ನಡೆ-ನುಡಿ ಶುದ್ಧತೆಯ ಮಾತೇ ವಚನ :ಚಾಂದ್ಬಾಷಾ

ನಡೆ-ನುಡಿ ಶುದ್ಧತೆಯ ಮಾತೇ ವಚನ :ಚಾಂದ್ಬಾಷಾ

ಬಳ್ಳಾರಿ 01: ಪದ್ಯವಾಗಿ ಗುರುತಿಸಿಕೊಂಡ ವಚನಗಳು ಗದ್ಯದಂತೆ ಓದುವ, ಪದ್ಯದಂತೆ ಹಾಡುವ ಎರಡೂ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಸಾಮಾಜಿಕ ಬದುಕಿನ ಚಿತ್ರಣವು ವ್ಯಾಪಕವಾಗಿ ಹರಡಿಕೊಂಡಿದೆ. ಸಾಮಾಜಿಕ ಚಿಂತನೆ, ಜೀವನ ಮೌಲ್ಯ, ಆಥರ್ಿಕ ವ್ಯವಸ್ಥೆ ಮುಂತಾದ ಮಾನವ ಬದುಕಿನ ಎಲ್ಲ ಕ್ಷೇತ್ರಗಳು ವಚನಗಳಲ್ಲಿ ಅಡಗಿವೆ ಎಂದು ಬಾಲಕಿಯ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಚಾಂದ್ ಬಾಷಾ ಅವರು ನುಡಿದರು. ಜೋಳದರಾಶಿ ಗ್ರಾಮದ ಮುರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 221ನೇ ಮಹಾಮನೆ ಲಿಂ|| ಡಾ.ಜೋಳದರಾಶಿ ದೊಡ್ಡನಗೌಡ ಮತ್ತು ಲಿಂ|| ಚನ್ನವೀರನಗೌಡರ ದತ್ತಿ ಕಾರ್ಯಕ್ರಮದಲ್ಲಿ ವಚನಗಳ ವಿಶೇಷತೆ ವಿಷಯ ಕುರಿತು ಮಾತನಾಡುತ್ತ, ವಚನಗಳು ಕವಿಯ ಕಲ್ಪನೆಯ ಅಥವಾ ಬುದ್ಧಿಯ ಕಸರತ್ತಿನಿಂದ ಮೂಡಿಬರದೆ ಸಮಾಜದ ಓರೆಕೋರೆಗಳನ್ನು ಸಮಾಜದ ಸೌಖ್ಯವನ್ನು ಹಾರೈಸುವ ನಡೆ ನುಡಿ ಶುದ್ಧತೆ ಹೊಂದಿದ ಮಾತುಗಳಾಗಿವೆ. ಈ ಮಾತುಗಳೇ ಪ್ರಮಾಣ ಬದ್ಧವಾದ ಸತ್ಯಸಾಕ್ಷಿಯಾದ ವಚನಗಳು ಎಂದು ಹೇಳಿದರು. 12ನೇ ಶತಮಾನದ ಶರಣಶರಣೆಯರು ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಅನುಸರಿಸಿದ ಮಾರ್ಗದಲ್ಲಿ ಪ್ರಮುಖವಾದದ್ದು, ಸ್ವ-ಆತ್ಮಾವಲೋಕನೆ ಮತ್ತು ನಡೆ ನುಡಿ ಒಂದಾದ ಜೀವನವಾಗಿದೆ. ಈ ಜೀವನ ಆದರ್ಶ ಇಂದು ನಮಗೆ ಅತಿ ಅಗತ್ಯವಾಗಿದೆ. ಹೊರಗಿನ ಸೌಕರ್ಯಗಳು ಅತ್ಯಂತ ಹೇರಳವಾಗಿ ನಮಗೆ ದೊರೆತಿದ್ದರೂ ಆಂತರಿಕ ದುಃಖ ದುಮ್ಮಾನಗಳಿಗೆ ನಡೆ ನುಡಿಯಿಲ್ಲದ ಜೀವನವೇ ಎಂಬುದನ್ನು ನಾವಿಂದು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಾಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕವಿತ ಬಿ.ಕೆ ವಹಿಸಿದ್ದರು. ಅತಿಥಿಗಳಾಗಿ ಚೇಳ್ಳಗುಕರ್ಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತಪ್ಪ ಉಪಸ್ಥಿತರಿದ್ದರು. ವಿದ್ಯಾಥರ್ಿಗಳಿಗೆ ವಚನ ವಾಚನ ಮತ್ತು ವಿಶ್ಲೇಷಣೆ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ವಸತಿ ನಿಲಯದ 6 ರಿಂದ 10ನೇ ತರಗತಿಯ 11 ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಇದರಲ್ಲಿ 7ನೇ ತರಗತಿಯ ಮೇಘರಾಜ ಪ್ರಥಮ ಬಹುಮಾನವನ್ನು, 6ನೇ ತರಗತಿಯ ಅಂಕಿತ ಮತ್ತು 8ನೇ ತರಗತಿಯ ಸಹನಾ ಇವರು ದ್ವಿತೀಯ ಬಹುಮಾನವನ್ನು, 9ನೇ ತರಗತಿಯ ರೋಜಾ ತೃತೀಯ ಬಹುಮಾನವನ್ನು ಪಡೆದರು. ವೇದಿಕೆಯಲ್ಲಿ ದತ್ತಿ ದಾಸೋಹಿಗಳಾದ ನಿವೃತ್ತ ಉಪಾಧ್ಯಾಯ ಕೆ.ಪಂಪನಗೌಡ ದಂಪತಿಗಳು ಮತ್ತು ಪಾರ್ವತಮ್ಮನವರ ಮಗ ಎರ್ರಿಸ್ವಾಮಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ 9ನೇ ತರಗತಿಯ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು.  ಸ್ವಾಗತವನ್ನು ಶಿಕ್ಷಕಿ ಕೊಟ್ರಮ್ಮ ಪೂಜಾರ್ ಕೋರಿದರು. ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಮಾಡಿಕೊಟ್ಟರು. ಕಾರ್ಯಕ್ರಮದ ನಿರ್ವಹಣೆಯನ್ನು ಆಂಗ್ಲ ಶಿಕ್ಷಕ ಕೆ.ಶಶಿಕುಮಾರ್ ಮಾಡಿದರು. ವಂದನಾರ್ಪಣೆಯನ್ನು ಶಿಕ್ಷಕ ಬಿ.ನಾಗರಾಜ ನೆರವೇರಿಸಿದರು. ನಿಲಯ ಪಾಲಕರಾದ ಚಿದಾನಂದ, ಕೆ.ಬಿ.ಕೊಟ್ರೇಶ್, ಊರಿನ ಗಣ್ಯರು, ಶಾಲಾ ಶಿಕ್ಷಕ, ಶಿಕ್ಷಕಿ ಸಿಬ್ಬಂದಿ ವರ್ಗ ಹಾಜರಿದ್ದರು.

ಸುದ್ದಿ ಓದಿ