ಯಶಸ್ವಿಯಾಗಿ ಪೂರ್ಣಗೊಂಡ ಮಹಿಳಾ ಬ್ಯೂಟಿಪಾರ್ಲರ್ ತರಬೇತಿ ಶಿಬಿರ

ಯಶಸ್ವಿಯಾಗಿ ಪೂರ್ಣಗೊಂಡ ಮಹಿಳಾ ಬ್ಯೂಟಿಪಾರ್ಲರ್ ತರಬೇತಿ ಶಿಬಿರ

ಲೋಕದರ್ಶನ ವರದಿ

ಬಳ್ಳಾರಿ 24:ಶ್ರೀ ಮಾತೃ ಮಹಿಳಾ ಮಂಡಳಿಯ ವತಿಯಿಂದ ಮಹಿಳೆಯರಿಗಾಗಿ ವಿಶೇಷವಾಗಿ ಬ್ಯೂಟಿಪಾರ್ಲರ್ ತರಬೇತಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ವಿಶೇಷ ಅತಿಥಿಗಳಾದ ಶ್ರೀಯುತ ಚಂದ್ರಶೇಖರ್, ಸಿಂಡ್ ನಿದರ್ೆಶಕರು ಮತ್ತು ಶ್ರೀಮತಿ ನಾಗವೇಣಿ ಜಿಲ್ಲಾ ಅಭಿವೃದ್ಧಿ ನಿಗಮ ಡೆವಲಪ್ಮೆಂಟ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀಮತಿ ಚಂದ್ರಿಕ ಚಂದ್ರಕಾಂತ್, ಸೋದರಿ ನಿವೇದಿತಾ ಪ್ರತಿಷ್ಠಾನ ಜಿಲ್ಲಾ ಸಂಚಾಲಕರು, ಶ್ರೀಮತಿ ಪುಷ್ಪಲತಾ ಶ್ರೀ ಮಾತೃ ಮಹಿಳಾ ಮಂಡಳಿ ಅಧ್ಯಕ್ಷರು ಇವರುಗಳ ಕೈಯಿಂದ ಶ್ರೀಮತಿ ಸುಧಾರಾಣಿ ನೇತೃತ್ವದಲ್ಲಿ ನಡೆದ ಬ್ಯೂಟಿಪಾರ್ಲರ್ನ ಒಂದು ತಿಂಗಳು ತರಬೇತಿ ಪಡೆದ ಪ್ರಶಿಕ್ಷಣಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾದ ಚಂದ್ರಶೇಖರ್ ಅವರು ಉಚಿತವಾಗಿ ತಮ್ಮ ಸಂಸ್ಥೆಯಿಂದ ನೀಡುವ ತರಬೇತಿಗಳು ಮತ್ತು ಯಶಸ್ವಿಯಾದ ಬಗ್ಗೆ ಮತ್ತು ತರಬೇತಿಯಿಂದಾಗಿರುವ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಸಕಾರಾತ್ಮಕವಾದ ವಿವರಣೆ ನೀಡಿ, ಪ್ರಶಿಕ್ಷಣಾಥರ್ಿಗಳಿಗೆ ಮಾರ್ಗದರ್ಶನ ನೀಡಿದರು. ಮತ್ತು ಜಿಲ್ಲಾ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಶ್ರೀಮತಿ ನಾಗವೇಣಿಯವರು ತಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವತಿಯಿಂದ ಸಿಗುತ್ತಿರುವ ಅನುಕೂಲ ಸೌಲಭ್ಯಗಳು ಹಾಗೂ ಅವುಗಳ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ಮಹಿಳೆಯರಲ್ಲಿ ಸಕಾರಾತ್ಮಕ ಧೋರಣೆ ತುಂಬುತ್ತಾ ಅತ್ಯಂತ ಉತ್ಸಾಹದಿಂದ ಮಾರ್ಗದರ್ಶನ ನೀಡುತ್ತಾ ತಮ್ಮ ಸಹಕಾರ ಸದಾ ಇರುವುದಾಗಿ ಭರವಸೆ ನೀಡಿದರು.

ಸುದ್ದಿ ಓದಿ