ಶ್ರದ್ಧಾ ಭಕ್ತಿಯಿಂದ ಸಂಪತ ಶುಕ್ರಗೌರಿ ಪೂಜೆ
ಲೋಕದರ್ಶನ ವರದಿ
ಯರಗಟ್ಟಿ 09: ಸಮೀಪದ ತಲ್ಲೂರ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ವಿವಿಧೆಡೆ ಶುಕ್ರವಾರ ಮನೆಗಳಲ್ಲಿ ಸಂಪತ ಶುಕ್ರಗೌರಿ ಪೂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಮಹಿಳೆಯರು ಮನೆಗಳಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಿದರು. ಲಕ್ಷ್ಮಿ ದೇವಿಯನ್ನು ವಿವಿಧ ಹೂವು ಆಭರಣಗಳಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಆರತಿ ಸಲ್ಲಿಸಲಾಯಿತು. ಸುಮಂಗಲೆಯರನ್ನು ಮನೆಗೆ ಕರೆದು ಅರಿಶಿಣ, ಕುಂಕಮ ನೀಡಿ ಉಡಿ ತುಂಬಿದರು. ಸಂಬಧಿಕರನ್ನು ಮನೆಗೆ ಅಹ್ವಾನಿಸಿ ಸಿಹಿ ಅಡುಗೆ ಮಾಡಿ ಮನೆಯ ಸದಸ್ಯರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ವಿಶೆಷ ಅಲಂಕಾರದೊಂದಿಗೆ ಮಹಾ ಮಂಗಳಾರುತಿ ಪಂಚಾಮೃತ ಕಾರ್ಯಗಳು ನೆರವೇರಿದವು. ಮಹಿಳೆಯರು ವ್ರತ ಆಚರಿಸುವ ಮೂಲಕ ಸುಖ, ಶಾಂತಿ, ನೆಮ್ಮದಿ ಧನ ಸಂಪತ್ತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಮಂಜುಳಾ ಮಠಪತಿ, ನಿರ್ಮಲಾ ಅಣ್ಣಿಗೇರಿ, ಚಿನ್ನು ಗಾಣಿಗೇರ, ನೀಲಮ್ಮ ಅಣ್ಣಿಗೇರಿ, ಗೀತಾ ಬೊಯಿಟೆ, ಫಕ್ಕೀರವ್ವ ಕಾಜಗಾರ, ಆಶಾ ಅಣ್ಣಿಗೇರಿ, ಶೈಲಾ ಸರದಾರ, ಭಾಗ್ಯಾ, ಭಕ್ತಿ, ಸಾದ್ವೀ ಸೇರಿದಂತೆ ಇತರರು ಇದ್ದರು