ಸಂಘ ಸಂಸ್ಥೆಗಳನ್ನು ವೈಯಕ್ತಿಕ ಪ್ರತಿಷ್ಟೆಗಾಗಿ ಕಟ್ಟಬಾರದು: ಜಿ.ಸೋಮಶೇಖರ
ಬಳ್ಳಾರಿ 29:ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು ದೊಡ್ಡ ವಿಷಯವಲ್ಲ ಅದರಿಂದ ಸಮಾಜಕ್ಕೆ ಎಂತಹ ಸೇವೆ ಸಿಗುತ್ತಿದೆ ಎನ್ನುವುದು ಮುಖ್ಯ ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹೇಳಿದರು. ಅವರು ಕಣೆಕಲ್ ರಸ್ತೆಯ ಸತ್ಯನಗರದ "ಪುಣ್ಯಭೂಮಿ" ಯಲ್ಲಿನ ವೆಂಕಟವರದಾಚಾರ್ಯ ಸೆವಾ ಸಂಸ್ಥೆ ಟ್ರಸ್ಟ್ನ ಮೊದಲ ವಾಷರ್ಿಕೋತ್ಸವ ಮತ್ತು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಘ ಸಂಸ್ಥೆಗಳನ್ನು ಕೇವಲ ವಯಕ್ತಿಕ ಪ್ರಿತಿಷ್ಟೆಗಾಗಿ ಕಟ್ಟಬಾರದು ಅದರಿಂದ ಸಮಾಜಕ್ಕೆ ಒಂದಿಷ್ಟು ಒಳಿತಾಗುವಂತ ಸೇವಾ ಚಟುವಟಿಕೆಗಳನ್ನು ಸಹ ಮಾಡುತ್ತಾ ಇರಬೇಕಾಗುತ್ತದೆ ಅಂದಾಗ ಮಾತ್ರ ಸಂಘ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಸಫಲವಾಗುತ್ತದೆ. ಈ ಟ್ರಸ್ಟ್ ನೋಂದಣಿಯಾಗಿ ಹಲವಾರು ವರ್ಷಗಳು ಕಳೆದರೂ ಈಗ ಇದರ ಚಟುವಟಿಕೆ ಆರಂಭಿಸಿದ್ದಾರೆ, ಬಳ್ಳಾರಿ ನಗರದಿಂದ 8 ಕಿ.ಮಿ ದೂರಯಿದ್ದರೂ ಕೂಡ ಇದರ ಮೊದಲ ವಾಷರ್ಿಕೋತ್ಸವ ಸಮಾರಂಭಕ್ಕೆ ನೂರಾರು ಜನ ಸೇರಿದ್ದು ಸಂತೋಷದ ವಿಷಯ ಇದು ಹೀಗೆ ಮುಂದುವರೆದ ಸಮಾಜಕ್ಕೆ ಮಾದರಿಯಾಗುವಂತ ಚಟಿವಟಿಕೆಗಳಿಂದ ರಾಜ್ಯ ಮಟ್ಟದಲ್ಲಿ ಹೆಸರಾಗಲಿ ಎಂದು ಆಶಿಸಿದರು. ಟ್ರಸ್ಟ್ನ ಅಧ್ಯಕ್ಷರಾದ ಕಲ್ಲೂರು ವೆಂಕಟೇಶುಲು ಶೆಟ್ಟಿಯವರು ಮಾತನಾಡಿ ಟ್ರಸ್ಟ್ವತಿಯಿಂದ ಉಚಿತ ಆರೋಗ್ಯ ಶಿಬಿರ, ಬಿಸಿಲಕಾಲದಲ್ಲಿ ನಗರದಲ್ಲಿ ಫಿಲ್ಟರ್ ಕುಡಿಯುವ ನೀರಿನ ಅರವಟಿಕೆಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ಸಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತದೆ. ಅದೇ ರೀತಿ ಮಡಿಕೇರಿಯಲ್ಲಿ ಪ್ರವಾಹದಿಂದ ತೊಂದರೆಗಿಡಾದವರಿಗೆ ಸುಮಾರು ಹತ್ತು ಲಕ್ಷ ರೂಪಾಯಿಗೆ ಹೆಚ್ಚಿನ ಬಟ್ಟೆ, ಬರೆ, ದಿನನಿತ್ಯದ ಸರಕು ಸರಂಜಾಮುಗಳು, ಔಷಧಗಳನ್ನು ಸ್ವತಃ ಟ್ರಸ್ಟ್ನ ಪದಾಧಿಕಾರಿಗಳೇ ಮಡಿಕೇರಿ ಹೋಗಿ ಪ್ರವಾಹ ಸಂತ್ರಸ್ತರಿಗೆ ವಿತರಿಸಿ ಬಂದಿರುತ್ತಾರೆ, ಅದರಂತೆ ಮುಂದಿನ ದಿನಗಳಲ್ಲಿ ಈ ಪುಣ್ಯಭೂಮಿಯ ಸ್ಥಳದಲ್ಲಿ ವೃದ್ಧಾಶ್ರಮ, ಬ್ರಹ್ಮ, ವಿಷ್ಟು, ಮಹೇಶ್ವರ ದೇವರ ಆಲಯಗಳನ್ನು ನಿಮರ್ಿಸಿವುದು, ಗೋಶಾಲೆಗಳನ್ನು ಆರಂಭಿಸುವುದು ಸೇರಿದಂತೆ ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದಶರ್ಿ ಪೋಲಾ ಬಸವರಾಜ್, ಕೋಶಾಧ್ಯಕ್ಷರಾದ ತಲ್ಲಂ ರಮೇಶ್, ಸಮಾಜದ ಮುಖಂಡರಾದ ಜಯಪ್ರಕಾಶ್ ಜೆ. ಗುಪ್ತ, ಡಾ. ಡಿ.ಎಲ್. ರಮೇಶ್ ಗೋಪಾಲ್, ಆದಿನಾರಾಯಣ ಶೆಟ್ಟಿ, ಜಿ.ರಾಮಚಂದ್ರರಾವ್, ಜಿ.ಉದಯಲಕ್ಷ್ಮಿ, ಶಾಸಕರ ಆಪ್ತ ಕಾರ್ಯದಶರ್ಿ ವೀರಶೇಖರ ರೆಡ್ಡಿ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಮೋತ್ಕರ್ ಶ್ರೀನಿವಾಸ್, ಮಾಜಿ ಉಪಮೇಯರ್ ಆದ ಶಶಿಕಲ, ಟ್ರಸ್ಟ್ನ ಪದಾಧಿಕಾರಿಗಳು ಸೇರಿದಂತೆ ಸಮಾಜದ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.