ಸಂತೃಪ್ತಿ ಸೇವಾ ಭಾಗ್ಯದ ಸ್ಮರಣೆ
ಮನದ ತಮವ ಕಳೆದು
ವಿದ್ಯಾದಾನ ಮಾಡಿದ ಗುರುವಿಗೆ
ಗುರುಸ್ಮರಣೆ ದೀಪವೊಂದನ್ನು
ಹಚ್ಚಿಟ್ಟುಕೊಳ್ಳಬೇಕು ಎದೆಯ ಗೂಡಿನೊಳಗೆ
ಪ್ರೊ,ಎನ್.ವ್ಹಿ.ತುಳಸಿಗೇರಿಯವರು ಕ್ರಿಯಾಶೀಲ ವ್ಯಕ್ತಿಗಳಾಗಿದ್ದು,ವಿದ್ಯಾಥರ್ಿಗಳ ಸರ್ವಾರ್ಾಗೀಣ ಪ್ರಗತಿಗಾಗಿ ಶ್ರಮಿಸುವದುಂಟು. ' ಆದಮೀ ನಾಮಸೇ ಬಡಾ ನಹಿ ಲೇಕಿನ ಕಾಮಸೇ ಬಡಾ ಹೋತಾ ಹೈ ವ್ಯಕ್ತಿ ಹೆಸರಿನಿಂದ ದೊಡ್ಡವನಲ್ಲಾ.ಅವನು ಮಾಡುವ ಸತ್ಕಾರ್ಯಗಳಿಂದ ದೊಡ್ಡವವೆನಿಸಿಕೊಳ್ಳುತ್ತಾನೆ.ಅಂತಹ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಮಾಡಿಕೊಡಲು ನನಗೆ ಬಹಳ ಸಂತಸವೆನಿಸುತ್ತದೆ.
ಪ್ರೊ.ಎನ್.ವ್ಹಿ.ತುಳಸಿಗೇರಿಯವರು ದಿ.12-08-1958 ರಲ್ಲಿ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪುರ ಗ್ರಾಮದ ತಂದೆ ವೆಂಕಪ್ಪ ತಾಯಿ ಗಂಗವ್ವ ದಂಪತಿಗಳ ಉದರದಲ್ಲಿ ಜನಿಸಿದರು ಹಿರಿಯ ಸಹೋದರ ಶ್ರೀಯುತ ರಾಮಣ್ಣ ತುಳಸಿಗೇರಿಯವರು ಖಾದಿ ಗ್ರಾಮೋದ್ಯೋಗದಲ್ಲಿ ಮ್ಯಾನೇಜರಾಗಿ ಸೇವೆ ಸಲ್ಲಿಸುತ್ತಿದ್ದರಿಂದ ಅವರ ಮನೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಇವರ ಜೊತೆಗೆ ಇನ್ನುಳಿದ ಸಹೋದರರು ಚಿಕ್ಕಪ್ಪನ ಮಕ್ಕಳು ಕೂಡಿ ಕಲಿತದ್ದು ಇವರು ಎಂದೂ ಜೀವನದಲ್ಲಿ ಮರೆಯಲಾರರು. ಇವರೆಲ್ಲರೂ ಶಿಕ್ಷಣ ಕಲಿಯಲು ಆಧಾರಸ್ಥಂಬವಾಗಿ ನಿಂತು ಶಿಕ್ಷಣ ಕಲಿಸಿದ ಸಹೋದರನ ಸ್ಮರಣೆ ಅವರ ಮನದಲ್ಲಿ ಸದಾ ಅಚ್ಚಹಸಿರಾಗಿದೆ. ಆಮಖಂಡಿಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿ ಪಿಯುಸಿಯನ್ನು ರಾಮದುರ್ಗ ತಾಲೂಕಿನ ಕಡಕೋಳದಲ್ಲಿ ಮುಗಿಸಿದ್ದಾರೆ.ಅಲ್ಲಿ ಬೋರ್ಡಿಂಗದಲ್ಲಿದ್ದ ಊಟದ ವ್ಯವಸ್ಥೆಯನ್ನು ಎದುರಿಸಿ ಕಷ್ಟದಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.
ಶ್ರೀಯುತರು ಉತ್ತರ ಕನರ್ಾಟಕದ ಪ್ರತಿಷ್ಠತ ವಿದ್ಯಾಸಂಸ್ಥೆಗಳಲ್ಲೊಂದಾದ ಬಾಗಲಕೋಟೆಯ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ(1979ರಿಂದ 1981)ಬಿ.ಎ.ಪದವಿಯನ್ನು ಮುಗಿಸಿದರು. ಪದವಿಯನ್ನು ಕಲಿಯುವಾಗ ಎನ್.ಸಿ.ಸಿ.ಯಲ್ಲಿ ಉತ್ತಮ ಕೆಡೆಟ ಪ್ರಶಸ್ತಿಗೆ ಭಾಜನರಾಗಿದ್ದು ಅವಿಸ್ಮರಣೀಯ ಸಂಗತಿಯಾಗಿದೆ.ಇದರ ಜೊತೆಗೆ ಖೋ ಖೋ ಆಟದಲ್ಲಿ ಭಾಗವಹಿಸಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದು ಅವರ ಕ್ರೀಡಾಭಿಮಾನದ ಆಸಕ್ತಿಯನ್ನು ಪ್ರಸ್ತುತಪಡಿಸುತ್ತದೆ.
1983-84 ನೇ ಸಾಲಿನಲ್ಲಿ ಜಮಖಂಡಿ ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್.ಮುಗಿಸಿ ಮುಂದೆ ಪ್ರೌಢಶಾಲೆ ಸಹ ಶಿಕ್ಷಕರಾಗಿ ಆಯ್ಕೆಗೊಂಡಿದ್ದು ಇವರ ಪ್ರತಿಭೆಗೆ ಸಂದಗೌರವಾಗಿದೆ. ಶ್ರೀಯುತರು ಪ್ರೌಢಶಾಲಾ ಸಹಶಿಕ್ಷಕರಾಗಿ 1984 ಆಗಸ್ಟ್ 14 ರಂದು ಬೀದರ ಜಿಲ್ಲೆಯ ಬೀದರ ತಾಲೂಕಿನ ಮಾಳೇಗಾಂವದ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿ ಅಲ್ಲಿಂದ 1986 ರಲ್ಲಿ ವರ್ಗಾವಣೆಗೊಂಡು ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಮತ್ತೆ 1987 ರಲ್ಲಿ ಜೇವರಗಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಗೆ ಹಾಜರಾಗಿ ಕಾರ್ಯನಿರ್ವಹಿಸಿದರು. ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಈಗಿನ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನೀರಬೂದಿಹಾಳ ಸರಕಾರಿ ಪ್ರೌಢಶಾಲೆಗೆ1991 ರಲ್ಲಿ ವಗರ್ಾವಣೆಗೊಂಡು ಅಲ್ಲಿಗೆ ಬಂದರು.ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಮುಧೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶಾಲಾ ತಪಾಸಣಾಧಿಕಾರಿಯಾಗಿ ಐದು ವರ್ಷಗಳ ಕಾಲ1995 ಮೇ ದಿಂದ 2000 ಜುಲೈದವರೆಗೆ ಕಾರ್ಯನಿರ್ವಹಿಸಿದ್ದಾರೆ. ಶಾಲಾ ತಪಾಸಣಾಧಿಕಾರಿಗಳಾದ ಸಂದರ್ಭದಲ್ಲಿ ದಕ್ಷತೆಯಿಂದ,ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿಷ್ಠೆಯಿಂದ,ಪ್ರಾಮಾಣಿಕತೆಯಿಂದ ಆಡಳಿತ ಮಾಡಿದ ಶ್ರೇಯಸ್ಸು ಇವರದಾಗಿದೆ. ದಾನೆ ದಾನೆ ಪರ ಲಿಖಾ ಹೈ ಖಾನೆವಾಲಾ ಕಾ ನಾಮ ಕುಸರ್ಿ ಕುಸರ್ಿ ಪರ ಲಿಖಾಹೈ ಬೈಠನೆ ವಾಲೆ ಕಾ ನಾಮ
ಕಲಿಯುವಾಗ ಕಷ್ಟ-ನಷ್ಟಗಳನ್ನು ಎದುರಿಸಿ ಶಾಲಾ ತಪಾಸಣಾಧಿಕಾರಿಯಾಗಿ ಸ್ವಂತ ಮುಧೋಳ ತಾಲೂಕಿನಲ್ಲಿ ಆಡಳಿತ ಸೇವೆಯನ್ನು ಮಾಡುವ ಸೌಭಾಗ್ಯ ದೊರೆತದ್ದು ನೆನಸಿಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಸಂತೃಪ್ತಿ ಭಾವನೆಯಿಂದ ಸೇವೆ ಮಾಡಿದ್ದು ಅವರ ಆತ್ಮಸಾಕ್ಷಿಗೆ ಕೈಗನ್ನಡಿಯಾಗಿದೆ.ವ್ಯಕ್ತಿ ದುಡ್ಡು ಬಟ್ಟೆಯಿಂದ ದೊಡ್ಡವನು ಅಲ್ಲಾ. ದೊಡ್ಡ ಗುಣದಿಂದ ದೊಡ್ಡವನಾದವನು.ವ್ಯಕ್ತಿ ಸತ್ಕಾರ್ಯದಿಂದ ಗುರುತಿಸಲ್ಪಡುವನು.
ಶ್ರೀಯುತರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು ಸಕಲ ಜನರೊಂದಿಗೆ ಬೆರೆಯುವ ಮನೋಭಾವನೆಯುಳ್ಳವರಾಗಿದ್ದಾರೆ.ಅವರಲ್ಲಿ ಸಂಘಟನಾ ಚಾತುರ್ಯ ಗುಣವಿದ್ದು,ಸಕಲ ಜನರೊಂದಿಗೆ ಬೆರೆತು ಸತ್ಕಾರ್ಯ ಮಾಡುವ ಸದ್ಭಾವನೆಯುಳ್ಳವರಾದ್ದಾರೆ. ಆದ್ದರಿಂದಲೇ ಮುಧೋಳದಲ್ಲಿ ಜರುಗಿದ 64 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜವಾಬ್ದಾರಿಯನ್ನು ಕಾಯರ್ಾಲಯಕ್ಕೆ ಒಪ್ಪಿಸಿದಾಗ ಪ್ರಾಮಾಣಿಕತೆಯಿಂದ,ನಿಷ್ಠೆಯಿಂದ ನಿರ್ವಹಿಸಿ ಸಾಹಿತಿಗಳಿಂದ ಪ್ರಶಂಸೆಯನ್ನು ಪಡೆದದ್ದುಂಟು. ಐದು ವರ್ಷಗಳ ಕಾಲದ ಆ ಅವಧಿಯಲ್ಲಿ ಪ್ರಭಾರಿ ಸಹಾಯಕ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ.
2000 ನೇ ಇಸ್ವಿಯಲ್ಲಿ ಶಾಲಾ ತಪಾಸಣಾಧಿಕಾರಿ ಹುದ್ದೆ ರದ್ದಾದಾಗ ಲೋಕಾಪುರದ ಶ್ರೀ ಮುರಾಜೀ ದೇಸಾಯಿ ವಸತಿ ಶಾಲೆಗೆ ವರ್ಗಾವಣೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಮುಂದೆ ಇವರು ಬಾಗಲಕೋಟ ಶಾಸಕರ ಮಾದರಿ ಪ್ರಾಥಮಿಕ ಶಾಲೆಗೆ ವಗರ್ಾವಣೆ ಹೊಂದಿ ಮೂರು ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ.
2005 ರಲ್ಲಿ ಸಹಶಿಕ್ಷಕ ಹುದ್ದೆಯಿಂದ ಪದೋನ್ನತಿ ಹೊಂದಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಶಿಕ್ಷಕರಾದವರು ಸದಾ ವಿದ್ಯಾಥರ್ಿಗಳಾಗಿ ಬದುಕಬೇಕು. ಜೀವನದುದ್ಧಕ್ಕೂ ಜ್ಞಾನಸಂಪಾದನೆ ಪರಮ ಗುರಿಯಾಗಿರಬೇಕು. ಇವರಲ್ಲಿ ಕಲಿಯುವ ಉತ್ಕಟ ಇಚ್ಛೆ ಇರುವುದರಿಂದ 1988 ರಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದು ಅವರ ಜ್ಞಾನಾರ್ಜನೆಯ ದಾಹವನ್ನು ಪ್ರತಿಬಿಂಬಿಸುತ್ತದೆ. ಈಗ ಅವರು 2006 ರಿಂದ ಸರಕಾರಿ ಪದವಿ ಪೂರ್ವ ಕಾಲೇಜ ಮುಧೋಳದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರ ಕ್ರಿಯಾಶೀಲ ವ್ಯಕ್ತಿತ್ವವನ್ನು ಸಂಘಟನಾ ಚಾತುರ್ಯವನ್ನು ಗುರುತಿಸಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್.ಜಿ.ಕೋಟಿಯವರು ಮುಧೋಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ(2008 ರಿಂದ 2011)ಕಾರ್ಯನಿರ್ವಹಿಸಲು ಅವಕಾಶವನ್ನು ಮಾಡಿಕೊಟ್ಟ ಅವಧಿಯಲ್ಲಿ 2010 ರಂದು ಮಾರ್ಚನಲ್ಲಿ ಬಾಗಲಕೋಟ ಜಿಲ್ಲೆಯ 2 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಧೋಳ ತಾಲೂಕಿನ ಲೋಕಾಪುರದಲ್ಲಿ ಆಯೋಜಿಸಿ ಅದನ್ನು ಯಶಸ್ವಿಯಾಗಿ ನಡೆಯಿಸಿದ ಶ್ರೇಯಸ್ಸು ಇವರದಾಗಿದೆ.
2011 ಡಿಸೆಂಬರ ತಿಂಗಳಲ್ಲಿ ಮುಧೋಳ ತಾಲೂಕಿನ ನಿಂಗಾಪುರ ಸ್ವಗ್ರಾಮದಲ್ಲಿ ಪ್ರೊ, ಎನ್.ವ್ಹಿ. ತುಳಸಿಗೇರಿಯವರು ಮುಧೋಳ ತಾಲೂಕಾ 2 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲ ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಗಿದ್ದನ್ನು ಎಂದಿಗೂ ಮರೆಯುಂತಿಲ್ಲ. ಈ ಸಮ್ಮೇಳನದಲ್ಲಿ ಶಿಲಾಧಾಮ ಎಂಬ ಸ್ಮರಣೆ ಸಂಚಿಕೆಯನ್ನು ಪ್ರಕಟಿಸಿದ್ದು ಗ್ರಾಮೀಣ ಪರಂಪರೆ, ತಾಲೂಕಾ ಪರಂಪರೆ,ಚಾರಿತ್ರಿಕ ಪರಂಪರೆಯ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ.ಅನೇಕ ಯುವ ಸಾಹಿತಿಗಳಿಗೆ,ಲೇಖಕರಿಗೆ,ಯುವಕವಿಗಳಿಗೆ ಲೇಖನಗಳನ್ನು ಬರೆಯಲು,ಕವನ ವಾಚನ ಮಾಡಲು ಆಸ್ಪದ ನೀಡಿ ಅವರಿಗೊಂದು ಸದಾವಕಾಶವನ್ನು ದೊರೆಕಿಸಿರುವುದು ಅತ್ಯಂತ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮುಖಗಳನ್ನು,ಹೊಸಪ್ರತಿಭೆಗಳನ್ನು ಗುರುತಿಸಿ ಸಮ್ಮೇಳನದಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದಾರೆ.ಅಲ್ಲದೆ ಪ್ರೊ,ಎನ್.ವ್ಹಿ. ತುಳಸಿಗೇರಿಯವರು ತಮ್ಮ ಸಂಪಾದಕತ್ವದಲ್ಲಿ ಚರಿತ್ರೆಯ ನೆನಹುಗಳು ಎಂಬ ಪುಸ್ತಕ ಪ್ರಕಟಿಸಿ ದೇಶದ ಜನಪ್ರಿಯ ಆಚರಣೆಗಳನ್ನು ಬಿಂಬಿಸುವ ಲೇಖನಗಳು ಜನ ಮಾನಸದಲ್ಲಿ ಅಚ್ಚಳಿಯದೇ ಉಳಿಯಲು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಶ್ರೀಯುತರು ರಾಜ್ಯ ಸರಕಾರಿ ನೌಕರರ ಮುಧೋಳ ತಾಲೂಕಾ ಘಟಕದ ಗೌರವ ಅಧ್ಯಕ್ಷರಾಗಿ ಎರಡು ಅವಧಿಗೆ(ಹತ್ತು ವರ್ಷ) ನೇಮಕಗೊಂಡಿದ್ದು ಅವರ ಕಾರ್ಯಸಾಧನೆಗೆ ಕ್ರಿಯಾಶೀಲತೆಗೆ ದಿಕ್ಸೂಚಿಯಾಗಿದೆ. ತಮ್ಮ ಸಮುದಾಯದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಎರಡು ಭಾರಿ ಜಿಲ್ಲಾ ರೆಡ್ಡಿ ಬಾಂಧವರು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಿಸಿಕೊಟ್ಟ ಕೀತರ್ಿ ಅವರದಾಗಿದೆ.ಶ್ರೀಯುತರು ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘಸೇವೆ ಸಲ್ಲಿಸಿ ಯಾವುದೇ ಕಪ್ಪು ಚಿಕ್ಕೆಯಿಲ್ಲದೆ,ದಕ್ಷತೆಯಿಂದ,ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ಅವರು2018 ರಂದು ಅಗಸ್ಟ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯನ್ನು ಹೊಂದ್ದಿದ್ದಾರೆ.
ಶ್ರೀಯುತರು ಮಿತ ಭಾಷಿಗರು,ಯಾವುದೇ ಪ್ರಶಸ್ತಿ, ಸನ್ಮಾನದ ಆಸೆಗೆ ಬೆಂಬತ್ತದೆ,ಸದಾ ತಮ್ಮನ್ನು ತಾವು ಕಾಯಕದಲ್ಲಿ ತೊಡಗಿಸಿಕೊಂಡವರು. ಸಾಧನೆಗಳೇ ನಮ್ಮ ಮಾತುಗಳಾಗಬೇಕೇ ಹೊರತು ಮಾತುಗಳೇ ನಮ್ಮ ಸಾಧನಗಳಾಗಬಾರದು.ಪ್ರೊ,ಎನ್.ವ್ಹಿ.ತುಳಸಿಗೇರಿಯವರು ಸದಾ ಹಸನ್ಮುಖಿಯಾಗಿ,ಸಹಪಾಠಿಗಳೊಂದಿಗೆ,ಸಾಹಿತಿಗಳೊಂದಿಗೆ,ಯುವ ಸಾಹಿತ್ಯಾಸಕ್ತರೊಂದಿಗೆ ಒಳ್ಳೆಯ ಒಡನಾಟ ಹೊಂದಿ ಸಾಹಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಹಿತ್ಯದ ಕಂಪನ್ನು ತಾಲೂಕಿನಾದ್ಯಂತ ಪಸರಿಸಿ ಒಳ್ಳೆಯ ಹೆಸರನ್ನು ಪಡೆದ ಕೀತರ್ಿ ಇವರದಾಗಿದೆ.
ಹೂವಾಗಿ ಮುಗುಳ್ನಗುವುದೇ ಜೀವನ
ಮುಗುಳ್ನಕ್ಕು ದು:ಖ ಮರೆಸುವುದೇ ಜೀವನ
ಗೆದ್ದು ಮುಗುಳ್ನವುದೇನು ದೊಡ್ಡ ಮಾತಲ್ಲ
ಸೋತ ನಂತರವೂ ಮುಗುಳ್ನಗುವುದೇ ಜೀವನ
ಶ್ರೀಯುತರ ನಿವೃತ್ತ ಜೀವನ ನಂದನವನವಾಗಲಿ.ದೇವರು ಅವರಿಗೆ ಒಳ್ಳೆಯ ಆಯುರಾರೋಗ್ಯ ಸಿರಿಸಂಪತ್ತು ಕೊಟ್ಟು ಕರುಣಿಸಲಿ,ನಿವೃತ್ತಿ ನಂತರವು ಅವರು ಸಾಹಿತ್ಯಕ್ಷೇತ್ರಕ್ಕೆ ಒಳ್ಳೆಯ ಸತ್ಕಾರ್ಯವನ್ನು ಮಾಡಲೆಂಬುದು ನಮ್ಮೆಲ್ಲರ ಮಹದಾಸೆಯಾಗಿದೆ.
- ಕೆ.ಬಿ.ಮರೋಬ
ಮುಧೋಳ
ಮೊ.9980292864