ಶಿರಗುಪ್ಪಿ ಡಾಕ್ಟರ್ ಅಮೋಲ್ ಸರಡೆ ಅವರ ಜನಸ್ನೇಹಿ ಕಾರ್ಯಾಲಯಕ್ಕೆ ಶಾಸಕ ರಾಜು ಕಾಗೆ ಚಾಲನೆ
ಮಾಂಜರಿ12:ಕಾಗವಾಡ್ ತಾಲೂಕಿನ ಶಿರಗುಪ್ಪಿ ಗ್ರಾಮದ ಡಾಕ್ಟರ್ ಅಮೋಲ್ ಸರಡೆ ಅವರ ಜನಸ್ನೇಹಿ ಕಾರ್ಯಲಯದ ಉದ್ಘಾಟನೆಯನ್ನು ಕಾಗವಾಡದ ಶಾಸಕರಾದ ರಾಜು ಕಾಗೆ ಇಂದು ನೆರವೇರಿಸಿ, ಡಾಕ್ಟರ್ ಅಮೋಲ್ ಸರಡೆ ಅವರ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜನತಾ ಜನಾರ್ಧನನ ಆಶೀರ್ವಾದವೊಂದಿದ್ದರೇ ರಾಜಕೀಯದಲ್ಲಿ ಯಾರೂ ಬೇಕಾದರೂ ಉನ್ನತ ಹುದ್ದೆಗೆ ಹೋಗಬಹುದು. ಡಾಕ್ಟರ್ ಅಮೋಲ್ ಸರಡೆ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಜನರ ಸೇವೆ ಮಾಡುವ ಅವರ ಕಾರ್ಯ ನಿರಂತರವಾಗಿರಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಮೋಹನ್ ಶಹಾ ಮಾತನಾಡಿ, ಜನಸ್ನೇಹಿ ಕಾಯರ್ಾಲಯ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸಲಿ ಎಂದರು. ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ದಿಗ್ವಿಜಯ್ ಪವಾರ್ ದೇಸಾಯಿ, ಕಾಗವಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಅಕಿವಾಟೆ, ಹೆಸರಾಂತ್ ನಡೆದಾಡುವ ಕಂಪ್ಯೂಟರ್ ಎಂದೇ ಖ್ಯಾತಿ ಹೊಂದಿರುವ ಅಥಣಿಯ ಬಸವರಾಜ್ ಉಮರಾಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ವೇಳೆ ಶಾಸಕರನ್ನು ಅತಿಥಿಗಳನ್ನು ಡಾಕ್ಟರ್ ಅಮೋಲ್ ಸರಡೆ ಅವರು ಸತ್ಕರಿಸಿ, ಗೌರವಿಸಿದರು. ಈ ಸಮಯದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಅನೇಕ್ ಮುಖಂಡರು, ಗಣ್ಯರು, ಡಾಕ್ಟರ್ ಅಮೋಲ್ ಸರಡೆ ಅವರ ಅಭಿಮಾನಿಗಳು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು. ಡಾಕ್ಟರ್ ಅಮೋಲ್ ಸರಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಕಲಾವಿದ ರಾಜು ಚೌಗುಲೆ ಸ್ವಾಗತ ಗೀತೆ ಪ್ರಸ್ಥುತಪಡಿಸಿದರು. ಪ್ರಕಾಶ್ ಹೆಮಗೀರೆ ನಿರೂಪಿಸಿದರು. ಡಾಕ್ಟರ್ ಅಮೋಲ್ ಸರಡೆ ವಂದಿಸಿದರು.