ಇಂಡಿ

ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಲೋಕದರ್ಶನ ವರದಿ

ಇಂಡಿ 11: ಅಕ್ರಮವಾಗಿ ಮಾರಾಟ ಮಾಡುವ ಉದ್ದೆಶದಿಂದ 17.280 ಲೀಟರ ಮದ್ಯ ಮತ್ತು 7.800 ಲೀಟರ್ ಬೀಯರ್ ಸಾಗಾಟ ಮಾಡುತ್ತಿದ್ದ ಇಂಡಿ ವಲಯ ಅಬಕಾರಿ ಇಲಾಖೆಯ ಅಧಿಕಾರಿಗಳು  ಒಂದು ದ್ವಿಚಕ್ರ ವಾಹನ ಸಮೇತ ಇಂಡಿ ಪಟ್ಟಣದ ಅಗರಖೇಡ ರಸ್ತೆಯಲ್ಲಿ ಜಪ್ತು ಮಾಡಿ ವಶಪಡಿಸಿಕೊಂಡಿದ್ದಾರೆ. 

ಗ್ರಾಮ ಪಂಚಾಯತಿ ಚುನಾವಣೆ ನಿಮಿತ್ಯ ಗಸ್ತು ಮಾಡುತ್ತಿರುವಾಗ  ಖಚಿತ ಮಾಹಿತಿಯನ್ನು ಆದರಿಸಿ ಇಂಡಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಅಗರಖೇಡ ರಸ್ತೆಯಲ್ಲಿ ರಸ್ತೆ ಗಾವಲು ಮಾಡುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಆಕ್ರಮವಾಗಿ ಅಂದಾಜು 50271/- ಮೌಲ್ಯದ ವಸ್ತುಗಳನ್ನು ಜಪ್ತ ಮಾಡಿ ಆರೋಪಿತನಾದ ಹಾಜಿಮಲಂಗ ರಂಜಾನಸಾಬ ಖೇಡಕರ ಸಾ.ಹಿರೇಬೆವನೂರ ಇತನನ್ನು ದಸ್ತಗಿರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಇಂಡಿ ವಲಯದ ಅಬಕಾರಿ ನಿರೀಕ್ಷಕ ಎಂ ಎಚ್ ಪಡಸಲಗಿ ರವರ ನೇತೃತ್ವದಲ್ಲಿ ಇಂಡಿ ವಲಯದ ಅಬಕಾರಿ ಉಪ ನಿರೀಕ್ಷಕ-2 ಶರಣಗೌಡ ಎಂ ಬಿರಾದಾರ ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಿಬ್ಬಂದಿಗಳಾದ ಎಸ್ ಟಿ ದಳವಾಯಿ, ಎಸ್ ಸಿ ಬಂಡಿ, ಶಿವಶಂಕರ ಗೋಟ್ಯಾಳ, ಸಂಜಯ ಆರ್ ಕುಲಕಣರ್ಿ ಇವರು ಭಾಗವಹಿದ್ದಾರೆ ಎಂದು ಇಂಡಿ ಅಬಕಾರಿ ನಿರಿಕ್ಷಕ ಎಂ ಎಚ್ ಪಡಸಲಗಿ ತಿಳಿಸಿದ್ದಾರೆ 

ಸುದ್ದಿ ಓದಿ