ರಾಣೆಬೆನ್ನೂರ

ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ರಾಣೆಬೆನ್ನೂರು 16:  ಸಮೀಪದ, ಹರಿಹರ ತಾಲೂಕಿನ, ದಾವಣಗೆರೆ ಜಿಲ್ಲೆಯ ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವ ಹಾಗೂ ಮಹಾ ಕಾರ್ತಿಕೋತ್ಸವ ಧಾರ್ಮಿಕ ಸಮಾರಂಭವು ನವೆಂಬರ್ 28-2022  ರಂದು ಸೋಮವಾರ ಜರುಗಲಿದೆ.  ಈ ನಿಮಿತ್ತವಾಗಿ ಪ್ರತಿವರ್ಷದಂತೆ ಈ ವರ್ಷವೂ ಸಹ,   28 -2022 ರಂದು ಮುಂಜಾನೆ 10 ಗಂಟೆಗೆ  " ರಾಜ್ಯ ಮಟ್ಟದ ಭಜನಾ ಸ್ಪರ್ಧೆ  " ಆಯೋಜಿಸಿದೆ.  ಪುರುಷರು ಮತ್ತು ಮಹಿಳೆಯರು  ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಫರ್ಧೆ   ನಡೆಯಲಿದ್ದು,  ಪುರುಷ ಮತ್ತು  ಮಹಿಳಾ ತಂಡಕ್ಕೆ ಪ್ರತ್ಯೇಕವಾಗಿ ಬಹುಮಾನ ಕೊಡಲಾಗುವುದು. ಪ್ರಥಮ 25000, ದ್ವಿತೀಯ 15000, ಮತ್ತು ತೃತೀಯ, 10000 ನಗದು ಮೊತ್ತದೊಂದಿಗೆ ಆಕರ್ಷಕ ಪಾರಿತೋಷಕ, ಪ್ರಮಾಣ ಪತ್ರ ನೀಡಲಾಗುವುದು. ಯಾವುದೇ ನೋಂದಣಿ ಶುಲ್ಕ ವಿರುವುದಿಲ್ಲ  ಎಂದು  ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿಗಳಾದ,ಎಸ್. ಸುರೇಶ್ ಗೌಡ್ರ ಅವರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಸರು ನೋಂದಾವಣೆಗೆ  ಜಂಗಮ ಧ್ವನಿ: 9620970453-7483415736 ಸಂಪರ್ಕಿಸಬಹುದಾಗಿದೆ 

ಸುದ್ದಿ ಓದಿ