ಗ್ರಾಮೀಣ ಸಹಕಾರಿ ಸಂಘಗಳಿಂದ ರೈತರಿಗೆ ಅನುಕೂಲ: ಘೋರ್ಪಡೆ
ಲೋಕದರ್ಶನ ವರದಿ
ಚಿಕ್ಕೋಡಿ 07: ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾದ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಿವೆ. ಒಂದೇ ಸೂರಿನಡಿ ವಿವಿಧ ಸೌಲಭ್ಯ ಒದಗಿಸುವ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಲಾಭವನ್ನು ಗ್ರಾಮೀಣ ಭಾಗದ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ನವಲಿಹಾಳ ಗ್ರಾಮದ ಮುಖಂಡ ಜಯರಾಮರಾವ ದತ್ತಾಜಿರಾವ ಘೋರ್ಪಡೆ ಹೇಳಿದರು.
ತಾಲೂಕಿನ ನವಲಿಹಾಳ ಗ್ರಾಮದ ಶಾಂತಿಸಾಗರ ವಿವಿಧ ಉದ್ದೇಶಗಳ ಸಹಕಾರಿ ಸಂಘದ 19 ನೆಯ ವಾರ್ಷಿಕ ಸರ್ವಸಾಧರಣೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಹಕಾರಿ ಸಂಘದಲ್ಲಿ 185 ಸದಸ್ಯರು, 446 ಸಹ ಸದಸ್ಯರು, ಒಟ್ಟು ಶೇಅರಬಂಡವಾಳ 10.69.350, ಮುದ್ದತಿ ಠೇವು 2.09.75700, ಸಾಲ 1.63.32647, ಪ್ರಸಕ್ತ ಸಾಲಿನಲ್ಲಿ 14.16.759 ನಿವ್ವಳ ಲಾಭವಾಗಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ ದೇವು ಹೂವನ್ನವರ ಮಾತನಾಡಿ, ಸಹಕಾರಿ ಸಂಘಕ್ಕೆ ಸೇರಿದ ಸಂಕನವಾಡಿ, ಧುಳಗನವಾಡಿ, ಕುಠಾಳಿ, ನವಲಿಹಾಳ ಗ್ರಾಮದಲ್ಲಿ ನಾಲ್ಕು ಹಾಲಿನ ಡೇರಿ ಇದ್ದು, ಪ್ರತಿ ದಿನ ಸುಮಾರು 1400 ಲೀಟರ ಹಾಲು ಸಂಗ್ರಹವಾಗುತ್ತದೆ. ರೈತರು ಹೆಚ್ಚು ಹೆಚ್ಚು ಹಾಲು ಸಹಕಾರಿ ಸಂಘಕ್ಕೆ ನೀಡಬೇಕು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಶುಖಾಧ್ಯ ಮಾರಾಟ, ಕೀಟನಾಶಕ ಮಾರಾಟ, ರಸಗೊಬ್ಬರ ಮಳಿಗೆ ಸಹಕಾರಿ ಸಂಘದಲ್ಲಿ ಸೌಲಭ್ಯ ಇರುತ್ತದೆ ಎಂದರು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಅಪ್ಪಾಸಾಹೇಬ ಬಾಬು ವಾಘೆ, ಶಿವಗೌಡ ಪಾಟೀಲ, ಅಶೋಕರಾವ ಘೋರ್ಪಡೆ, ರಾಘು ಕವಲಾಪೂರೆ ಸೇರಿದಂತೆ ಸಹಕಾರಿ ಸಂಘದ ಎಲ್ಲ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸರಸ್ವತಿ ಕಾಮಗೌಡ ಸ್ವಾಗತಿಸಿದರು. ಕಾರ್ಯದಶರ್ಿ ಕಲಗೌಡ ಕಾಮಗೌಡ ವರದಿ ವಾಚಿಸಿದರು. ದತ್ತಾ ಘಾಟಗೆ ನಿರೂಪಿಸಿದರು. ರಾಮಗೌಂಡ ಸಾವಗಾಂವೆ ವಂದಿಸಿದರು.