ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳುವುದನ್ನು ಬಿಟ್ಟು ಕಾಲಹರಣ ಮಾಡಬಾರದು
ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳುವುದನ್ನು ಬಿಟ್ಟು ಕಾಲಹರಣ ಮಾಡಬಾರದು
ಹೂವಿನಹಡಗಲಿ 12: ಕಾಲೇಜು ಜೀವನ ಕಾಲ ಕಳೆಯುವ ಸಮಯ ಎಂದು ಇಂದಿನ ವಿದ್ಯಾರ್ಥಿಗಳು ಭಾವಿಸಿದ್ದಾರೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಪಟ್ಟಣದ ಜಿಬಿಆರ್ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಹೊರತು ಸುಮ್ಮನೇ ಕಾಲಕಳೆಯ ಬಾರದು ಎಂದರು. ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ಐದು ಲಕ್ಷ ಮೊತ್ತದ ದತ್ತಿ ಹಣವನ್ನು ಠೆವಣಿ ಇದ್ದು ಮಹಾವಿದ್ಯಾಲಯದಲ್ಲಿ ಅತಿ ಹಚ್ವು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ, ವೀ.ವಿ ಸಂಘದ ಮಾಜಿ ಸಹ ಕಾರ್ಯದರ್ಶಿ ಐಗೋಳ್ ಚಿದಾನಂದ, ವಕೀಲ ಸಿ.ಕೆ.ಎಂ.ಬಸವಲಿಂಗಯ್ಯ ಸ್ವಾಮಿ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಕ್ಕಿ ಶಿವಕುಮಾರ್, ಸದಸ್ಯ ಕನ್ನಿಹಳ್ಳಿ ಮುದುಕಪ್ಪ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರರಿದ್ದರು.