ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ "ಡಾಕ್ಟರ್ ಬಂದ್ರು ಡಾಕ್ಟರ್ ಆಯ್ಕೆ
ಧಾರವಾಡ: ಓಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೇಗೆ ನಡೆದ ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2018 ದಲ್ಲಿ ಧಾರವಾಡದ ಆದರ್ಶ ಪಾಠಾಭ್ಯಾಸ ಪ್ರಾಥಮಿಕ ಶಾಲೆಯವರು ಪ್ರಸ್ತುತಪಡಿಸಿದ ನಾಟಕ ಡಾಕ್ಟರ್ ಬಂದ್ರು ಡಾಕ್ಟರ್ ಪ್ರಥಮ ಸ್ಥಾನಗಳಿಸಿ ಮೈಸೂರಿನಲ್ಲಿ ಇದೇ ತಿಂಗಳು ದಿ. 22-24ರವರೆಗೆ ನಡೆಯುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳಲಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಈ ನಾಟಕದ ನಿದರ್ೇಶನವನ್ನು ಯುವ ನಿದರ್ೇಶಕಿ ಅನೀತಾ ಆರ್. ಮಾಡಿದ್ದು ರಚನೆ: ಬಿ.ಬಿ.ಚಕ್ರಸಾಲಿ, ಸಂಗೀತ ಯುವ ಕಲಾವಿದ ಯಮನಪ್ಪ ಜಾಲಗಾರ ಮಾಡಿದ್ದರು. ಡೆಂಗ್ಯೂ ಜ್ವರದ ಬಗ್ಗೆ ಹಳ್ಳಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಕ್ಷಣ ಕ್ಷಣಕ್ಕೂ ಅರಿವು ಮೂಡಿಸುವ ಈ ನಾಟಕ ಅತ್ಯಂತ ಸೂಕ್ಷ್ಮತೆಯಿಂದ ಗ್ರಾಮೀಣ ಭಾಗದಲ್ಲಿಯ ವೇಷಭೂಷಣ ಸರಳ ರಂಗಸಜ್ಜಿಕೆಗೆ ಒತ್ತು ನೀಡಿದ ನಿದರ್ೇಶಕರು ಸರಳ ರಂಗದ ಮೇಲೆ ಪ್ರದರ್ಶನ ನೀಡಿದ ಮಕ್ಕಳ ಅಭಿನಯ ಮೆಚ್ಚುವಂತಹದ್ದು.
ಈಗಾಗಲೇ ಈ ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಅಭಿನಯಿಸಿ ಡೆಂಗ್ಯೂ ಹೇಗೆ ಹರಡುತ್ತದೆ ಎನ್ನುವ ಕುರಿತು ಅರಿವು ನೀಡಿ ಗಣ್ಯವ್ಯಕ್ತಿಗಳಿಂದ ಪ್ರಶಂಸೆಗಳಿಸಿಕೊಂಡಿದೆ. ಈ ನಾಟಕದಲ್ಲಿ ಪಾತ್ರವಹಿಸಿದ ಮಕ್ಕಳಲ್ಲಿ ಸ್ನೇಹಾ ಮುಮ್ಮಿಗಟ್ಟಿ ಡಾಕ್ಟರ್ರಾಗಿ ಮನೊಜ್ಞ ಅಭಿನಯ ನೀಡಿದರು. ಇನ್ನೂಳಿದಂತೆ ವಿದ್ಯಾ ಮಾದರ: ಕಿರಿಯ ಸೊಸೆ, ಸ್ವಾತಿ ಮುದನೂರ: ಹಿರಿಯ ಸೋಸೆ, ಸಂಜನಾ ಮುದನೂರ: ಸುಂದರಿ, ನಂದಿತಾ ಹಲಗಲಿ: ಸೊಳ್ಳೆ, ಅನುರಾದಾ ರಾಯೋಜಿ: ಅಜ್ಜಿಯ ಮುಖ್ಯಪಾತ್ರದಲ್ಲಿ ಅಭಿನಯಗಳ ಮೂಲಕ ರಂಜಿಸಿ ಪಾತ್ರಕ್ಕೆ ಜೀವ ತುಂಬಿದರು, ಜ್ಯೋತಿ: ನರ್ಸ, ಪ್ರೀಯಾಂಕಾ ನಿಗದಿ: ನರ್ಸ, ರಾಕೇಶ ಬೇದರೆ: ಶೆಟ್ಟಿ, ಹೈದರಲಿ ದಿಲ್ಶಾದ್; ಡಂಗುರ ಶಂಕ್ರಪ್ಪನಾಗಿ ಚಂದು ಮುಮ್ಮಿಗಟ್ಟಿ, ಮಗನಾಗಿ ಅನನ್ಯಾ ಕುಂಬಾರ: ಮೊಮ್ಮಗನ ಪಾತ್ರದಲ್ಲಿ ಗಮನಸೆಳೆದರು. ಪ್ರಸಾದನ, ರಂಗಸಜ್ಜಿಕೆ, ವೇಷಭೂಷಣ ಹಾಗೂ ರಂಗಪರಿಕರಗಳು ಪೂರಕವಾಗಿದ್ದವು ಅಲ್ಲದೆ ಯಮನಪ್ಪ ಜಾಲಗಾರರವರ ಸಂಗೀತ ಮಕ್ಕಳ ಅಭಿನಯಗಳಿಗೆ ತಕ್ಕಂತೆ ವಿಶೇಷ ಮೆರಗು ನೀಡಿತ್ತು. ಒಟ್ಟಾರೆ ಈ ನಾಟಕ ಯುವ ನಿದರ್ೇಶಕಿ ಅನೀತಾ ಆರ್ರವರ ಅರಿವು ನೀಡುವ ಕಥೆಯುಳ್ಳ ಈ ನಾಟಕದ ದಕ್ಷ ನಿದರ್ೇಶನ ಮಕ್ಕಳಿಗೆ ನೀಡಿದ್ದು ಸ್ತುತ್ಯಾರ್ಹ. ಆದರ್ಶ ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಮ್. ಮುಶಣ್ಣನವರ, ಶಿಕ್ಷಕರಾದ ಜೆ.ಬಿ.ಹಾಲಗಿ, ಕೆ.ಎಸ್.ಭರಮಗೌಡ್ರ, ಕೆ.ಟಿ.ಹುಣಸಿಕಟ್ಟಿ, ಎಮ್.ಆರ್.ಬಂಕಾಪುರ, ಫಕ್ಕಿರಪ್ಪ ಮಾದನಭಾವಿ, ಬಿ.ಸಿ.ಬಾಳಿಕಾಯಿ, ಎಮ್.ಎಚ್.ಕದರಮಂಡಲಗಿ ಈ ನಾಟಕ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಎಲ್ಲ ವಿದ್ಯಾಥರ್ಿಗಳಿಗೆ ಹಾಗು ತಂಡಕ್ಕೆ ಗೌರವ ಅಭಿನಂದನೆ ಸಲ್ಲಿಸಿದರು.