ಮಲ್ಲೂರು ಗ್ರಾಮದಲ್ಲಿ ಶ್ರೀಗಳ ಆಧ್ಯಾತ್ಮ ಪ್ರವಚನ
ಮಲ್ಲೂರು ಗ್ರಾಮದಲ್ಲಿ ಶ್ರೀಗಳ ಆಧ್ಯಾತ್ಮ ಪ್ರವಚನ
ಬ್ಯಾಡಗಿ 20: ಆಧ್ಯಾತ್ಮ ಪ್ರವಚನ ಕಾರ್ಯಕ್ರಮ ಅಂಗವಾಗಿ ತಾಲೂಕಿನ ಮಲ್ಲೂರು ಗ್ರಾಮಕ್ಕೆ ಶ್ರೀಗಳು ಭೇಟಿ ನೀಡಿದರು. ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಪಾದಯಾತ್ರೆ ನಡೆಸಿ ಭಕ್ತರಿಗೆ ದರ್ಶನ ನೀಡಿದರು. ಪಟ್ಟಣದ 12 ದಿನಗಳ ಕಾಲ ನಡೆಸಿ ಕೊಡುತ್ತಿರುವ ಪ್ರವಚನ ಕಾರ್ಯಕ್ರಮದ ಆರನೇ ದಿನದ ಅಂಗವಾಗಿ ಸೋಮವಾರ ಬೆಳಗ್ಗೆ 6:30 ಗಂಟೆ ಹೊತ್ತಿಗೆ ಗ್ರಾಮದಿಂದ ಪ್ರಾರಂಭವಾಗಿ ಶ್ರೀಗಳು ಪಾದಯಾತ್ರೆ ಪ್ರಾರಂಭಿಸಿದರು.
ಶ್ರೀಗಳ ಆಗಮದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಸ್ವತಃತಾವೇ ಬೀದಿಯನ್ನು ಸ್ವಚ್ಛ ಮಾಡಿ. ತಾವೇ ರಸ್ತೆಯ ಮೇಲೆ ರಂಗೋಲಿ ಹಾಕಿ ಸಿಂಗಾರ ಗೊಳಿಸಿದ್ದರು. ಗ್ರಾಮದ ಮುಖ್ಯೆದ್ವಾರದಿಂದ ಶ್ರೀಗಳು ಹಾಗೂ ಭಕ್ತರ ಜೊತೆಯಲ್ಲಿ ಆರಂಭವಾದ ಶ್ರೀಗಳ ಪಾದಯಾತ್ರೆಯೂ ಪ್ರಾರಂಭವಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ಸಾಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ನಂತರ ಧರ್ಮ ಸಭೆಯು ನಡೆಯಿತು. ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು. ಹೂವಿನ ಹಡಗಲಿಯ ಡಾ.ಹಿರಿ ಶಾಂತವೀರ ಸ್ವಾಮಿಗಳು ಹೂವಿನಹಡಗಲಿ. ಬಳಗಾನೂರಿನ ಶಿವಶಾಂತವೀರ ಗ್ರಾಮದ ಶರಣರು ಉಪಸ್ಥಿತರಿದ್ದರು.