ವಿದ್ಯಾಥರ್ಿಗಳೇ ಪರಿಸರ ಸಂರಕ್ಷಣೆಯ ಅರಿವು ಹೊಂದಿರಿ: ತಿಮ್ಮಪ್ಪ

ವಿದ್ಯಾಥರ್ಿಗಳೇ ಪರಿಸರ ಸಂರಕ್ಷಣೆಯ ಅರಿವು ಹೊಂದಿರಿ: ತಿಮ್ಮಪ್ಪ

ಬಳ್ಳಾರಿ 19:ಪರಿಸರವು ಪ್ರಕೃತಿದತ್ತವಾಗಿದ್ದು, ಅದು ಜೀವವೈವಿಧ್ಯವನ್ನು ಹೊಂದಿದೆ. ಇದರಲ್ಲಿ ವಾಯು, ಮಾಲಿನ್ಯ, ಅರಣ್ಯ ನಾಶ, ಮತ್ತಿತರೆ ಕಾರಣಗಳಿಂದಾಗಿ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಗಟ್ಟಲು ವಿದ್ಯಾಥರ್ಿ ಸಮುದಾಯ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾಥರ್ಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಬೇಕೆಂದು ಬಳ್ಳಾರಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಕೆ.ತಿಮ್ಮಪ್ಪ ತಿಳಿಸಿದರು. 

ಬಳ್ಳಾರಿ ತಾಲ್ಲೂಕಿನ ಮೋಕಾ ಗ್ರಾಮದಲ್ಲಿರುವ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ (ಪರಿಸರ ಕೂಟ)ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಮತ್ತು ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸುವ ವಿದ್ಯಾಥರ್ಿಗಳ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಹಗರಿ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ರವಿಶಂಕರ್ರವರು ಮಾತನಾಡಿ, ಸಾವಯವ ಕೃಷಿಯಿಂದ ಮನುಷ್ಯ ಆರೋಗ್ಯ ವೃದ್ಧಿಸುತ್ತದೆ. ಆದ್ದರಿಂದ ರಸಗೊಬ್ಬರ ಮತ್ತು ಕೀಟನಾಶಕಗಳ ಬದಲಾಗಿ ಜೈವಿಕ ಎರೆಹುಳು ಗೊಬ್ಬರವನ್ನು ಬಳಸುವ ಮೂಲಕ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಬೇಕೆಂದು ಕರೆನೀಡಿದರು.  ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ  ಡಿ.ಶಿವಮೂತರ್ಿ ಅವರು ವಾಯು ಮಾಲಿನ್ಯ ಮತ್ತು ಜಲಮಾಲಿನ್ಯದ ದುಷ್ಪರಿಣಾಮಗಳನ್ನು ತಿಳಿಸಿ ಅದನ್ನು ನಿವಾರಿಸಲು ವಿದ್ಯಾಥರ್ಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಜೀವವೈವಿಧ್ಯತೆಯ ಸಂರಕ್ಷಣೆಯ ಸಂಘದ ಅಧ್ಯಕ್ಷರಾದ ಜಿ.ವಿಷ್ಣುಮೂತರ್ಿ ಅವರು ವಿದ್ಯಾಥರ್ಿಗಳಿಗೆ ಜೊತೆ ಸಂವಾದ ನಡೆಸಿ ಪರಿಸರದಲ್ಲಿ ಜೀವವೈವಿದ್ಯತೆಯ ಬಗ್ಗೆ ಕೂಲಂಕುಷವಾಗಿ ತಿಳಿಸಿದರು. ಈ ಕಾರ್ಯಕ್ರಮದ ನಿಮಿತ್ತ ನಡೆದ ಪ್ರಬಂಧ ಮತ್ತು ಘೋಷಣೆಯ ಸ್ಪಧೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಹನುಮಂತರೆಡ್ಡಿ ವಹಿಸಿದ್ದರು.  ಕಾರ್ಯಕ್ರಮದ ಸಂಯೋಜಕರಾಗಿ  ನಾಗೇಶ್ವರರಾವ್  ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಂ.ಸಿ.ರಂಗನಾಥ ಸ್ವಾಗತಿಸಿದರು. ನಟರಾಜ್ ವಂದಿಸಿದರು. ಸ್ವಪ್ನ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ