ಸಂಸ್ಕಾರ ಶಿಕ್ಷಣದಿಂದ ಸದೃಡ ಸಮಾಜ ನಿಮರ್ಾಣ ಸಾದ್ಯ: ಡಾ||ಎಸ್.ಬಾಲಜಿ

ಸಂಸ್ಕಾರ ಶಿಕ್ಷಣದಿಂದ ಸದೃಡ ಸಮಾಜ ನಿಮರ್ಾಣ ಸಾದ್ಯ: ಡಾ||ಎಸ್.ಬಾಲಜಿ

ಬಳ್ಳಾರಿ 20:ಬಳ್ಳಾರಿಯ ವಿದ್ಯಾನಗರದಲ್ಲಿರುವ   ಶ್ರೀ ನಂದ ವಸತಿ ಶಾಲೆಯಲ್ಲಿ ಹತ್ತನೇ  ತರಗತಿಯ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಲಾಗಿದ್ದ  ಪಾಲಕರ  ಪಾದಪೂಜಾ   ಕಾರ್ಯಕ್ರಮದ ಉದ್ಘಾಟನಾ  ಬಾಷಣದಲ್ಲಿ ಮಾತನಾಡುತ್ತಾ ಪೂಜೆ ಕೃತಜ್ಙತೆಗಾಗಿ ನಡೆಯಬೇಕೇ ಹೊರತು ಯಾವುದೇ ಬೇಡಿಕೆಗಲ್ಲ ಭಗವತ್ ಸ್ವರೂಪಿಗಳಾದ ತಂದೆ ತಯಿಗಳ  "ಪಾದಪ್ರಜಾ" ಕಾರ್ಯವನನ್ನು ಪವಿತ್ರ ಸ್ಥಳವಾದ ಶಾಲೆಯಲ್ಲಿ  ಏರ್ಪಡಿಸಿರುವುದು  ಅತ್ಯಂತ ಶ್ಲಾಘನೀಯ ಎಂದು ಮೈಸೂರಿನ ರಾಮಕೃಷ್ಣ ವಿದ್ಯಾಲಯದ ಪ್ರಾಶುಪಾಲರಾದ ಡಾ||ಎಸ್.ಬಾಲಜಿಯವರು ನುಡಿದರು. ಅಂಕಗಳಿಕೆಯನ್ನೇ ಮಾನದಂಡವಾಗಿರಿಸಿಕೊಂಡ ಶಿಕ್ಷಣ ವ್ಯವಸ್ಥೆಗೆ ಮೌಲ್ಯದ ಲೇಪನವಾದಾಗ ಮಾತ್ರ  ಪರಿಪೂರ್ಣ ಶಿಕ್ಷಣವಾಗುವುದೆಂದು ಅವರು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅದ್ಯಕ್ಷ ವಿ.ಗಾಂಧಿಯವರು ಆದುನಿಕತೆಯ ಸೆಳೆತದಲ್ಲಿ  ನಮ್ಮ  ಸಾಂಪ್ರದಾಯಗಳು ನಶಿಸುತ್ತಿರುವುದುದು ನಿಜಕ್ಕೂ ಶೋಚನೀಯ , ಬೆಳೆಯುವ ಮಕ್ಕಳಲ್ಲಿ ಸಂಸ್ಕಾರಶಿಕ್ಷಣ ನೀಡುವುದರಿಂದ ಸಧೃಢವಾದ ಸಮಾಜವನ್ನು ಪ್ರತಿಷ್ಟಾಪಿಸಲು ಸಾದ್ಯ ಎಂದು ಹೇಳಿದರು ರವಿಚಂದ ಸಂಸ್ಕಾರ ಶಿಕ್ಷಣದ ಅಗತ್ಯವನ್ನು ತಮ್ಮದೇ ಆದ ಶೈಲಿಯಲ್ಲ ತಿಳಿಸಿದರಲ್ಲದೇ, ಶ್ರೀಮತಿ ಶಶಿಕಲಾ ಬಾಲಾಜಿ,ವಿಷ್ಣು ಬೋಯಾಪಾಟಿ ಮತ್ತು ಹಿರಿಯ ಶಿಕ್ಷಕ ಮುತ್ಯಾಲಪ್ಪ ಮಾತನಡಿದರು. ಒಂದುನೂರ ಹದಿನಾಲ್ಕು ಮತಾ ಪಿತೃಗಳ ಸಾಮೂಹಿಕ ಪಾದ ಪೂಜೆಯನ್ನು ಐವತ್ತೇಳು ವಿದ್ಯಾಥಿಗಳು  ಆಚಾರ್ಯ ಓಂಕಾರಸ್ವಾಮಿಯವರ ಮಂತ್ರಪಠನೆಯ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು. ಹಲವಾರು ಪೋಷಕರ  ಕಣ್ಣಂಚಿನಲ್ಲಿ ಕಣ್ಣೀರು ಜಿನುಗುವಂಥಹ ವಾತಾವರಣ ಹೃದಯ ಸ್ಪಶರ್ಿಯಾದ ಸನ್ನಿವೇಶವನ್ನು ಸೃಷ್ಟಿಸಿತ್ತು. ತಮ್ಮ ಶಿಷ್ಯ ಬಿಂದುಮಾಧವ ಸಲ್ಲಿಸಿದ  ಗುರುವಂದನಾ  ಕಾರ್ಯಕ್ರಮದ ತರುವಾಯ    ಭಾವುಕರಾಗಿ ಕಣ್ಣಿರು ತುಂಬಿಕೊಂಡಾಗ ಸಬೆ ಕ್ಷಣಕಾಲ ಭಾವಪರವಶವಾಗಿತ್ತು. ಮುಖ್ಯ ಶಿಕ್ಷಕ ರವಿಶಂಕರ್ ಪ್ರಾಸ್ಥಾವಿಕ ನುಡಿಗಳನ್ನಾಡಿದರೆ  ಕೆ,ಲಕ್ಷ್ಮೀಕಾಂತ್ ಸ್ವಾಗತಿಸಿದರು ಹಾಗೂ ಆಡಳಿತಧಿಕಾರಿ ಜಿ. ಹರಿಬಾಬು ವಂದಿಸಿದರು, ಕಾರ್ಯದಶರ್ಿ ವಿ, ರಮಣ್ ಕುಮಾರ್ ಉಪಸ್ಥಿತರಿದ್ದರು.


ಸುದ್ದಿ ಓದಿ