಕೊನೆಹಂತದಲ್ಲಿ ಭಿಕ್ಷೆ ಪಾತ್ರೆ ಹಿಡಿದು ನಿರಾಶ್ರಿತರಿಗೆ ಆಶ್ರಯವಾಗಿ ವೃದ್ಧಾಶ್ರಮ ನಡೆಸಲು ಮುಂದಾಗಿದ್ದೆವೆ ಎಂದು ಹೇಳಿದರು.


ಸುದ್ದಿ ಓದಿ