ವಿದ್ಯಾರ್ಥಿ ನಿಲಯ, ಕಲ್ಯಾಣಮಂಟಪ ನಿರ್ಮಾಣ
ಬಳ್ಳಾರಿ 27: ರೆಡ್ಡಿ ಜನಸಂಘದಿಂದ ನಗರದಲ್ಲಿ ವಿದ್ಯಾಥರ್ಿನೀಯರಿಗೆ ವಸತಿನಿಲಯ ಮತ್ತು ಸುಸಜ್ಜಿತ ಕಲ್ಯಾಣಮಂಟಪವನ್ನು ನಿಮರ್ಿಸಲಾಗುತ್ತದೆ ಎಂದ ಅವರು ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಮತ್ತು ಕಾರ್ಯಧ್ಯಕ್ಷ ಗಾಲಿ.ಸೋಮಶೇಖರರೆಡ್ಡಿ ತಿಳಿಸಿದರು.
ನಗರದ ಡಾ|| ರಾಜಕುಮಾರ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ 1952ರಲ್ಲಿ ಸ್ಥಾಪನೆಗೊಂಡ ರೆಡ್ಡಿ ಜನಸಂಘ ಸಹಕಾರದಿಂದ ಮೂರು ಎಕರೆ ಜಮೀನು ಪಡೆದಿತ್ತು. ಇಲ್ಲಿ ಈ ಮೊದಲು ವಸತಿನಿಲಯ ಮಾತ್ರವಿತ್ತು. ನಂತರ 1992ರಲ್ಲಿ ಆಂಗ್ಲಮಾದ್ಯಮ ಶಾಲೆಯನ್ನು ಆರಂಭಿಸಿ ಈಗ 950ಕ್ಕೂ ಹೆಚ್ಚು ವಿದ್ಯಾಥರ್ಿಗಳು ಈ ಶಾಲೆಯಲ್ಲಿ ಅಭ್ಯಾಸಮಾಡುತ್ತಿದ್ದಾರೆ. ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ವಸತಿನಿಲಯಗಳ ಕೊರತೆಯಿಂದ ಮುಂದಿನ ವಿದ್ಯಾಭ್ಯಾಸ ನಿಲ್ಲಿಸುತ್ತಿರುವ ಕಾರಣ ಈ ಆವರಣದಲ್ಲಿಯೇ ವಿದ್ಯಾಥರ್ಿನೀಯರಿಗೆ ವಸತಿನಿಲಯ ನಿಮರ್ಾಣ ಮಾಡಲು ಮುಂದಾಗಿದ್ದು ಇದಕ್ಕೆ ರಾಜ್ಯಸಭಾ ಸದಸ್ಯೆ ಕೆ.ಸಿ.ರಾಮಮೂತರ್ಿ ಅವರು 25 ಲಕ್ಷ ರೂ ಅನುದಾನ ನೀಡಿದ್ದಾರೆ. ಅದೇ ರೀತಿ ಊಟದ ಸಭಾಂಗಣ ನಿಮರ್ಾಣಕ್ಕೆ ರಾಜ್ಯಸಭಾ ಸದಸ್ಯ ಕುಪೇಂಧ್ರರೆಡ್ಡಿ 15 ಲಕ್ಷ ರೂಗಳನ್ನು ನೀಡಿದ್ದಾರೆ. ಇದೇ ಆವರಣದಲ್ಲಿ 8 ರಿಂದ 10 ಕೋಟಿ ರೂಗಳ ವೆಚ್ಚದಲ್ಲಿ ಹವಾನಿಯಂತ್ರಿತಾ ಕಲ್ಯಾಣಭವನವನ್ನು ನಿಮರ್ಾಣ ಮಾಡಲಿದ್ದು ಈ ಕಾಮಗಾರಿಗಳಿಗೆ ಬರುವ ಯುಗಾದಿ ಹಬ್ಬದ ದಿನ ವೇಮನಾನಂದಸ್ವಾಮಿಜೀ ಅವರ ಸಾನಿಧ್ಯದಲ್ಲಿ ಭೂಮಿಪೂಜೆ ನಡೆಸಲಿದ್ದೇವೆ ಎಂದು ವಿವರಿಸಿದರು.
ಅಂತಯೇ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಕೌಶಲ್ಯ ತರಬೇತಿ ಕೇಂದ್ರವನ್ನು ಇದೇ ಆರವಣದಲ್ಲಿ ತೆರೆಯಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ರೆಡ್ಡಿಜನ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.