ಮೊಬೈಲ್ ನೆಟ್‌ವರ್ಕ್ ಸಿಕ್ತು! ಆದರೆ ನೆಮ್ಮದಿಯ ಜೀವನದ ಕನೆಕ್ಷನ್ ಕಟ್ಟಾಯ್ತು
ಲೋಕದರ್ಶನ ವರದಿ
ನಿಜಕ್ಕೂ ನನಗೆ ಏನು ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಜಗತ್ತುತಾಂತ್ರಿಕತೆಯ ಉತ್ತುಂಗಕ್ಕೆ ಹೋಗುತ್ತಿದೆ. ಹಾಗೆಯೇ ನೈತಿಕತೆಎನ್ನುವುದು ತಳಮಟ್ಟಕ್ಕೆ ತಲುಪುತ್ತಿದೆ. ಮಕ್ಕಳ ಮನಸ್ಸುಎಂಬುದು ಹತೋಟಿಗೆ ಸಿಗದೇ ಇರುವಂತ ಹುಚ್ಚು ಕುದುರೆಯ ಸಂಚಾರ ಮಾಡುತ್ತಿದೆ. ಯಾವ ಸಂದರ್ಭದಲ್ಲಿಯಾವ ಮಗು ಯಾವ ಹಂತಕ್ಕೆತಲುಪುತ್ತದೆ ಎನ್ನುವುದನ್ನು ನೀರೀಕ್ಷೆ ಮಾಡುವುದಕ್ಕೂ ಸಾಧ್ಯವಿಲ್ಲ. ಮೊನ್ನೆ ನಡೆದ ಒಂದು ಘಟನೆಯಂತೂ ಭಾರತದ ಮುಂದಿನ ಭವಿಷ್ಯದಕುರಿತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಆನ್‌ಲೈನ್ ಗೇಮ್ ಆಡುವುದಕ್ಕೆತಡೆ ಹಾಕಿದತಂದೆಯನ್ನು ಹಾಗೂ ಅಕ್ಕನನ್ನುಕೊಂದ ಹುಡುಗ ತಾಯಿಯ ಮೇಲೂ ಹಲ್ಲೆ ಮಾಡಿದ್ದು ಇನ್ನೂ ಹಸಿ ಹಸಿಯಾಗಿಯೇ ಉಳಿದಿದೆ.