ಮಗುವಿಗೆ ಅನ್ಯ ಭಾಷೆ ಗ್ರಹಿಸುವಂತೆ ಒತ್ತಡ

ಮಗುವಿಗೆ ಅನ್ಯ ಭಾಷೆ ಗ್ರಹಿಸುವಂತೆ ಒತ್ತಡ

ಲೋಕದರ್ಶನ ವರದಿ

ಬಳ್ಳಾರಿ 08: ಮಾತೃ ಭಾಷೆಯಲ್ಲಿ ಆಗತಾನೆ ಬೆರಗಿನಿಂದ ಹೊರ ಜಗತ್ತನ್ನು ನೋಡುವ, ಯೋಚಿಸುವ ಎಳೆಯ ಮಗುವಿನ ಮೇಲೆ ತನ್ನದಲ್ಲದ ತನ್ನ ಪರಿಸರದಲ್ಲಿಲ್ಲದ ಅನ್ಯ ಭಾಷೆಯಲ್ಲಿ ವಿಷಯವನ್ನು ಗ್ರಹಿಸುವಂತೆ ಒತ್ತಡ ಹೇರುವುದು, ಆ ಮಗುವಿನ ಮಾನಸಿಕ ಪರಿಸರದ ವಿಕಾಸದ ಮೇಲೆ ಅಹಿತಕರ ಪರಿಣಾಮ ಭೀರುತ್ತದೆಂಬುದು ಜಗತ್ತಿನ ಹಲವು ಅಧ್ಯಯನಗಳು ಹೇಳುತ್ತಿರುವಾಗ ಸರಕಾರದ ಈ ನಡೆ ಸಾಧುವಾಗಿಲ್ಲ. 

ಅಪಾರವಾದ ತ್ಯಾಗ ಬಲಿದಾನದ ಹೋರಾಟಗಳ ಮೂಲಕ ರೂಪುಗೊಂಡ ಬಾಷಾವಾರು ಪ್ರಾಂತಗಳ ರಚನೆಯ ಉದ್ದೇಶಕ್ಕೆ ಕೂಡಾ ಸರಕಾರದ ಈ ನಡೆ ತದ್ವಿರುದ್ದವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಉಳಿಸಿ ಬೆಳೆಸಬೇಕಾದ ರಾಜ್ಯ ಸರಕಾರವೇ ಇಂತಹ ಕ್ರಮಗಳ ಮೂಲಕ ಅದರ ಮೇಲಿನ ದಾಳಿಗೆ ಕಾರಣವಾಗುತ್ತಿರುವುದನ್ನು ತೀವ್ರವಾಗಿ ಪ್ರತಿರೋಧಿಸಬೇಕಾಗಿದೆ. 

ಬೇಡಿಕೆಗಳು: 

ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವ ನೀತಿಯನ್ನು ಹಿಂಪಡೆಯಬೇಕು, ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ನಿಧರ್ಾರ ಹಿಂಪಡೆದು ಶಾಲೆಗಳಿಗೆ ಉತ್ತೇಜನ ನೀಡುವುದಕ್ಕೆ ಪ್ರಾತಿನಿದ್ಯ ವಹಿಸಬೇಕು, ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಕಾಲೇಜು ತೆರೆಯಲು ಕ್ರಮ ವಹಿಸಬೇಕು, ಅನುದಾನಿತ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಬಿ.ಓ. ಇಲಾಖೆ ನಿಯಂತ್ರಿಸಬೇಕು, ಗಂಭೀರ ಸಮಸ್ಯೆಗಳಾಗಿ ಕಾಡುತ್ತಿರುವ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ನಿವೇಶನ, ನಿರುದ್ಯೋಗ ಬರಗಾಲದಂತಹ ಸಮಸ್ಯೆಗಳ ಬಗ್ಗೆ ಚಚರ್ಿಸದೆ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಪ್ರಯತ್ನದ ಬಗ್ಗೆ ಹೆಚ್ಚು ರಾಜ್ಯಪಾಲರು ಬಾಷಣ ಮಾಡಿರುವುದು ಸಿ.ಪಿ.ಐ.ಎಂ. ಖಂಡಿಸುತ್ತದೆ, ಆರೋಗ್ಯದ ಹಿತದೃಷ್ಠಿಯಿಂದ ನಗರದಲ್ಲಿ ತಗ್ಗು-ಗುಂಡಿಗಳಿಂದ ಕೂಡಿದ ರಸ್ತೆಗಳನ್ನು ಪುನಶ್ಚೇತನ ಮಾಡಲು ಕ್ರಮ ವಹಿಸಬೇಕು 100 ಹಾಸಿಗೆ ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದಜರ್ೆಗೆ ಏರಿಸಿ ಅಗತ್ಯ ವೈದ್ಯೋಪಕರಣಗಳನ್ನು ಒದಗಿಸಲು ಸಕರ್ಾರ  ಮುಂದಾಗಬೇಕು. 


ಸುದ್ದಿ ಓದಿ