ರಾಷ್ಟ್ರೀಯ ಭಾವೈಕತಾ ಶಿಬಿರ ವಿಶೇಷ ಉಪನ್ಯಾಸ ರಾಷ್ಟ್ರದ ರಕ್ಷಣೆಗೆ ಮುಂದಾಗಲಿ: ಮಲ್ಲಿಕಾರ್ಜುನ
ಲೋಕದರ್ಶನ ವರದಿ
ಬಳ್ಳಾರಿ 25: ಭಾರತ ಯುವಕರ ರಾಷ್ಟ್ರ, ಪ್ರಜೆಗಳು ಒಗ್ಗಟಿನಿಂದ ಜೊತೆಗೂಡಿ ಜಾತಿ, ಮತ ಭೇದವಿಲ್ಲದೆ ಬದುಕನ್ನು ಸಾಗಿಸಬೇಕು ಎಂದು ಮುಖ್ಯ ಅತಿಥಿ, ಆನಂತಪುರ ಎಸ್.ಕೆ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಮಲ್ಲಿಕಾಜರ್ುನ ರೆಡ್ಡಿ ಹೇಳಿದರು.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಮಹೇಶಪಾಟೀಲ್ ಮಾತನಾಡಿ, ದೇಶಕ್ಕೆ ಭಗತ್ ಸಿಂಗ್, ರಾಜಗುರು, ಸುಖದೇವ್ರ ಕೊಡುಗೆ ಅಪಾರವಾಗಿದೆ. ಜಾತಿ, ಮತ, ಭೇದವಿಲ್ಲದೆ ನಾವೆಲ್ಲರು ಒಂದೇ ಎಂಬ ಭಾವನೆ ನಮ್ಮ ದೇಶದಲ್ಲಿ ಕಾಣಬಹದು ಎಂದರು. ಅಧ್ಚಕ್ಷತೆ ವಹಿಸಿದ್ದ ಸ.ಸ.ಅ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಬ್ದುಲ್ ಮುತಾಲಿಬ್ ಮಾತನಾಡಿ, ಪ್ರತಿಯೊಬ್ಬರಲ್ಲಿ ದೇಶಭಿಮಾನ ಇರಬೇಕು. ಸೋಮಾರಿತನ ವಿದ್ಯಾಥರ್ಿಗಳಲ್ಲಿ ಇರಬಾರದು. ಸಾಧನೆ ಮಾಡಬೇಕಾದರೆ ಶ್ರಮ ವಹಿಸಬೇಕು ಎಂದರು. ಬೆಂಗಳೂರಿನ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಹೆಗ್ಗರ್.ವೈ ಮಾತನಾಡಿದರು.
ನಗರದ ತಾರನಾಥ ಆಯುವರ್ೇದಿಕ್ ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ ಗಣಿತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹನುಮೇಶ್ ವೈದ್ಯ ದ್ವಜಾರೋಹಣ ನೆರವೇರಿಸಿದರು. ಕರ್ನಾಟಕ , ಕೇರಳ, ತಮಿಳುನಾಡು, ಆಂದ್ರಪ್ರದೇಶ-ತೆಲಂಗಾಣ ವಿವಿಧೆಡೆ ವಿದ್ಯಾಥರ್ಿಗಳು ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸ್ವಾತಿ, ಸುಶ್ಮಿತ ಪ್ರಾಥಿಸಿದರು. ಶರಣಪಾಟೀಲ್ ಸ್ವಾಗತಿಸಿದರು. ಗುಲ್ಬಗರ್ಾ ವಿಶ್ವವಿದ್ಯಾಲಯದ ವಿದ್ಯಾಥರ್ಿನಿ ದುರುಗಮ್ಮ ನಿರೂಪಿಸಿದರು. ಅಕ್ಷಯ ಧಾರವಾಡ ವಂದಿಸಿದರು. ಕೆಯುಡಿ ಎನ್.ಎಸ್.ಎಸ್ ಅಧಿಕಾರಿ ನಾಗೇಶ ಬಿ.ಎಸ್, ವಿಕ್ರಮಸಿಂಹ ವಿಶ್ವವಿದ್ಯಾಲಯದ ಎಂ. ವೆಂಕಟ್, ಉಪನ್ಯಾಸಕರಾದ ಶ್ರೀನಿವಾಸ ರೆಡ್ಡಿ, ಕುಂಚಮ್ ನರಸಿಂಹಲು, ಡಾ. ಹನುಮೇಶ್ ವೈದ್ಯ. ಜನಾರ್ಧನ ರೆಡ್ಡಿ, ಪಂಚಾಕ್ಷರಿ ಕಲ್ಯಾಣಬಸವ, ಕೊಟ್ರಪ್ಪ, ಕಾವಲ್ಲಯ್ಯ, ಶಾಲಿನಿ, ಶಿಲ್ಪ ಕುಲಕರ್ಣಿ , ಜ್ಞಾನಪ್ರಸೂನಾಂಬ, ಗಂಗಾಶಿರಿಷ, ಸುಂಕಣ್ಣ.ಟಿ ಹಡ್ಲಿಗಿ, ಜಯರಾಮ.ಟಿ ತಂಬ್ರಳ್ಳಿ, ಗಂಗಾಧರ, ತಿಪ್ಪೇಶ್, ಸಂದೀಪ್ ಇದ್ದರು.