ಹೂವಿನ ಹಡಗಲಿ

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಫಲಿತಾಂಶ

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಫಲಿತಾಂಶ

ಹೂವಿನ ಹಡಗಲಿ 02 :  ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪ್ರತಿಷ್ಠಿತ ಸಾಂಸೃತಿಕ ಸೈಕ್ಷಣಿಕ, ಮತ್ತು ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಭಾನುವಾರ ದಂದು ಜರುಗಿದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ -19, ಶೀರ್ಷಿಕೆ ಅಡಿಯಲ್ಲಿ ವರ್ಣ ರಂಜಿತವಾದ ಮುಂಜಾವಿನಲ್ಲಿ ಉದಯಿಸುತ್ತಿರುವ ಸೂರ್ಯ    ಚಿತ್ರ ರಚನೆ ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು. ಈ ಒಂದು ಅವಿಸ್ಮರಣೀಯ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನು ಗುರುತಿಸುವ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯೇಂತ ಅಷ್ಟೇ ಅಲ್ಲದೇ ಅಂತರಾಜ್ಯ ಚಿತ್ರ ಕಲಾವಿದರು ಭಾಗವಹಿಸಿದ್ದರು. 

ಇಂದು ಜರುಗಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಬಾಗಲಕೋಟ ಜಿಲ್ಲೆಯ ರಬಕವಿಯ ಪ್ರವೀಣ್ ಗೋಡಗೇರಿ, ಹಾಸನದ ಕುಮಾರಿ ಸೌಮ್ಯ ಎಸ್, ಗದಗ ಬೆಟಗೇರಿಯ ಅನನ್ಯ ರಾಘವೇಂದ್ರ ಪಾಲನಕರ, ಯಾದಗಿರಿಯ ಚೈತ್ರಾ ಗೋಪಾಳಪುರ,  ದ್ವಿತೀಯ ಸ್ಥಾನದಲ್ಲಿ ಕುಮಾರಿ  ಚಿನ್ಮಯಿ ಎನ್ ಮಂಡ್ಯ.  ವರ್ಷಾ ಬಸವರಾಜ್ ಕೋತಬಾಳ್ ಗದಗ. ಪ್ರಜ್ವಲ್ ರಮೇಶ್ ಜುಟ್ಟಲ್‌. ತೃತೀಯ ಸ್ಥಾನದಲ್ಲಿ .ಸಾವಿತ್ರಮ್ಮ ಓಂಕಾರ ಅರಸೀಕೆರೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣದ ನಂದಿತಾ,ವಿ ಲಕ್ಕನಗೌಡ, ರೋಹಿತ್ ಎಂ ಮಲ್ಲನಗೌಡರ ಕ್ರಮವಾಗಿ ವಿಜೇತರಾಗಿರುವರು 

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಯವರು ಪ್ರತಿವಾರವು ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ, ಚಿತ್ರಕಲಾ ಸ್ಪರ್ಧೆ ನಮ್ಮ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸುತ್ತಾ  ವಿಶಿಷ್ಟ ಚಿತ್ರಕಲೆಯನ್ನು ರಚಿಸುವ ಮೂಲಕ ವಿಜೇತರಾಗಿ ಪ್ರಶಸ್ತಿ ಪ್ರಧಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.    ಗಿರಿಜಾ ನಿರ್ವಾಣಿ ಯವರು ಇಂದಿನ ಚಿತ್ರಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. 


ಸುದ್ದಿ ಓದಿ