ಸಮರ್ಥ ಸದ್ಗುರು ಶ್ರೀಮಾಧವಾನಂದ ಪ್ರಭೂಜಿಯವರ ಜನ್ಮಜಯಂತಿ ಉತ್ಸವ
ಗುರ್ಲಾಪೂರ03: ಜಾತಿ ಬೇಧಭಾವ ಮಾಡದೆ ಸಕಲ ಜೀವರಾಶಿಗಳ ಲೇಸನ್ನೇ ಬಯಸಿದವರು ಸಮರ್ಥ ಸದ್ಗುರು ಮಾಧವಾನಂದರು ಕರ್ನಾಟಕ ಏಕೀಕರಣ ಗೋವಾ ಚಳುವಳಿ ಮಾಡಿದ ಮಹಾನ ಪುರುಷರು ಸಾಕಷ್ಟು ಅಂತರ್ಜಿತಿ ವಿವಾಹ ಮಾಡಿಸಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿ ಜಗತ್ತನ್ನು ಉದ್ದಾರ ಮಾಡಿದ್ದಾರೆ ಅಂತಹ ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗಿಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ನಾಗನೂರ ಕಾವ್ಯಾಶ್ರೀ ಅಮ್ಮನವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಹೇಳಿದರು.
ಗಿರಮಲ್ಲೆಶ್ವರ ಆಶ್ರಮದಲ್ಲಿ ನಡೆದ ಸಮರ್ಥ ಸದ್ಗುರು ಶ್ರೀಮಾಧವಾನಂದ ಪ್ರಭೂಜಿಯವರ 108 ನೇ ಜನ್ಮಜಯಂತಿ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಸಾಮಾಜದ ಹಿತರಕ್ಷಣೆ ಶ್ರಮಪಟ್ಟವರು ಹೆಸರು ಅಜರಾಮರವಾಗಿರುತ್ತದೆ. ತಂದೆತಾಯಿಯಲ್ಲಿ ಮೊದಲುಸಂಸ್ಕಾರ ನೀತಿಧರ್ಮ ವಿದ್ದರೆ ಮಕ್ಕಳು ಕೂಡಾ ಸನ್ಮಾರ್ಗದಲ್ಲಿ ಸಾಗುತ್ತಾರೆ.ಆಸ್ತಿ ಅದಿಕಾರ ಅಂತಸ್ತುಕ್ಕಿಂತ ಸಂಸ್ಕಾರವಿದ್ದರ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನಮಾನ ದೊರೆಯುತ್ತದೆ. ಪ್ರತಿಯೊಬ್ಬರಲ್ಲಿ ದೇವರಿದ್ದಾನೆ ನಿಷ್ಕಾಮ ಭಕ್ತಿ ದೇವರಿಗೆ ಸಲ್ಲುತ್ತದೆ. ಗುರುವಿನ ಹಸ್ತಮಸ್ತಕದ ಮೇಲೆವಿರಬೇಕು. ಸ್ತ್ರೀಯರು ತೊಟ್ಟಿಲ ತೂಗುವ ಕೈ ಜಗತ್ತನ್ನು ತೂಗುವಶಕ್ತಿ ಅವರಲ್ಲಿದೆ. ತಾಯಿಪಾದದಲ್ಲಿ ಸ್ವರ್ಗವನ್ನೇ ಕಾಣಬಹುದು ಸ್ವರ್ಗನರಕ ಬೇರಿಲ್ಲ ನಾವುಮಾಡಿದ ಪಾಪ ಪುಣ್ಯದ ಪಲ ಅನುಭವಿಸಬೇಕಾಗುತ್ತದೆ.ದುಸ್ಟವೈರಿಗಳು ಕಾಡಿದರೂ ದೇವರದಯೆ ಒಂದಿದ್ದರೆ ಏನೂಬೇಕಾದರೂ ಸಾಧಿಸಬಹುದು ಒಬ್ಬರು ಮೇಲೆ ಒಬ್ಬರು ಇಟ್ಟಂತ ನಂಬಿಕೆ ವಿಶ್ವಾಸ ಕಳೆದುಕೊಳ್ಳಬಾರದು ಅನುಮಾನ ಪಡುವುದ ಒಳ್ಳೆಯದಲ್ಲ ಎಂದು ಹೇಳಿದರು.
ಭರತೇಶ ಉಪಾದ್ಯೆ ಮಾತನಾಡಿ ಮೊಬೈಲ ಧಾರಾವಾಹಿ ನೋಡಿ ಇತ್ತೀಚಿಗೆ ಜನರು ದಾರಿತಪ್ಪುತ್ತಿದ್ದಾರೆ. ಪುರಾಣ ಪ್ರವಚನ ಮಹಾತ್ಮರ ಮಾತುಗಳನ್ನು ಕೇಳಿ ಸನ್ಮಾರ್ಗದಲ್ಲಿ ಸಾಗಬೇಕು.ಸಾಕಷ್ಟು ಜನ ದುಡಿಯದೆ ಯಾರ ಹೆಸರು ಹೇಳಿಕೊಂಡು ಬೇರೆಯವರ ಜೊತೆ ವಿನಾಕಾರಣ ತಿರುಗಾಡಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.ಸತ್ಯದ ಕಾಯಕ ಮಾಡಿ ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಸುಖ ಜೀವನ ನಡೆಸಲು ಸಾಧ್ಯ. ಶರೀರವನ್ನು ನಾವೂ ಕಾಪಾಡಿಕೊಂಡು ಹೋಗಬೇಕು.ಪುಣ್ಯವಂತರಿಗೆ ಮಾತ್ರಆದ್ಯಾತ್ಮ ತಿಳಿಯುತ್ತದೆ. ಆತ್ಮಶಕ್ತಿಯಿಂದ ಜಗತ್ತನ್ನೆ ಗೆಲ್ಲಬಹುದೆಂದರು. ಸಮರ್ಥ ಸದ್ಗುರು ಮಾದವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವ ನಡೆದು ಜೋಗುಳಪದಗಳನ್ನು ಹಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಅವರಿಗೆ ಮಾದವಾನಂದ ಸೇವಾಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈಸಮಯದಲ್ಲಿ ಬಾಳಯ್ಶಾ ಹಿರೇಮಠ. ಲಕ್ಷ್ಮಣ ಹೊಸಮನಿ. ಕಲ್ಲಪ್ಪಹುಬ್ಬಳ್ಳಿ. ದುಂಡಪ್ಪಕತ್ತಿ. ಲಕ್ಷ್ಮಣ ಕೂಲಿಗೊಡ. ಬಸವರಾಜ ಕೌಜಲಗಿ. ಗಿರಮಲ್ಲಸಂತಿ. ಸಂಗಪ್ಪದುರದುಂಡಿ.ಅಶೋಕ ಕಾಗೆ.ರಮೇಶ ಬಿರಾದಾರ. ಸೇರಿದಂತ ಅನೆಕರಿದ್ದರು. ಕಾರ್ಯಕ್ರಮವನ್ನುಮುರಿಗೆಪ್ಪ ಮಾಲಗಾರಸ್ವಾಗತಿಸಿ ,ನಿರೂಪಸಿದರು. ಶಿಕ್ಷಕ ಅಶೋಕ ಹೆಗ್ಗಾನಿ ವಂದಿಸಿದರು