ಬೇಡಿಕೆ ಈಡೇರಿಸದಿದ್ದರೆ ಸೇವೆ ಸ್ಥಗಿತ :16ಕ್ಕೆ ಅನಿರ್ದಿಷ್ಟ ಮುಷ್ಕಾರ
ಲೋಕದರ್ಶನ ವರದಿ
ಹೂವಿನಹಡಗಲಿ 10: ಸರಕಾರಿ ವೈದ್ಯರ ಮತ್ತು ನೌಕರರು ಸಿಬ್ಬಂದಿ ಬೇಡಿಕೆಗಳನ್ನು 15ರೊಳಗೆ ಈಡೇರಿಸದಿದ್ದರೆ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಹೂವಿನಹಡಗಲಿ ತಾಲೂಕು ಘಟಕ ಎಚ್ಚರಿಸಿದೆ.ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ನವೀನ, ಡಾ.ವಿನೋದ,ಡಾ. ದರ್ಶನ,ಡಾ.ವಿಕಾಸ , ಬೀರಬ್ಬಿ ಮಹೇಶ ಮಾತನಾಡಿ ಬೇಡಿಕೆಗಳನ್ನುಈಡೇರಿಸದಿದ್ದರೆ ಮಾ. 11ರಿಂದ 15ರವರೆಗೆ ಕಪ್ಪುಪಟ್ಟಿ ಧರಿಸಿ ಕೇವಲ ತುರ್ತು ಸೇವೆಯನ್ನು ಮಾತ್ರ ಒದಗಿಸಲಾಗುವುದು.
ಮಾ.16 ರಿಂದ ಸಂಪೂರ್ಣವಾಗಿ ಸೇವೆಯನ್ನು ಸ್ಥಗಿತಗೊಳಿ ಅನಿರ್ದಿಷ್ಟ ಮುಷ್ಕಾರವನ್ಬು ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರ ಕ್ಕೆ ಎಚ್ಚರಿಕೆ ನೀಡಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅದ್ಯಕ್ಷ ಎ.ಕೊಟ್ರಗೌಡ ಸರಕಾರಿ ವೈದ್ಯರ ಮತ್ತು ನೌಕರರ ಅನಿರ್ದಿಷ್ಟ ಮುಷ್ಕರ ಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್ ಹೆಚ್ ಎಂ. ವೈ ಶಿವಕುಮಾರ್ ತಾಲೂಕು ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷರು,ಮಧು ಎಂಪಿ ಜಿಲ್ಲಾಧ್ಯಕ್ಷರು ಸಿ ಹೆಚ್ ಓ ಸಂಘ, ಗುಡೆಕೋಟಿ ರಾಜೇಂದ್ರ ,ನಂಜುಂಡಪ್ಪ ರಾಜ್ಯ ಪರಿಷತ್ ಸದಸ್ಯರು ರಾಜ್ಯ ನೌಕರ ಸಂಘ, ಬಸವರಾಜಯ್ಯ ಜಿಲ್ಲಾ ಲ್ಯಾಬ್ ಟೆಕ್ನಾಲಜಿ ಸಂಘದ ಅಧ್ಯಕ್ಷರು, ಶ್ರೀಮತಿ ಸವಿತಾ ತಾಲೂಕ ಅಧ್ಯಕ್ಷರು ಪಿ.ಹೆಚ್. ಸಿ ಓ ಸಂಘ, ಮತ್ತು ಆರೋಗ್ಯ ಇಲಾಖೆಯ ವಿ .ಬಸವರಾಜ್. ಶಿವಪ್ಪ, ಜೀವಿ ಶಿವಕುಮಾರ್ ನೇತ್ರಾವತಿ ಸರಿತಾ ಇದ್ದರು.