ಮನರಂಜನೆ

ಗೆಳೆಯ ಮರಳಿ ಬರುವ ಆಸೆ ಕಮರಿದೆ: ನೀನಾಸಂ ಸತೀಶ್

ಗೆಳೆಯ ಮರಳಿ ಬರುವ ಆಸೆ ಕಮರಿದೆ: ನೀನಾಸಂ ಸತೀಶ್

ಬೆಂಗಳೂರು, ಜೂನ್ 14: ಗೆಳೆಯ ಸಂಚಾರಿ ವಿಜಯ್ ಸ್ಥಿತಿಗೆ ನಟ ನೀನಾಸಂ ಸತೀಶ್ ಕಂಬನಿ ಮಿಡಿದಿದ್ದು, ಆತ ಚೇತರಿಸಿಕೊಂಡು ಮತ್ತೆ ನಮ್ಮೊಡನೆ ಸೇರುವ ಆಸೆ ಬತ್ತಿಹೋಗಿದೆ ಎಂದು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, “ವಿಜಯ್ ಕೇವಲ ನಟನಾಗಿರಲಿಲ್ಲ.  ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದ.  ತೀರಾ ಕಷ್ಟಪಟ್ಟು ಈ ಹಂತ ತಲುಪಿದ್ದ.  ಚಿಕ್ಕ ವಯಸ್ಸಿನಲ್ಲಿ ತನ್ನ ಊರಿನಲ್ಲಿಯೇ ಜಾತಿ ಸಮಸ್ಯೆ ಎದುರಿಸಿದ್ದ.  ಹೋಟೆಲ್ ನಲ್ಲಿ ಕೆಲಸ ಮಾಡಿ ತಮ್ಮಂದಿರಿಗೆ ಶಿಕ್ಷಣ ಕೊಡಿಸಿದ್ದ” ಎಂದರು.ವಿಜಯ್ ಬದುಕುವುದು ಕಷ್ಟ ಎಂದು ವೈದ್ಯರು ನಿನ್ನೆಯೇ ಹೇಳಿದ್ದರು.  ಆದರೂ ಚಿಕಿತ್ಸೆ ಫಲಕಾರಿಯಾದೀತು ಎಂಬ ಸಣ್ಣ ಆಸೆಯಿತ್ತಾದರೂ, ಇಂದು ಅದೂ ಇಲ್ಲವಾಗಿದೆ. ಪರಿಸ್ಥಿತಿ ಈ ಮಟ್ಟಕ್ಕೆ ಬಂದೀತು ಎಂದು ನಿರೀಕ್ಷಿಸಿರಲಿಲ್ಲ.   ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬಂದು ಮನೆ ಕಟ್ಟಿಸಿದ್ದ.  ಸೋದರನಿಗೂ ಒಂದು ಮಹಡಿ ಬಿಟ್ಟುಕೊಟ್ಟಿದ್ದ.  ನಾಳೆ ಬೆಳಗ್ಗೆ ಆತ ಇರುವುದಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ.  ವಿಜಯ್ ನನ್ನು ಕಳೆದುಕೊಳ್ಳುವ ದುಃಖವನ್ನು ಆತನ ಕುಟುಂಬ ಸದಸ್ಯರು ಭರಿಸುವುದು ಅತ್ಯಂತ ಕಷ್ಟ ಎಂದು ಭಾವುಕರಾಗಿ ನುಡಿದರು.

  


ಸುದ್ದಿ ಓದಿ