ಬಂಜಾರ ಜನಾಂಗದ ಆರಾಧ್ಯ ದೈವ ಸಂತ ಸೇವಾಲಾಲ್: ನಾಗರಾಜ್
ಬಳ್ಳಾರಿ15: ಬಂಜಾರ ಜನಾಂಗದ ಆರಾಧ್ಯ ದೈವ ಆಗಿದ್ದ ಪೂಜ್ಯರು, ತಮ್ಮ ಅಲೆಮಾರಿ ಜನಾಂಗಕ್ಕೊಂದು ನೆಲೆಯೊದಗಿಸಿದ್ದಾರೆ. ಸಂತ ಶ್ರೀ ಸೇವಾಲಾಲ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದದ್ದರು ಎಂದು ತಹಶೀಲ್ದಾರರಾದ ಯು.ನಾಗರಾಜ್ ಅವರು ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಹರಪ್ಪ ನಾಗರೀಕತೆಯ ಕಾಲದಿಂದ ಬೆಳೆದು ಬಂದಂತಹ ಬಂಜಾರರು ಹಾಗೂ ಲಂಬಾಣಿ ಜನಾಂಗದವರು ಸಾವಿರಾರು ವರ್ಷಗಳಿಂದ ಪಟ್ಟಣ, ಪ್ರಾಂತ್ಯ, ನಗರಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರದಿಂದ ಅರಣ್ಯಗಳಲ್ಲಿ ಹಾಗೂ ಬೆಟ್ಟ-ಗುಡ್ಡಗಳಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದವರಿಗೆ ಸಂತ ಸೇವಾಲಾಲ್ ಅವರು ಜ್ಞಾನದ ದೀಪವನ್ನು ಬೆಳಗಿಸಿದರು. ಇಂದಿನ ಯುವಕರು ಇವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜನಾಂಗದ ಸಂಸ್ಕೃತಿ, ರೂಢಿ-ಸಂಪ್ರದಾಯಗಳನ್ನು ಕಾಪಾಡಿಕೊಂಡು ಸಂತರ ಹಾದಿಯಲ್ಲಿ ನಾವೆಲ್ಲರೂ ನಡೆಯೊಣ ಎಂದು ಖ್ಯಾತ ಲೇಖಕರಾದ ಪ್ರೊ.ಎನ್.ಶಾಂತನಾಯ್ಕ್ ಅವರು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಫೆ.14ರಂದು ಕಾಶ್ಮೀರದಲ್ಲಿ ನಡೆದ ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಯೋಧರಿಗೆ ಮೌನಚರಣೆ ಮೂಲಕ ಶ್ರಂದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕನರ್ಾಟಕ ಬಂಜಾರ ಸೇವಾ ಸಂಘ ಅಧ್ಯಕ್ಷ ಆರ್.ಚಂದ್ರ ನಾಯ್ಕ್, ಸಮಾಜದ ಮುಂಖಂಡರು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.
ಸಂತ ಶ್ರೀ ಸೇವಾಲಾಲ್ ಜಯಂತಿಯ ಮೆರವಣಿಗೆ :- ಜಯಂತಿ ಅಂಗವಾಗಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ಸಂತ ಶ್ರೀ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪಾಲಿಕೆ ಆಯುಕ್ತ ಮೊಹಮ್ಮದ್ ಮುನೀರ್ ಅವರು ಪುಷ್ಪನಮನ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಬಿ.ನಾಗರಾಜ್ ಸೇರಿದಂತೆ ಸಮಾಜದ ಮುಖಂಡರುಗಳು ಇದ್ದರು.
ಮೆರವಣಿಗೆಯು ಮುನ್ಸಿಪಲ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್ಪೇಟೆ ಪೊಲೀಸ್ ಠಾಣೆ, ಹೆಚ್.ಆರ್.ಗವಿಯಪ್ಪ ವೃತ್ತ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷರಮ್ ಡೋಳ್ಳು, ನೃತ್ಯ ಕಲಾ ಪ್ರಕಾರ ತಂಡಗಳು, ಲಂಬಾಣಿ ಸಂಪ್ರದಾಯವನ್ನು ಹೊಲುವಂತಹ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಆಕರ್ಷಕಗೊಂಡವು