ಶ್ರೀವ್ಯಾಸರಾಜ ಶ್ರೀಮಠದಲ್ಲಿ ಶ್ರೀಪುರಂದರ ದಾಸರ ಆರಾಧನಾ ಮಹೋತ್ಸವ
ಬಳ್ಳಾರಿ 04: ನಗರದ ರೇಡಿಯೋ ಪಾಕರ್್ನ ಶ್ರೀವ್ಯಾಸರಾಜ ಶ್ರೀಮಠದಲ್ಲಿ ಶ್ರೀಪುರುಂದರ ದಾಸರ ಆರಾಧನಾ ಮಹೋತ್ಸವ ನಿಮಿತ್ತ ಶ್ರೀಗುರುರಾಜ ಸೇವಾ ಸಮೀತಿ ಆಶ್ರಯದಲ್ಲಿ ಭಜನಾ ಮಂಡಳಿಗಳ ಸದಸ್ಯರಿಗೆ ಶ್ರೀಪುರುಂದರ ದಾಸರ ಕುರಿತು ರಸಪ್ರಶ್ನೆ ಹಾಗೂ ಹಾಡುಗಳ ಸ್ಪಧರ್ೆಯನ್ನು ಆಯೋಜಿಸಲಾಗಿತ್ತು. ಶ್ರೀಮಠದ ಪ್ರಧಾನ ಅರ್ಚಕ ಕೆ.ಪಾಂಡುರಂಗಾಚಾರ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಪಧರ್ೆಯಲ್ಲಿ 7 ತಂಡಗಳು ಬಾಗವಹಿಸಿದ್ದವು. ಅದರಲ್ಲಿ ಶ್ರೀವ್ಯಾಸರಾಜ ಭಜನಾ ಮಂಡಳಿ ಮೊದಲು, ಶ್ರೀಲಕ್ಷ್ಮೀ ನರಸಿಂಹ ಭಜನಾ ಮಂಡಳಿ ಎರಡನೇ, ಶ್ರೀವೈಷ್ಣವಿ ಭಜನಾ ಮಂಡಳಿ ಮೂರನೇ ಸ್ಥಾನಗಳನ್ನು ಪಡೆದವು. ನಿಣರ್ಾಯಕರಾಗಿ ಗೋಪಮ್ಮ ಹಆಗೂ ಬದರಿನಾಥ್ ಅವರು ಕಾರ್ಯ ನಿರ್ವಹಿಸಿದರು. ವಿಜಯಲಕ್ಷ್ಮೀ ಹಾಗೂ ಡಿ.ಎಚ್.ಲಲಿತಾ ಹಾಗೂ ಬಿ.ಅನಂತಾಚಾರ್ಯ ಅವರು ರಸಪ್ರಶ್ನೆ ಸ್ಪಧರ್ೆಗೆಯಲ್ಲಿ ನಿಣರ್ಾಯಕರಾಗಿ ಕೆಲಸ ನಿರ್ವಹಿಸಿದರು. ಸಮೀತಿಯ ಅಧ್ಯಕ್ಷ ಡಿ.ಎಚ್.ರಘುನಾಥ್ ರಾವ್ ಮಾತನಾಡಿದರು. ಕಾರ್ಯದಶರ್ಿ ಎಚ್.ವೇಣುಗೋಪಾಲ್ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಮೀತಿಯ ಪದಾಧಿಕಾರಿಗಳಾದ ಬಿ.ಗೋಪಿನಾಥ್ ರಾವ್, ಕೆ.ವಿಜಯಮೂತರ್ಿ, ರವೀಂದ್ರ ದೇಸಾಯಿ, ರಾಮಣ್ಣ, ಡಿ.ಎಸ್.ವೇಣುಗೋಪಾಲ್, ಎ.ಕೃಷ್ಣಮೂತರ್ಿ ರಾವ್, ಜಿ.ಎಂ.ನರಸಿಂಹ ಮೂತರ್ಿ, ಎಂ.ಭೀಮರಾವ್ ಕುಲಕಣರ್ಿ ಸೇರಿದಂತೆ ವಿವಿಧ ಭಜನಾ ಮಂಡಳಿ ಸದಸ್ಯರು ಇತರರಿದ್ದರು. ಸಿ.ಕೆ.ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ವಿಜೇತ ಭಜನಾ ಮಂಡಳಿ ಎಲ್ಲ ಸದಸ್ಯರಿಗೆ ಶ್ರೀಮಠದಲ್ಲಿ ನಡೆಯಲಿರುವ ಶ್ರೀಪುರುಂದರ ದಾಸರ ಆರಾಧನೆ ಮಹೋತ್ಸವದಲ್ಲಿ ಬಹುಮಾನ ವಿತರಿಸಿ ಗೌರವಿಸಲಾಗುವುದು.