ಗ್ರಾಮೀಣ ಮಹಿಳೆಯರ ಆಶಾಕಿರಣ "ಸಿರಿ": ಪ್ರಸಾದ
ಧಾರವಾಡ 26: ಧರ್ಮಸ್ಥಳದ ಗ್ರಾಮಾಭಿವೃದ್ಧಿಯ ಗ್ರಾಮೀಣ ಭಾಗದ ಮಹಿಳೆಯರ ಆಶಾಕಿರಣವಾಗಿದೆ. ಆಥರ್ಿಕವಾಗಿ, ಸಾಮಾಜಿಕವಾಗಿ ಮಹಿಳೆಯು ಸಬಲಳಾಗಲು "ಸಿರಿ" ಶ್ರಮಿಸುತ್ತಿದೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಕ್ಯಾಂಪಸ್ನಲ್ಲಿ "ಸಿರಿ" ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಉದ್ಘಾಟಿಸಿದ ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು.
ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸಾದ "ಸಿರಿ" ಮಹಿಳೆಯರಿಗೆ ಉದ್ಯೋಗ ನಿಡುವ ಮುಲಕ ಸುಮಾರು 7000 ಕುಟುಂಬಗಲಿಗೆ ಆಥರ್ಿಕ ಬುನಾದಿ ಹಾಕಿದ್ದಾರೆ. ಕೈಗೆಟಕುವ ದರದಲ್ಲಿ ಅರಿವೆ, ಸಿರಿ ಧಾನ್ಯಗಳು, ಅಗರಬತ್ತಿ, ಸೀರೆ ಖಾದಿ ವಸ್ತುಗಳು ಮುಂತಾದವು ಲಭ್ಯವಿದ್ದು, ಸಾರ್ವಜನಿಕರು ಇವುಗಳನ್ನು ಖರೀದಿಸುವ ಮೂಲಕ ಸ್ತ್ರೀ-ಶಕ್ತಿಗೆ ಆಥರ್ಿಕ ಪುನಶ್ಚೇತನ ನೀಡಬೇಕೆಂದು ಹೇಳಿದರು.
ಗ್ರಾಮಾಭಿವೃದ್ದಿ ಪ್ರಾದೇಶಿಕ ನಿದರ್ೇಶಕರಾದ ಸೀತಾರಾಮ ಶೆಟ್ಟಿಯವರು ಈ ವಸ್ತು ಪ್ರದರ್ಶನ ಹಾಗೂ ಮಾರಾಟ ಮಹಿಳೆಯರು ತಯಾರಿಸಿದ ಗುಣಮಟ್ಟದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಿದೆ ಎಮದು ಹೇಳಿದರು.
ವಸ್ತು ಮಾರಾಟಕ್ಕೆ ಸುಮನಾ ವಜ್ರಕುಮಾರ ಚಾಲನೆ ನೀಡಿದರು. ಗ್ರಾಮಾಭಿವೃದ್ಧಿ ನಿದರ್ೇಶಕರಾದ ಎಂ.ದಿನೇಶ, "ಸಿರಿ" ವಿಭಾಗದ ರೋಹಿತ ಜೆ.ಎಸ್.ಎಸ್ ನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.
ಈ ವಸ್ತು ಪ್ರದರ್ಶನ ಮತ್ತು ಮಾರಾಟ 3 ನವೆಂಬರ್ 2018 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.