ರಾಣೆಬೆನ್ನೂರ

ಸುಗಮ ಸಂಗೀತ- ಜನಪದ ಕಲಾ ಪ್ರದರ್ಶನ

ಸುಗಮ ಸಂಗೀತ- ಜನಪದ ಕಲಾ ಪ್ರದರ್ಶನ

ರಾಣೆಬೆನ್ನೂರು 01:  ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು, ಸುಗಮ ಸಂಗೀತ ಮತ್ತು ಜನಪದ ಕಲೆ ವೇದ, ಇತಿಹಾಸ ಕಾಲಗಳಿಂದಲೂ ಗ್ರಾಮೀಣ ಜನರಲ್ಲಿ ಹಾಸುಹೊಕ್ಕಾಗಿ ಬಂದಿವೆ ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಲು ಮುಂದಾಗಬೇಕಾದ ಅಗತ್ಯವಿದೆ ಎಂದು ಯುವ ಮುಖಂಡ ಮಲ್ಲೇಶಪ್ಪ ಮದ್ಲೇರ, ಹೇಳಿದರು.

ಸ್ಥಳೀಯ ಜೆಎಚ್ ಪಟೇಲ್ ನಗರದ, ಗಣೇಶ್ ದೇವಸ್ಥಾನ ಸಭಾಭವನದಲ್ಲಿ ಸುಣಕಲ್ಲಬಿದರಿ  ಆದಿ ಜಾಂಬವ ಸ್ವಸಹಾಯ ಮಹಿಳಾ ಸಂಘವು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾಯೋಜಿತ.ಕಲಾವಿದ ರಾಮಪ್ಪ. ಬ ಕುಸುಗೂರ್ ಮತ್ತು ಚಿಕ್ಕಪ್ಪ ದೇ. ಚಲವಾದಿ ಸಂಗಡಿಗರ ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ದೇಶದ ಸ್ವಾತಂತ್ರ್ಯ ಗಳಿಸುವಲ್ಲಿ ಜಾನಪದ ಕಲೆ  ಮತ್ತುಕಲಾವಿದರ ಪಾತ್ರ ಅತ್ಯಂತ ಪ್ರಮುಖವಾಗಿದೆ, ಎಂದು ಇತಿಹಾಸ ಸ್ಮರಿಸಿ ಮಾತನಾಡಿದ ಅವರು ಕಲಾವಿದರ ಬದುಕು ಪ್ರಸ್ತುತ ಸಂದರ್ಭದಲ್ಲಿ ಬಹಳ ದುಸ್ತರವಾಗಿದೆ. ಇಲಾಖೆ ಸಾರ್ವಜನಿಕರು ಕಲಾವಿದರನ್ನು ಉಳಿಸಿಕೊಳ್ಳಲು ಪ್ರೋತ್ಸಾಹಿಸಬೇಕಾಗಿದೆ ಎಂದರು.. ನಗರಸಭಾ ಸದಸ್ಯ ಪ್ರಕಾಶ್ ಪೂಜಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ರೇಣುಕಾ ಬಾಲಣ್ಣನವರ, ಉಪಾಧ್ಯಕ್ಷ ಸವಿತಾ ಹುಲ್ಲತ್ತಿ, ಮಹೇಶ್ ಚಲುವಾದಿ, ಬಸವರಾಜ ಬುಕ್ಕ ಶೆಟ್ಟರ, ಪುಟ್ಟಮ್ಮ ಹಿರೇಬಿದರಿ, ಮಹಾದೇವಕ್ಕ ಸಾವಕ್ಜನವರ, ಸೇರಿದಂತೆ ಮತ್ತಿತರ ಗಂಡರು ಸಂಘಟನೆಯ ಪದಾಧಿಕಾರಿಗಳು ಭಾಗದ ಹಿರಿಯ ನಾಗರಿಕರು  ಉಪಸ್ಥಿತರಿದ್ದರು. ನಂತರ ಸಾರ್ವಜನಿಕವಾಗಿ ನಡೆದ  ಖ್ಯಾತ ಕಲಾವಿದರಾದ ರಾಮಪ್ಪ ಕುಸುಗೂರ್, ಚಿಕ್ಕಪ್ಪ ಚಲವಾದಿ ತಂಡದವರು ಸಾದರಪಡಿಸಿದ ಸುಗಮ ಸಂಗೀತ ಮತ್ತು ಜನಪದ ಕಾರ್ಯಕ್ರಮ ನಾಗರಿಕರ ಗಮನಸೆಳೆದವು. ಸವಿತಾ ಸಂಘಡಿಗರು ಪ್ರಾರ್ಥಿಸಿದರು ಮಹೇಶ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರ 

ಸುದ್ದಿ ಓದಿ