ರಾಣೆಬೆನ್ನೂರ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸತ್ಯಾಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸತ್ಯಾಗ್ರಹ

ಲೋಕದರ್ಶನ ವರದಿ

ರಾಣಿಬೆನ್ನೂರ 05:  ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರಸಭೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಾಹನ ಚಾಲಕರು ಹಾಗೂ ನೀರು ಸರಬರಾಜುದಾರರು ಇಲ್ಲಿನ ನಗರಸಭೆ ಮುಂದೆ ಅನಿರ್ಧಿಷ್ಟಾವಧಿವರಗೆ ಅಹೋರಾತಿ ಧರಣಿ ಸತ್ಯಾಗ್ರಹ ನಡೆಸಿದರು.  

      ಧರಣಿ ನಿರತ ಸ್ಥಳಕ್ಕೆ ಬೇಟಿ ನೀಡಿದ ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಪೌರಕಾರ್ಮಿಕರಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ಮನೆಗಳನ್ನು ನೀಡಬೇಕು. ಕಸ ಸಾಗಿಸುವ ವಾಹನ ಚಾಲಕರು ವಾಟರ್ಮೆನ್, ಡೇಟಾ ಆಪರೇಟರ್, ಯುಜಿಡಿ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಸ್ಮಶಾನ ಕಾವಲುಗಾರರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಬದಲು ಪೌರಕಾಮರ್ಿಕರ ಮಾದರಿಯಲ್ಲಿ ನೇರ ನೇಮಕಾತಿ ಜಾರಿಗೊಳಿಸಬೇಕು. ನೇರಪಾವತಿ ಪೌರಕಾರ್ಮಿಕರು ಅಕಾಲಿಕ ಮರಣ ಹೊಂದಿದ್ದಲ್ಲಿ ಅವರ ಮನೆಯ ಸದಸ್ಯರೊಬ್ಬರಿಗೆ ಖಾಯಂ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು

     ನೇರಪಾವತಿ ಪೌರಕಾಮರ್ಿಕರು ಅಕಾಲಿಕ ಹಾಗೂ ಹೊರ ಗುತ್ತಿಗೆ ಕಾರ್ಮಿಕರಿಗೆ ಮಾಸಿಕ ರಜೆ (ಸಿಎಲ್) ನೀಡಬೇಕು. ಪೌರಕಾರ್ಮಿಕ ದಿನಾಚರಣೆಯಲ್ಲಿ ಪೌರಕಾರ್ಮಿಕರಿಗೆ ನೀಡುವ ಬೋನಸ್ ರೂ.7500 ಗಳನ್ನು ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುವುದು. ಚಾಲಕರಿಗೂ ಬೆಳಗಿನ ಉಪಹಾರ ನೀಡುವುದು. ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರಿಗೂ ಹಾಗೂ ಯುಜಿಡಿ ಕಾರ್ಮಿಕರಿಗೂ ವಿಮೆ ಮತ್ತು ಆರೋಗ್ಯ ತಪಾಷಣೆಯನ್ನು 3 ತಿಂಗಳಿಗೊಮ್ಮೆ ಮಾಡಿಸಬೇಕು. ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ 2 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. 

   ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರ ಮಾದರಿಯಲ್ಲಿಯೇ ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಎಂದು ಒತ್ತಾಯಿಸಿದರು.

    ನಗರಸಭೆ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕರಬಸಪ್ಪ ದಾಸಪ್ಪನವರ, ಕಾರ್ಯದರ್ಶಿ ಮೈಲಪ್ಪ ದಾಸಪ್ಪನವರ, ರವಿ ಮೆಣಸಿನಹಾಳ, ಮಂಜುನಾಥ ಆರಿಕಟ್ಟಿ, ಹನುಮಂತ ನಡಿವಿನಕೇರಿ, ದಿನಗೂಲಿ ಪೌರಕಾರ್ಮಿಕರ ಮತ್ತು ನೀರು ಸರಬರಾಜು ಸಂಘದ ಅಧ್ಯಕ್ಷ ಕೆ.ಹೆಚ್.ಮಾಂತೇಶ, ಕೆ.ಹನುಮಂತಪ್ಪ, ಕಾರ್ಯದರ್ಶಿ ಮಹೇಶ ಜೋಗಣ್ಣನವರ, ಗೌರವಾಧ್ಯಕ್ಷ ರಾಮಚಂದ್ರಪ್ಪ ಹೊರಹೊಕ್ಕನವರ, ನಾಗರಾಜ ಸಣ್ಣಪ್ಪನವರ, ಹನುಮಂತಪ್ಪ ಬಿಂಗೇರ, ಮಾಳೇವ್ವ ಹಲವಾಗಲ, ಗುತ್ತೇವ್ವ ಬಿಂಗೇರ ಸ್ಭೆರಿದಂತೆ ಮತ್ತಿತರರು ಇದ್ದರು. 

    ಇದೇ ಸಂದರ್ಭದಲ್ಲಿ ಸತ್ಯಾಗ್ರಹ ನಿರತ ಸ್ಥಳಕ್ಕೆ  ಬೇಟಿ ನೀಡಿ ನಿಮ್ಮ ಹೋರಾಟಕ್ಕೆ ಪೌರ ಸೇವಾ ನೌಕರ ಸಂಘದ ಅಧ್ಯಕ್ಷ ಕೋಟೇಪ್ಪ ಗೋಣಿಬಸಮ್ಮನವರ, ಮಾಳಮ್ಮ ಬೀರಾಳ, ಮಹೇಶ ಕಲಾಲ, ಎಲ್.ಶಂಕರ್, ರಾಘವೇಂದ್ರ ಗಾವಟೆ, ರವಿ ಮೆಣಸಿನಹಾಳ, ಮಂಜುನಾಥ ಆರಿಕಟ್ಟಿ, ಹನುಮಂತ ನಡುವಿನಮನಿ, ಹನುಮಂತ ದಾಸಪ್ಪನವರ, ಕಿರಣ ಹೆಚ್, ಅಲೋಕ ಆರಿಕಟ್ಟಿ, ಕುಮಾರ ಗೋಲ್ಲರ, ಸಚಿನ್ ಮುದೇನೂರು, ಶಿವರಾಜ ಆರಿಕಟ್ಟಿ ಮತ್ತಿತರರು ಬೆಂಬಲ ವ್ಯಕ್ತಪಡಿಸಿದ ನಿಮ್ಮ ಹೋರಾಟಕ್ಕೆ ನಮ್ಮ ಸಹಕಾರ ಇರುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ನಗರಸಭಾ ಸದಸ್ಯ ನಂಗರಾಜ ಕೋಡಿಹಳ್ಳಿ, ಶಿಶಿಧರ ಬಸೇನಾಯಕರ, ಹನುಮಂತಪ್ಪ ಕಬ್ಬಾರ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಂತರ ಪೌರಾಯುಕ್ತ ಉದಯಕುಮಾರ .ಟಿ ಸ್ಥಳಕ್ಕೆ ಬೇಟಿ ನೀಡಿ ನಿಮ್ಮ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು 

ಸುದ್ದಿ ಓದಿ