ತುಸು ನಗುತ ಬಂದೇವ
-ಡಾ| ವೈ.ಎಂ.ಯಾಕೊಳ್ಳಿ
ಕಾಲ ಎನ್ನುವದಕ್ಕೆ ಸಮಯ, ಯಮ, ಸರಿಯಾದ ಅವಕಾಶ ಇತ್ಯಾದಿ ಅರ್ಥಗಳಿವೆ. ಕಾಲ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ `ಯಮ' ಎನ್ನುವದು ಬಹಳ ಉನ್ನತವಾದ ಅರ್ಥವಾದರೆ, ಹೊತ್ತು ಎನ್ನುವದು ಕಾಲದ ಸಾಮಾನ್ಯವಾದ ಅರ್ಥ, 'ಕಲ-ಶಬ್ದ ಸಂಖ್ಯಾನಯೋ:'-ಎಂಬ ಧಾತುವಿನಿಂದ ಕಾಲ ಶಬ್ದ ಎಂದಿದೆ ಎಂದು ಪಂಡಿತರು ಹೇಳುತ್ತಾರೆ. ಕಾಲವೆಂದರೆ ಎಲ್ಲರನ್ನು ಒಗ್ಗೂಡಿಸುವದು. ತನ್ನ ಹಿಡಿತಕ್ಕೆ ತೆಗೆದುಕೊಳ್ಳುವದು, ಯಾರಿಗೂ ಬಗ್ಗದಿರುವದು ಇತ್ಯಾದಿ ಅರ್ಥಗಳಿವೆಯಂತೆ. ಅಂದರೆ 'ಕಾಲ' ಯಾರ ಹಿಡಿತಕ್ಕೂ ಸಿಗದ, ಎಲ್ಲರನ್ನೂ ತನ್ನ ಹಿಡಿತಕ್ಕೆ ಒಗ್ಗಿಸಿಕೊಳ್ಳವ, ಬಗ್ಗಿಸಿಕೊಳ್ಳುವ ದೊಡ್ಡ ಶಕ್ತಿ ಎಂಬುದು 'ಕಾಲನ ಕೈಯ ಕೈದು' ವಾಗಿರುವ ನಮಗೆಲ್ಲ ತಿಳಿದ ವಿಚಾರವೇ.
ಒಂದು ರೀತಿಯಲ್ಲಿ ನಾವೆಲ್ಲ ಕಾಲನ ಅಧೀನರೇ. ಎಲ್ಲರ ಬದುಕಿನಲ್ಲಿಯೂ ಕಾಲ ತನ್ನ ಪ್ರಭಾವ ಬೀರುತ್ತದೆ. ನಾವೆಲ್ಲ ಏನು ಮಾಡಿದರೂ ಕಾಲನ ಕಟ್ಟಳೆಗೆ ಒಳಗಾಗಿ ಮಾಡುತ್ತೇವೆ. ಅದಕ್ಕೆ ನಮ್ಮ ಹಿರಿಯರು ಏನಾದರೂ ಆಗಬಾರದ್ದು ಆದರೆ 'ಏಲ್ಲಾ ಕೆಟ್ಟ ಸಮಯಾರಿ' ಎನ್ನುತ್ತಾರೆ. ಏನಾದರೂ ಒಳ್ಳೆಯದಾಗುತ್ತಾ ಹೋದರೆ 'ಅವನ ಟೈಮ್ ಚಲೋ ಐತ್ರಿ ಎಂಬ ಮಾತುಗಳನ್ನು ಕೇಳುತ್ತೇವೆ. ಹಾಗಾದರೂ ಎಲ್ಲವೂ ಹೀಗೆ ಸಮಯದ ಕೈಯಿಂದ ಅಗುವದಾದರೆ ಮನುಷ್ಯ ಪ್ರಯತ್ನಕ್ಕೆ ಏನೂ ಬೆಲೆ ಇಲ್ಲವೇ? ಎಲ್ಲವೂ ಸಮಯವೇ ಮಾಡುವದು ಸಾಧ್ಯವೇ?. ಇದೆಲ್ಲ ವಿಧಿವಾದ, ಕೈಲಾಗದವರ ಅಪ್ರಲಾಪ ಎನ್ನುವ ಪ್ರಯತ್ನವಾದಿಗಳಿಗೂ ಕಡಿಮೆಯಿಲ್ಲ. ಅಂಥಾ ಧರ್ಮವಂತ ದರ್ಮರಾಯ ಪಗಡೆ ಅಟ ಅಡಿ ಜೂಜಾಡಿ ಪತ್ನಿ ದ್ರೌಪದಿಯನ್ನು ಜೂಜಿನಲ್ಲಿ ಸೋಲುವಂತಾದದ್ದು, ಹರಿಶ್ಚಂದ್ರ ಸುಡುಗಾಡು ಕಾಯುವಂತಾದದ್ದು, ಶುಚಿವಂತನಾದ ರಾವಣ ಸೀತೆಯನ್ನು ನೋಡಿ ವಿಚಲಿತನಾಗಿ ಆಕೆಯನ್ನು ಅಪಹರಿಸುವಂತಾದದ್ದು, ಇದೆಲ್ಲವೂ ಕೆಟ್ಟ ಕಾಲದಿಂದಾದ ಫಲಿತವೇ ಎಂದು ಸಮಥರ್ಿಸುವವರು ಇದ್ದಾರೆ. ಇಲ್ಲ, ಇದು ತಪ್ಪು, ಅವರ ತಪ್ಪುಗಳನ್ನು ನಾವು ಸಮಥರ್ಿಸಿಕೊಳ್ಳಬೇಕಿಲ್ಲ ಎಂಬ ವಾದಗಳೂ ಇವೆ. ಇದೆಲ್ಲ ತುಂಬ ಬಲ್ಲವರ ಮಾತಾಯಿತು ಆದರೆ ನಾವು ಸಾಮಾನ್ಯರು ಮಾತ್ರ ಒಳ್ಳೆಯ ಸಮಯ, ಕೆಟ್ಟ ಸಮಯ ಅಂತ ವಿಚಾರ ಮಾಡಿಯೇ ತೀರುತ್ತೇವೆ.
'ಕಾಲ ಯಾರಿಗೂ ಕಾಯುವುದಿಲ್ಲ ಎಂಬ ಮಾತಿದೆ. ಆದರೆ ಆ ಕಾಲ ಬಂದಾಗ ಅದನ್ನು ಸದುಪಯೋಗ ಮಾಡಿಕೊಳ್ಳುವದು ನಮ್ಮ ಗುರಿಯಾಗಬೇಕು. ಇಲ್ಲದಿದ್ದರೆ ಹೋದ ಕಾಲ ಮತ್ತೊಮ್ಮೆ ಸಿಗುವದಿಲ್ಲ `ಗಾಳಿ ಬಂದಾಗ ತೂರಿಕೋ, ಹಲ್ಲಿದ್ದಾಗ ಕಡಲೆ ತಿನ್ನು' ಎಂದು ಹಿರಿಯರು ಹೇಳಿದ್ದು ಇದೇ ಅರ್ಥದಲ್ಲಿ. ಕಾಲದ ತಿರುಗುವಿಕೆಯನ್ನು ಕವಿ ಡಿ. ವಿ. ಜಿ ಯವರು-
ಕಾಲವಕ್ಷಯ ದೀಪ ಅದರ ಪಾತ್ರೆಯಪಾರ
ಬಾಳ್ ಅದರಿನಾದೊಂದು ಕಿರು ಹಣತೆ, ಮಿಣಕು
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು
ತೈಲಧಾರೆಯಖಂಡ ಮಂಕುತಿಮ್ಮ
'ಕಾಲ' ಎನ್ನುವದು ಅಪಾರವಾದುದು. ಆ ಮಹಾ ದೀಪದಿಂದಾದ ಕಿರು ಹಣತೆ ನಮ್ಮ ಬಾಳು. ನಮ್ಮ ಸಮಯ ಮುಗಿದೊಡನೆ ಇನ್ನೊಂದು ಕಿರು ಹಣತೆಯನ್ನು ಕಾಲ ಹಚ್ಚುತ್ತದೆ. ನಮ್ಮ ಬಾಳಿಗೆ ವಿಶ್ರಾಂತಿ ಇದೆ, ಅಂದರೆ ಕಾಲನೆಂಬ ಈ ಮಹಾ ಪ್ರಾಣಿ ದೀಪ ಹಚ್ಚುವ, ಕಳೆಯುವ ಕಾಯಕದಲ್ಲಿ ನಿರತ.
ಎಲ್ಲರೂ ಕಾಲದ ಕೈಯೊಳಗಿನ ಕೈದುಗಳೇ.ಅದು ನಮ್ಮನ್ನು ದಾಳವಾಗಿ ಬಳಸುತ್ತದೆ. ಹಾಗಾದರೆ ಈ ಕಾಲವನ್ನು ಗೆಲ್ಲವುದು ಹೇಗೆ? ಅದಕ್ಕಿರುವ ಒಂದು ದಾರಿ ಒಳ್ಳೆಯದನ್ನು ಮಾಡುತ್ತಾ ಹೋಗುವದು. ಸದಾ ಒಳ್ಳೆಯದರ ಚಿಂತನೆ, ಒಳ್ಳೆಯದರ ಸೃಷ್ಟಿ ನಮಗೂ ಒಳಿತನ್ನು ಮಾಡುತ್ತದೆ. ಆರಂಭದಲ್ಲಿ ಒಳ್ಳೆಯವರಿಗೆ ಕೆಟ್ಟುದಾಗಬಹುದು, ಆದರೆ ಅಂತಿಮ ವಾಗಿ ಜಯ ಸಾಧ್ಯವಾಗುತ್ತದೆ. ಅದಕ್ಕೆ ತಾಳ್ಮೆ ಬೇಕು. ತಾಳುಮೆಯೇ ತಪ. ಅದಕ್ಕೆ ಡಿ.ವಿ.ಜಿಯವರು ಇನ್ನೊಂದು ಪದ್ಯದಲ್ಲಿ
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ
ತಾಳಿದರೆ ಬಾಳನಂತಹರುಮ್ ಆಸೆಯಲಿ?
ಕಾಲವಿನ್ನಿರದಿಂತು ನಾಳೆ ನೋಡುವೆಮೆನುತ
ಮೇಲನೆ ನಿರೀಕ್ಷಿಪರು ಮಂಕುತಿಮ್ಮ
ಬದುಕಿದ್ದರೆ ಇಂದಲ್ಲ ನಾಳೆ ಒಳಿತಾದುದು ಬಂದೇ ಬರುತ್ತದೆ ಎಂಬ ನಿರೀಕ್ಷೆಯ ಭಾವ ಎಲ್ಲರದೂ ಆಗಿರುತ್ತದೆ. ಎಲ್ಲವೂ ಒಂದೇ ಏಟಿಗೆ, ಒಂದೇ ಪ್ರಯತ್ನಕ್ಕೆ ಮುಗಿದು ಹೋಗುವದಿಲ್ಲ. ಅವಕಾಶವಿದ್ದರೆ ಇನ್ನೊಮ್ಮೆ ನೋಡೋಣ ಎಂದು ಎಲ್ಲರೂ ಒಳಿತನ್ನೇ ನಿರೀಕ್ಷಿಸುತ್ತಾರೆ ಎನ್ನುವ ಅರ್ಥ ಅಲ್ಲಿದೆ.
ನಮ್ಮ ಬಾಳು ಶಾಸ್ವತವಲ್ಲ. ಒಮ್ಮೆ ಗಾಳಿ ಬೀಸಿದರೆ ಈ ಕಿರು ಹಣತೆ ಆರುತ್ತದೆ. ನಮ್ಮ ಬದುಕನ್ನು ಭೂವಿಗೆ ಹೋಲಿಸಿದ ಕುಮಾರವ್ಯಾಸ ಯನ್ನು ಭೂಮಿಯನ್ನು ಚಂಚಲೆ ಎಂದು ಕರೆದು ಈಕೆ 'ಆರ ಒಡನಿದ್ದು ಆರ ಒಡನೆ ಉರಿಯ ಹಾಯ್ದಳೋ' ಎಂದು ಮೂದಲಿಸುತ್ತಾನೆ. ಅಂದರೆ ರಾಜರಿಂದ ಆಳಿಸಿಕೊಂಡ ಭೂಮಿ ಹಾಗೆಯೇ ಉಳಿದಿದೆ. ರಾಜರು ಮಾತ್ರ ಯಾರೂ ಉಳಿದಿಲ್ಲ ಬದಲಾಗುತ್ತಾ ಹೋಗಿದ್ದಾರೆ ಎಂಬ ಅರ್ಥ ಅಲ್ಲಿನದು. .
ಎಂಬುದವನ ಮಾತು. ಹೌದು, ಈ ಕ್ಷಣಿಕವಾದ ಕಾಲದ ಅವಧಿಯನ್ನು ಸಾರ್ಥಕವಾಗಿ ಕಳೆಯುವದು ಹೇಗೆ? ಎಂಬುದೇ ಬಹುದೊಡ್ಡ ಪ್ರಶ್ನೆ ಅಳುತ್ತ ಕಳೆಯುವುದು, ಅಥವಾ ಇನ್ನೊಬ್ಬರಿಗೆ ಉಪಯೋಗಕ್ಕೆ ಬರುವಂತೆ ಸಾರ್ಥಕಗೊಳಿಸುತ್ತ, ನಗುತ್ತ ಕಳೆಯುವದೂ ನಮ್ಮ ಕೈಲಿದೆ-'ನಕ್ಕಾಂವ ಗೆದ್ದಾವ' ಎನ್ನುವ ಬೇಂದ್ರೆ ಕವಿ-
ನಸು ನಗುತ ಬಂದೇವ ತುಸುನಗುತ
ಬಾಳೋಣ, ಹುಸಿ ನಗುತ ತೆರಳೋಣ
ಬಡನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರ ಕೆರಳೋಣ
ಎಂದಿದ್ದಾರೆ. ಬಾಳಿನಲ್ಲಿ ಎಷ್ಟೇ ಕಷ್ಟವಿರಬಹುದು, ಆದರೆ ನಮ್ಮ ಗೋಳನ್ನು ಮಾತ ್ರ ಮುಂದು ಮಾಡಲು ಈ ಬದುಕಿಲ್ಲ. ಬಂದ ನೋವನ್ನು ತುಟಿ ಕಚ್ಚಿ ಹಿಡಿದು ತುಟಿಯ ಮೇಲೆ ಒಂದು ಕಿರುನಗೆ ಲೇಪಿಸಿಕೊಂಡು ಬದುಕುವದರಲ್ಲಿಯೇ ಬಾಳಿನ ಮರ್ಮ ಇರುವದು. ಬರೀ ದ್ವೇಷವನು, ಬಡಿದಾಟವನ್ನು ಮಾಡುತ್ತಾ ಕೂಡ್ರಲು ನಮಗಿಲ್ಲಿ ಸಮಯ ಬಹಳವಿಲ್ಲ. ಕವಿ ಉಮಾರ್ ಖಯ್ಯಾಂ ಹೇಳಿದಂತೆ `ಇಲ್ಲಿರಲು ನಮಗೆ ಹೊತ್ತು ಬಹಳಿಲ್ಲ. ಮತ್ತೆ ಅತ್ತ ಹೋದ ಮೇಲಿತ್ತ ಬರಲು ಠಾವಿಲ್ಲ. ದೊರಕಿರುವ ಈ ಕಾಲವನ್ನು ಆನಂದದಿಂದ ಸಾರ್ಥಕವಾಗಿ ಕಳೆಯುವ ಯತ್ನ ಮಾಡುವದೇ ಕಾಲವನ್ನು ಅನುಭವಿಸುವ, ಗೆಲ್ಲುವ ದಾರಿಯಾಗಬೇಕು. ಇದು ಕಾಲವನ್ನು ಎದುರಿಸುವ ಸರಿಯಾದ ಮಾರ್ಗ. ಅಳುತ್ತ ಹೋದವರು ಕಾಲವನ್ನು ಗೆಲ್ಲಲಾರರು, ಹಾಗೆಯೇ ಸಂತೋಷದಿಂದ ಬಾಳಿದವರು `ಕಾಲಾತೀತ' ರಾಗಿ ನಮ್ಮ ನಡುವೆ ಶಾಸ್ವತರಾಗಿದ್ದಾರೆ. ನಮ್ಮ ಬದುಕು ಮತ್ತು ಈ ಅನಂತ ಕಾಲ ಇವೆರಡೂ ಒಂದರೊಳಗೊಂದು ಬೆಸೆದಿವೆ. ಅವುಗಳನ್ನು ಬಳಸುವದರಲ್ಲಿ ನಮ್ಮಜಯದ ನಡೆ ಇರುತ್ತದೆ. ಚಿಂತಕನೊಬ್ಬ ಹೇಳಿದಂತೆ ಐಜಿಜ ಚಿಟಿಜ ಣಟಜ ಚಿಡಿಜ ರಡಿಜಚಿಣ ಣಜಚಿಛಿಜಡಿ. ಐಜಿಜ ಣಜಚಿಛಿಜ ಥಿಠಣ ಣಜ ಣಜ ಠಜಿ ಣಟಜ ಚಿಟಿಜ ಖಿಟಜ ಣಜಚಿಛಿಜ ಥಿಠಣ ಣಜ ತಚಿಟಣಜ ಠಜಿ ಐಜಿಜ. ಕಾಲ ಮತ್ತು ಬದುಕು ಇಬ್ಬರೂ ಶ್ರೇಷ್ಠ ಶಿಕ್ಷಕರೇ. ಬದುಕು ಕಾಲದ ಉಪಯೋಗ ಕಲಿಸಿದರೆ, ಕಾಲ ಬದುಕಿನ ಮಹತ್ವ ತಿಳಿಸುತ್ತದೆ. ಎರಡನ್ನೂ ಸಮದೂಗಿಸಿಕೊಂಡು, ಸರಿದೂಗಿಸಿಕೊಂಡು ಬದುಕುವದರಲ್ಲಿಯೆ ಸಾರ್ಥಕತೆ ಅಡಗಿರುವದು. ಹೀಗಾಗಿ ದೊರಕಿರುವ 'ಜೀವನ' ದೊಳಗಿನ 'ಸಮಯ' ವನ್ನು ಸದುಪಯೋಗಪಡಿಸಿ ಅನಂತ ಕಾಲದಲ್ಲಿ ಒಂದಾಗುವದೇ ಯಶಸ್ಸಿನ ದಾರಿಯಾಗಿದೆ.