ಸ್ಪೀಕರ್ ಹೆಸರನ್ನ ಮಾಧ್ಯಮಗಳಲ್ಲಿ ಪದೇ ಪದೇ ಹೇಳುತ್ತಾ ರಾಜಕೀಯ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ: ಬಿ.ಶ್ರೀರಾಮುಲು

ಸ್ಪೀಕರ್ ಹೆಸರನ್ನ ಮಾಧ್ಯಮಗಳಲ್ಲಿ ಪದೇ ಪದೇ ಹೇಳುತ್ತಾ ರಾಜಕೀಯ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ: ಬಿ.ಶ್ರೀರಾಮುಲು

ಬಳ್ಳಾರಿ 10: ಪ್ರಸ್ತುತ ಅದಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಡ್ಜಟ್ಗೆ ಅನುಮೋದನೆ ಸಿಗಲಿದೆ. ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದರು. ಇದು ಇಗ ನಡೆಯಲಿರುವ ಆಪರೇಷನ್ ಕಮಲ ಯಶಸ್ವಿ ಆಗುವ ಅನುಮಾನವನ್ನು ವ್ಯೆಕ್ತ ಪಡಿಸಿದರು. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುವಾಗ ಸುದ್ದಿಗಾರರು ಆಪರೇಷನ್ ಕಮಲ ನಡೆಯತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅಂತದ್ದೇನು ನಡೆಯುತ್ತಿಲ್ಲ. 

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮಗೆ ಅಧಿಕಾರಕ್ಕಾಗಿ ಕಚ್ಚಾಡಿ ಅಸಮಧಾನದಿಂದ ಬಾಂಬೆಯಲ್ಲಿ ಆಶ್ರೆಯ ಪಡೆದು ತಮ್ಮದೇ ಸಕರ್ಾರದ ವಿರುದ್ದ ಷೆಡ್ಯಾಂತರ ನಡೆಸಿದ್ದಾರೆಯೇ ಹೊರತು ಬಿಜೆಪಿಯ ಪಾತ್ರ ಏನು ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಸದನದಲ್ಲಿ ಮೈತ್ರಿಸಕರ್ಾರ ಅಧಿಕಾರ ಕಳೆದುಕೊಳ್ಳುವಷ್ಟು ಶಾಸಕರು ಒಂದೆಡೆ ಸೇರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬರುತ್ತಿದ್ದಾರೆ ಮತ್ತು ಹೋಗುತ್ತಿದ್ದಾರೆ. ಹಂತಿಮವಾಗಿ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ ಎನ್ನುತ್ತಲೇ ಆಪರೇಷನ್ ಕಮಲದ ಸುಳಿವು ನೀಡಿದರು. 

ಬಡ್ಜೆಟ್ಗೆ ಅನುಮೋದನೆ ದೊರೆಯುವ ಮೂಲಕ ತಾವು ನಿರೀಕ್ಷೆ ಮಾಡಿದಷ್ಟು ಶಾಸಕರು ಈ ಅಧಿವೇಶನದಲ್ಲಿ ಬಿಜೆಪಿಗೆ ಬರಲಿಕ್ಕಿಲ್ಲ ಎಂಬ ಅನುಮಾನವನ್ನು ವ್ಯೆಕ್ತ ಪಡಿಸಿದರು. ಹಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎನ್ನುವುದು ಅಲ್ಲಗಳಿದಿದ್ದ ಶ್ರೀರಾಮುಲು ಅವರ್ಯಾರು ನಮ್ಮ ಸಂಪರ್ಕದಲ್ಲಿಲ್ಲ. ನಮ್ಮನ್ನು ಯಾರು ಸಂಪಕರ್ಿಸಿಲ್ಲ. ಘನತೆ, ಗಾಂಭಿರ್ಯ, ಸಾರ್ವಜನಿಕ ಕಾಳಜಿ ಕಳಕಳಿ ಇಲ್ಲದ ಬೆಂಗಳೂರಿನ ಪಂಚತಾರ ತಾಜ್ ವೆಸ್ಟಂಡ್ ಹೋಟೆಲ್ ನಲ್ಲೆ ನಲೆಸಿರುವ ಸದಾ ಐಷಾರಾಮಿ ಜೀವನ ನಡೆಸುತ್ತಿರುವ ಹಾಲಿ ಮುಖ್ಯಮಂತ್ರಿ ಮಾನ್ಯ ಕುಮಾರಸ್ವಾಮಿ ರವರು ನಕಲಿ ಆಡಿಯೋ ಬಿಡುಗಡೆ ಮಾಡುವ ಮೂಲಕ ರಾಜ್ಯದ ರಾಜಕೀಯದ ಬಗ್ಗೆ ಜನತೆ ಅಸಯ್ಯ ಪಟ್ಟುಕೊಳ್ಳುವಂತಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸುಧಿರ್ಘ ಹೋರಾಟದ ಹಿನ್ನಲೆಯಿಂದ ಬಂದವರು ತಂತ್ರ ಕುತಂತ್ರದ ಬಗ್ಗೆ ತಿಳಿಯದ ಮುಗ್ದರು. ಸದಾ ತಂತ್ರ ಕುತಂತ್ರ ಮಾಟ ಮಂತ್ರಗಳಿಂಗಳಿಂದಲೇ ತಮ್ಮ ರಾಜಕೀಯ ಜೀವನ ಸಾಗಿಸುತ್ತಿರುವ ಕುಮಾರಸ್ವಾಮಿ ರವರು ತಮ್ಮ ಕುಚರ್ಿ ಉಳಿವಿಗಾಗಿ ಮಾಡಿರುವ ಕುತಂತ್ರದ ಉನ್ನಾರದ ಒಂದು ಭಾಗ. ಆಡಿಯೋ ಬಿಡುಗಡೆ ಮಾಡಿ ನಾನೆ ಕಳಿಸಿದ್ದು, ನಾನೇ ಮಾಡಿಸಿದ್ದು ಎಂದು ಹೇಳಿ ಧರ್ಮಸ್ಥಳದಲ್ಲಿ ಆಡಿಯೋದಲ್ಲಿ ಇರುವ ಧ್ವನಿ ಬಿ.ಎಸ್.ವೈ ರವರದ್ದು ಎಂದು ಹೇಳಿಲ್ಲ ಎನ್ನುವ ಮೂಲಕ ಅವರ ದ್ವಂದ್ವ ನೀತಿ ಅರ್ಥವಾಗಿದೆ. ಸ್ವತಃ ನಿಮರ್ಾಪಕರಾಗಿರುವ ಕುಮಾರಸ್ವಾಮಿಯವರಿಗೆ ಆಡಿಯೋ, ವಿಡಿಯೋ, ಡಬ್ಬಿಂಗ್, ರಿಮಿಕ್ಸ್, ಮಿಮಿಕ್ರಿಯೇ ಎಲ್ಲಾವುದರ ಬಗ್ಗೆ ಅಫಾರವಾದ ಜ್ಞಾನ ವಿದೆ. ಒಬ್ಬ ಮುಖ್ಯಮಂತ್ರಿಯಾಗಿ ಹೇಗೆ ವತರ್ಿಸಬೇಕೆಂಬ ಸಾಮಾನ್ಯ ತಿಳುವಳಿಕೆ ಇಲ್ಲದ ಕುಮಾರಸ್ವಾಮಿ ಪದೇ ಪದೇ ಸ್ಫೀಕರ್ ರವರ ಹೆಸರನ್ನ ಮಾಧ್ಯಮಗಳಲ್ಲಿ ಪದೇ ಪದೇ ಹೇಳುತ್ತಾ ಇಡೀ ರಾಜಕೀಯ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಅತ್ತ ದೆಹಲಿಯಲ್ಲಿ ದೇವೆಗೌಡರು, ಇತ್ತ ಬೆಂಗಳೂರಿನಲ್ಲಿ ಕುಮಾರಸ್ವಾಮಿಯವರು ಪದೇ ಪದೇ ಸ್ಫೀಕರ್ ರವರ ಹೇಸರನ್ನು ಹೇಳುವುದು ಎಷ್ಟರಮಟ್ಟಿಗೆ ಸರಿ. ಬೇರೆಯವರ ಹೆಗಲ ಮೇಲೆ ಬಂದುಕು ಇಟ್ಟು ಗುಂಡು ಹಾರಿಸುವ ಕಲೆಯನ್ನು ದೇವೆಗೌಡರು ಕುಮಾರಸ್ವಾಮಿಗೆ ಚನ್ನಾಗಿ ಕಲಿಸಿಕೊಟ್ಟಿದ್ದಾರೆ. ರಾಜ್ಯ ಕಂಡ ಅಪರೂಪದ ರಾಜಕಾರಿಣಿಗಳಾದ ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ಎಸ್.ಆರ್ ಬೊಮ್ಮಯಿ ಅಂತಹ ನಾಯಕರುಗಳಿಗೆ ಸದಾ ಕಿರುಕುಳ ನೀಡಿ ಜೀವನದ್ದೂಕ್ಕೂ ಮನಃ ಶಾಂತಿ ಇಲ್ಲದಂತೆ ಮಾಡಿದ ಕುಮಾಸ್ವಾಮಿ ಕುಟುಂಬದ ಬಂಡವಾಳ ಇಡೀ ರಾಜ್ಯದ ಜನರಿಗೆ ಗೊತ್ತು. ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎ.ಮಂಜು ರವರೇ ಹೆಳಿದ್ದು, ಜೆಡಿಎಸ್ ನವರು ಎಲ್ಲಾರ ಜೊತೆ ಸಂಸಾರ ಮಾಡುದರಲ್ಲಿ ನಿಸ್ಸಿಮರು. ಎನಿದರ ಅರ್ಥ? ಇದು ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ರಾಜಣ್ಣ ರವರು ಹೇಳಿದ್ದು ಜೆಡಿಎಸ್ಗೆ ಗಂಡ ಇಲ್ಲ ಕಾಂಗ್ರೆಸ್ಗೆ ಹೆಂಡತಿ ಇಲ್ಲ ಅಂತಹ ಸಂಸಾರ ಈ ಸಮ್ಮಿಶ್ರ ಸಕರ್ಾರದ್ದು. ಎನಿದರ ಅರ್ಥ? ಇದು ಸ್ವತಃ ಹೆಚ್.ಡಿ ರೇವಣ್ಣರವರ ಪುತ್ರ ಪ್ರಜ್ವಲ್ ರೇವಣ್ಣ ಹೇಳಿದ್ದು, ಜೆಡಿಎಸ್ನಲ್ಲಿ ಸೂಟ್ ಕೇಸ್ ಸಂಸ್ಕೃತಿ ನಡೆಯುತ್ತಿದೆ. ಎನಿದರ ಅರ್ಥ? ಕುಮಾರಸ್ವಾಮಿಯವರಲ್ಲಿ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ ಹೇಗಾದರು ಮಾಡಿ ಅಧಿಕಾರ ಉಳಿಸಿಕೊಳ್ಳುವ ಹಿನ್ನಲೇ ಯಲ್ಲಿ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೇಳೆಯಲು ಈ ಆಡಿಯೋ ಡ್ರಾಮವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಪಂಚತಾರ ಹೋಟೆಲ್ ತಾಜ್ ವೆಸ್ಟಂಡ್ ನಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಖಚರ್ುಮಾಡಿ ತಂಗಿರುವ ಐಷಾರಾಮಿ ಮುಖ್ಯಮಂತ್ರಿಯಿಂದ ರೈತರ ಸಾಲ ಮನ್ನಾವಾಗಲಿ, ಹಿಂದುಳಿದ ಜನಾಂಗದ ಅಭಿವೃದ್ಧಿಯಾಗಲಿ ಸಾಧ್ಯವೇ ಇಲ್ಲ. ಐಷರಾಮಿ ತಾಜ್ ವೆಸ್ಟಂಡ್ನ ಪ್ರತಿನಿತ್ಯದ ಲಕ್ಷಾಂತರ ರೂಪಾಯಿ, ಕೋಟಿ ಕೋಟಿ ರೂಪಾಯಿಗಳ ಬಿಲ್ಲನ್ನು ಕಟ್ಟಿದವರು ಯಾರು? ನನಗೆ ಇರುವ ಮಾಹಿತಿ ಪ್ರಕಾರ ಲೋಕಪಯೋಗಿ ಇಲಾಖೆಯ ಗುತ್ತಿಗೆದಾರರು ಹಾಗೂ ಇನ್ನಿತರ ಗುತ್ತಿಗೆದಾರರು ಸೇರಿ ಈ ಬಿಲ್ಲನ್ನು ಕಟ್ಟುತ್ತಿದ್ದಾರೆ ಎಂಬ ಮಾಹಿತಿ. ಕನರ್ಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯು ಇಷ್ಟೊಂದು ಐಷಾರಾಮಿ ಜೀವನವನ್ನು ನಡೆಸಿಲ್ಲ, ತಾಜ್ ವೆಸ್ಟಂಡ್ ನಂತ ದುಭಾರಿ ಹೋಟಲನ್ನು ಮನೆಯಾಗಿ ಪರಿವರ್ತನೆ ಮಾಡಿಕೊಂಡಿರುವ ಮೊದಲ ಮುಖ್ಯಮಂತ್ರಿ ಈ ಕುಮಾರಸ್ವಾಮಿ. ಕುಮಾರಸ್ವಾಮಿ ಮಾಡುತ್ತಿರುವ ಅನ್ಯಾಯ, ಅಕ್ರಮ, ಭ್ರಷ್ಟಾಚಾರಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕುಮಾರಸ್ವಾಮಿಯ ಪಾಪದ ಕೊಡದಲ್ಲಿ ಕಾಂಗ್ರೆಸ್ ನದು ಸಮಪಾಲು ಎಂಬುದನ್ನು ಮರೆಯಬಾರದು. ನಾನು ಮುಖ್ಯಮಂತ್ರಿಯಲ್ಲ ಒಬ್ಬ ಕ್ಲರ್ಕ ಆಗಿ ಕೆಲಸ ಮಾಡುತ್ತೇನೆ ಎಂದರೆ ಏನು ಅರ್ಥ? 37 ಅಂಕ ಗಳಿಸಿದ ಈತನಿಗೆ ಕ್ಲರ್ಕ ಅಲ್ಲದೆ ಜಿಲ್ಲಾಧೀಕಾರಿಗಳ ಸ್ಥಾನ ನೀಡಲು ಹೇಗೆ ಸಾಧ್ಯ? ನಾವು ನಾಯಿ ಬಾಲವನ್ನು ಅಲ್ಲಾಡಿಸುತ್ತದೆ ಎಂದು ಮಾತಾನಾಡುತ್ತೇವೆ ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಿದೆ.

ಸುದ್ದಿ ಓದಿ