ಯರಗಟ್ಟಿ

ಸಮರ್ಪಕ ಬಸ್ ವ್ಯವಸ್ಥೆಗೆ ಪೋಲಿಸರ ಮೋರೆಹೊದ ವಿದ್ಯಾರ್ಥಿಗಳು

ಸಮರ್ಪಕ ಬಸ್ ವ್ಯವಸ್ಥೆಗೆ ಪೋಲಿಸರ ಮೋರೆಹೊದ ವಿದ್ಯಾರ್ಥಿಗಳು

ಲೋಕದರ್ಶನ ವರದಿ

ಯರಗಟ್ಟಿ 08: ಸಮೀಪದ ಕೋರಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆ ವೇಳೆಗೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೆ ಅರ್ಧ ದಿನದಷ್ಟು ಕಾಲ ನಿಲ್ದಾಣದಲ್ಲಿ ಕಳೆದು ಶಾಲಾ ಅಭ್ಯಾಸದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಆಗುತ್ತಿಲ್ಲಾ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಲಕರು ಮನವಿ ಮಾಡಿಕೊಂಡರೂ ಪರಿಹಾರ ಸಿಗದಕಾರಣ ವಿದ್ಯಾರ್ಥಿಗಳು ಮತ್ತು ಪಾಲಕರು ಸ್ಥಳಿಯ ಪೋಲಿಸ್ ಠಾಣೆಗೆ ಬಂದು ರಸ್ತೆ ತಡೆ ಮಾಡುತ್ತೇವೆ ಇಲ್ಲದಿದ್ದರೆ ತಮಗೆ ಪರಿಹಾರ ಮಾಡಿಕೊಡಬೇಕು ಎಂದು ಅಧಿಕಾರಿಗಳ ಮೊರೆಹೋದರು.

ಪಿಎಸ್ಐ. ಆಯ್.ಎಂ.ಹಿರೇಗೌಡರ ಬಾಗಲಕೋಟಿ, ಧಾರವಾಡ ಮತ್ತು ಬೆಳಗಾವಿ ಸಾರಿಗೆ ಸಂಸ್ಥೆಯ ಡಿಟಿಒಗಳ ಜೊತೆ ನೇರವಾಗಿ ಮಾತನಾಡಿ ಎರಡು ದಿನಗಳಲ್ಲಿ ವ್ಯವಸ್ಥೆ ಮಾಡುವಂತೆ ವಿನಂತಿಸಿದರು. ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೆ ತೆರನಾದ ಬಸ್ ತಡೆಹಿಡಿಯುವದು, ಬಂದ ಮಾಡುವದನ್ನು ಮಾಡಬೇಡಿ ಎಂದರು. 

ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಕರೆಪ್ಪಾ ಚಿಲಕಂಡಿ, ಬಸವರಾಜ ಇಟಗೌಡರ, ಬಸಪ್ಪಾ ಕುರಿ ಮತ್ತು ಸನ್ನನಾಯ್ಕರ ಇದ್ದರು. 

ಸುದ್ದಿ ಓದಿ