ಸಂಗನಕಲ್ಲು: ಕಡುಬಡವರಿಗಾಗಿ ಬೆಡ್ಶೀಟ್ಗಳ ವಿತರಣೆ

ಸಂಗನಕಲ್ಲು: ಕಡುಬಡವರಿಗಾಗಿ ಬೆಡ್ಶೀಟ್ಗಳ ವಿತರಣೆ

ಲೋಕದರ್ಶನ ವರದಿ

ಬಳ್ಳಾರಿ 26: ಸನ್ಮಾರ್ಗ ಥಿಯೋಸೋಫಿಕಲ್ ಸಮಾಜದಿಂದ ಥಿಯೋಸೋಫಿಕಲ್ ಸೇವಾ ವಿಭಾಗ ಕಾರ್ಯಕ್ರಮದಲ್ಲಿ ಸಂಗನಕಲ್ಲು ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಕಡುಬವರಿಗಾಗಿ ಚಳಿಗಾದಲ್ಲಿ 30 ಬೆಡ್ಶೀಟ್ಗಳನ್ನು ಹಂಚಿಕೆ ಮಾಡಲಾಯಿತು. ಈ ಸೌಭಾಗ್ಯವು ಸೇವಾ ವಿಭಾಗಕ್ಕೆ ದೊರೆತಿರುವುದು ನಮ್ಮಗಳ ಅದೃಷ್ಟ, ಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ಮುಂಚೂಣಿಯಾಗಿ ಬೆಡ್ಶೀಟ್ ನೀಡಿರುವ ಕೆ.ಎಂ.ಸತ್ಯನಾರಾಯಣ ಹಾಗೂ ಆರ್.ಗಂಗಾಶೆಟ್ಟಿ ಅವರಿಗೆ ಕೃತಜ್ಞತೆಗಳನ್ನು ತಿಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಥಿಯೋಸೋಫಿಕಲ್ ಸೇವಾ ವಿಭಾಗದ ಅಧ್ಯಕ್ಷರಾದ ಮೆದೆಹಾಳ್ ಬಸವರಾಜ ಇವರು ಮಾತನಾಡಿ, ದೀನ ದಲಿತರಿಗೆ ಸೇವೆ ಆಗಲೀ ವಿನಮ್ರತೆಯಿಂದ ಕೆಲಸ ಮಾಡಬೇಕು. ವಿನಮ್ರತಾಭಾವಿಂದ ನಿಸ್ವಾರ್ಥ ಸೇವಾಭಾವದಿಂದ ಮಾಡಬೇಕೆಂದು ಕರೆ ನೀಡಿದರು. 

ಸಂಸ್ಥೆಯ ಅಧ್ಯಕ್ಷರಾದ ಡಾ. ಎ.ಐ.ಬಸವರಾಜರೆಡ್ಡಿಯವರು ಕಾರ್ಯದಶರ್ಿ ಕಾಂಡ್ರಾ ನಾಗರಾಜ್ (ಸೇವಾ ವಿಭಾಗ), ಕೆ.ವಾಣಿ ಮತ್ತು ಎರ್ರಿಸ್ವಾಮಿ (ಖಜಾಂಚಿ,) ಶಂಕ್ರಣ್ಣ (ಜಂಟಿ ಕಾರ್ಯದಶರ್ಿ), ಜೆ.ಗೋವಿಂದರಾಜುಲು, ರತ್ನಾಲಶೆಟ್ಟಿ, ಎಂ.ನಾರಾಯಣಶೆಟ್ಟಿ, ಕೃಷ್ಣಮೂತರ್ಿ, ಕೃಷ್ಣವೇಣಮ್ಮ, ಜ್ಞಾನಮಣಿ, ಕಮಲಮ್ಮ,  ಉಪಸ್ಥಿತರಿದ್ದರು.

ಸುದ್ದಿ ಓದಿ