ಬೈಲಹೊಂಗಲ

ಕಬ್ಬಿನ ಗದ್ದೆಗೆ ಬೆಂಕಿ: 30 ಎಕರೆ ಕಬ್ಬು ಸುಟ್ಟು ಕರಕಲು

ಕಬ್ಬಿನ ಗದ್ದೆಗೆ ಬೆಂಕಿ: 30 ಎಕರೆ ಕಬ್ಬು ಸುಟ್ಟು ಕರಕಲು

ಲೋಕದರ್ಶನ ವರದಿ

ಬೈಲಹೊಂಗಲ 25: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ 30 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಸೋಮವಾರ ನಡೆದಿದೆ. 

    ರೈತರಾದ ಚನ್ನಬಸಪ್ಪ ಮಲ್ಲೂರ, ರಾಯಪ್ಪ ಮಲ್ಲೂರ, ವೀರನಗೌಡ ಮಲ್ಲೂರ, ಮಲ್ಲೇಶಪ್ಪ ಬಗನಾಳ, ಗಿರೀಶ ಮಲ್ಲೂರ, ಬಸನಗೌಡ ಸಂಗನಗೌಡರ, ವೀರನಗೌಡ ಸಂಗನಗೌಡರ, ವಿಲಾಸ್ ಪಾಟೀಲ, ಶ್ರೀದೇವಿ ಬೆಳಗಾವಿ, ಬಾಬು ಸಾನಿಕೊಪ್ಪ, ಗಂಗವ್ವ ಮಲ್ಲೂರ ಅವರಿಗೆ ಸೇರಿದ ಒಟ್ಟು 30 ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಂದಾಜು 50 ಲಕ್ಷ ರೂ.ಹಾನಿಯಾಗಿದೆ. 

   ಬರಗಾಲದಿಂದ ತತ್ತರಿಸಿದ ರೈತರು ಸಾಲ, ಶೋಲ ಮಾಡಿ ಕಬ್ಬು ಬೆಳೆ ಬೆಳೆದ ರೈತರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ  30 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.  ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಬದುಕು.

   ಕಿತ್ತೂರು ಉತ್ಸವದ ನಿಮಿತ್ತ ಅಗ್ನಿ ಶಾಮಕ ದಳದ ವಾಹನಗಳು ಹೋಗಿದ್ದರಿಂದ ಭಯಾನಕ ರೀತಿಯಲ್ಲಿ ಬೆಂಕಿ ಆವರಿಸಿ ಹೆಚ್ಚಿನ ಹಾನಿ ಆಗಿದ್ದು, ಒಂದೇ ವಾಹನ 

ಬೆಂಕಿ ನಂದಿಸಲು ಹರ ಸಾಹಸ ಪಡಬೇಕಾಯಿತು. ಗ್ರಾಮಸ್ಥರ ಸಹಕಾರದಿಂದ 4 ಗಂಟೆ ಕಾಯರ್ಾಚರಣೆ ನಡೆಸಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ್ ತಪ್ಪಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

  **

 ಚಿವಟಗುಂಡಿ ಗ್ರಾಮದ ಜಮೀನಿನಲ್ಲಿ ಭಾಗಿದ ತಂತಿಗಳ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗಮನಕ್ಕೂ ತಂದರೂ ಕ್ಯಾರೇ ಎನ್ನದೇ ನಿರ್ಲಕ್ಷ್ಯ ಮಾಡಿದ್ದರಿಂದ ದೊಡ್ಡ ಅನಾಹುತ್ ಸಂಭಂವಿಸಿದೆ. ಒಟ್ಟು 30 ಎಕರೆ ಕಬ್ಬು ಸುಟ್ಟು ಭಸ್ಮ ಆಗಿದ್ದು, ಅಂದಾಜು 50 ಲಕ್ಷ ರೂ.ಮೌಲ್ಯದ ಬೆಳೆ ಹಾಗೂ ರೈತರ ಪಂಪ ಸೆಟ್, ಮೊಟಾರ, ಕರೆಂಟ್ ಬಾಕ್ಸ್ ಸುಟ್ಟು ಹೋಗಿವೆ. ಸರಕಾರ ಕಬ್ಬು ಸುಟ್ಟ ಎಲ್ಲ ರೈತರಿಗೆ ಪರಿಹಾರ ವಿತರಿಸುವುದಾಗಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು  ಸಣ್ಣಗೌಡ ಸಂಗನಗೌಡರ ಅಗ್ರಹಿಸಿದ್ದಾರೆ 

ಸುದ್ದಿ ಓದಿ