ಬ್ಯಾಡ್ಗಿ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: 3ನೇ ಸ್ಥಾನ ಪಡೆದ ಮಹಿಳಾ ತಂಡಕ್ಕೆ ಅಭಿನಂದನೆ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: 3ನೇ ಸ್ಥಾನ ಪಡೆದ ಮಹಿಳಾ ತಂಡಕ್ಕೆ ಅಭಿನಂದನೆ

ಬ್ಯಾಡಗಿ:ರಾಜ್ಯ ಸರ್ಕಾರ ಕ್ರೀಡಾನೀತಿ ತಿದ್ದುಪಡಿ ತರುವ ಮೂಲಕ ಓಲಂಪಿಂಕ್, ಕಾಮನವೆಲ್ತ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿರಿ ತಹಶೀಲ್ಧಾರ ನಂತಹ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಮಹತ್ತರ ನಿಧರ್ಾರವನ್ನು ಸ್ವಾಗತಿಸುತ್ತೇನೆ ಎಂದು ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.

 ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕ ಸೊನ್ನ ಗ್ರಾಮದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. 

 ಆರ್ತಿ ಕ ಸಂಕಷ್ಟಕ್ಕೆ ಸಿಲುಕಿದ ಬಹಳಷ್ಟು ಕ್ರೀಡಾಪಟುಗಳು ಬದುಕಿನ ಭದ್ರತೆಯಿಲ್ಲದೇ ನೇಪಥ್ಯಕ್ಕೆ ಸರಿದ ಸಾಕಷ್ಟು ಉದಾಹರಣೆಗಳಿವೆ, ಇವೆಲ್ಲಗಳ ಮಧ್ಯೆ ಹರಿಯಾಣ ಮತ್ತು ಪಂಜಾಬ್ ಸರ್ಕಾ ರಗಳು ಕ್ರೀಡಾಪಟುಗಳಿಗೆ ಪೋಲಿಸ್ ಸೇವೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದವು, ಆದರೆ ಅವುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಕನರ್ಾಟಕ ಸಕರ್ಾರ ಆಡಳಿತಾತ್ಮಕ ಹುದ್ದೆಗಳನ್ನು ನೀಡಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಪ್ರತಿಭೆಗಳನ್ನು ಗುರ್ತಿಸುವ ಕೆಲಸವಾಗಬೇಕು:ಜೀವ ಮುಡುಪಾಗಿಟ್ಟು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳ ಹೆಸರು ಮತ್ತು ಸಾಧನೆ ಜನಮಾನಸದಲ್ಲಿ ಬಹುಕಾಲ ಉಳಿಯದಿರುವುದು ದುರಂತದ ಸಂಗತಿ, ಹೀಗಾಗಿ ಸಂಬಂಧಿಸಿದ ಕ್ರೀಡೆ ಗಳಲ್ಲಿ ವಿಶೇಷ ತರಬೇತಿ ಪಡೆದಂತಹ ತರಬೇತುದಾರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶ ದಲ್ಲಿರುವ ಪ್ರತಿಭೆ ಗುರ್ತಿಸುವ ಕೆಲಸದ ಜೊತೆಗೆ ಅವರ ಸಾಧನೆಗಳು ಇನ್ನೊಬ್ಬರಿಗೆ ಸ್ಪೂತರ್ಿದಾಯಕವಾಗುವಂತೆ ಕ್ರಮ ಜರುಗಿಸಬೇಕಾಗಿದೆ ಎಂದರು. ತಾಪಂ.ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಕೋಚ್ ಮಂಜುಳ ಬಣಕಾರ, ಸಹಾಯಕ ಕೋಚ್ ಮೌನೇಶ ಕಮ್ಮಾರ ಸೇರಿದಂತೆ ವಿಜೇತ ಕ್ರೀಡಾಪಟುಗಳು ಉಪಸ್ಥಿತರಿದ್ದರು.



ಸುದ್ದಿ ಓದಿ