ಅಥಣಿ

ಶಿರೂರ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಶಿರೂರ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಲೋಕದರ್ಶನ ವರದಿ

ಸಂಬರಗಿ 02: ಶಿರೂರ ಗ್ರಾಮದ ಪಿಕೆಪಿಎಸ್ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪರಶುರಾಮ ಜ್ಞಾನೋಬಾ ಹಜಾರೆ ಹಾಗೂ ಉಪಾಧ್ಯಕ್ಷರಾಗಿ ಮಾಲಾಬಾಯಿ ಬಸಗೊಂಡ ಪಾಟೀಲ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶಾ ಬಿರಾದಾರ ತಿಳಿಸಿದ್ದಾರೆ.

ಸಂಘಕ್ಕೆ 12 ನಿರ್ದೇಶಕರು ಆಯ್ಕೆಯಾಗಿದ್ದು, ಎಲ್ಲರ ಸಹಮತಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ. ಆಯ್ಕೆಯಾದ ನಂತರ ಸಂಘದಿಂದ ಸತ್ಕರಿಸಲಾಯಿತು. 

ಸಂಘದ ನಿರ್ದೇಶಕರಾದ ತುಳಸಿರಾಮ ಹಜಾರೆ, ಲಕ್ಷ್ಮಣ ಹಜಾರೆ, ನಾಮದೇವ ಹಜಾರೆ, ದಗಡು ಸನದಿ, ಪರಶುರಾಮ ಖಾಂಡೇಕರ, ತಾನಾಜಿ ಚವ್ಹಾಣ, ಸುವರ್ಣಾ ಮೋಪಗಾರ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಳು ಹಜಾರೆ, ಬೀರಪ್ಪಾ ಉಗಾರೆ, ಶ್ರೀಶೈಲ ಪಾಟೀಲ, ಸೀತಾರಾಮ ಹಜಾರೆ, ಅಪ್ಪಾ ಹಜಾರೆ, ಮಚ್ಚಿಂದರ ಖಾಂಡೇಕರ, ಬಸು ಗಸ್ತೆ, ಸಂಘದ ಮುಖ್ಯ ಕಾರ್ಯನಿರ್ವಾಹಕ ಸಚಿನ ಹೊನ್ನಾಗೋಳ, ಸಚೀನ ಹಜಾರೆ, ಸೇರಿದಂತೆ ಗ್ರಾಮದ ಗಣ್ಯರು ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ