ಕನ್ನಡಕಲೆ ಸಂಸ್ಕೃತಿಯನ್ನು ಕಾಪಾಡಿ ಪೋಷಿಸಿ ಬೆಳೆಸುವಲ್ಲಿ ಗ್ರಾಮೀಣ ಜನರ ಪಾತ್ರ ಪ್ರಮುಖ

ಕನ್ನಡಕಲೆ ಸಂಸ್ಕೃತಿಯನ್ನು ಕಾಪಾಡಿ ಪೋಷಿಸಿ ಬೆಳೆಸುವಲ್ಲಿ ಗ್ರಾಮೀಣ ಜನರ ಪಾತ್ರ ಪ್ರಮುಖ

ಬಳ್ಳಾರಿ 24:ಗ್ರಾಮೀಣ ಭಾಗದಲ್ಲಿ ಕನ್ನಡದ ಕಲೆ ಮತ್ತು ಸಂಸ್ಕೃತಿಯನ್ನು ಗ್ರಾಮೀಣ ಜನರು ಅತ್ಯಂತ ಜತನದಿಂದ ಕಾಪಾಡಿಕೊಂಡು ಪೋಷಿಸಿ ಬೆಳೆಸುತ್ತಿದ್ದಾರೆ. ಗಡಿ ಭಾಗದ ಪರಿಸರದಲ್ಲಿ ಅನೇಕ ಗ್ರಾಮೀಣ ಪ್ರತಿಭೆಗಳು ಎಲೆಮರೆಯ ಕಾಯಿಯಂತಿದ್ದು, ಅವರನ್ನು ಮುಖ್ಯವಾಹಿನಿಗೆ ತರಬೇಕಾದ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ತಿಳಿಸಿದರು. 

ಅವರು ಶನಿವಾರದಂದು ಸಂಜೆ ಬಳ್ಳಾರಿ ತಾಲ್ಲೂಕಿನ ಹಂದಿಹಾಳು ಗ್ರಾಮದಲ್ಲಿ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಶ್ರೀ ಶಿವಪ್ಪ ತಾತನವರ ಮಠದ ಅಭಿವೃದ್ಧಿ ಸೇವಾ ಸಂಘ ಹಾಗೂ ಶ್ರೀಮತಿ ಜಯಲಕ್ಷ್ಮಿ ಕಲಾತಂಡ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಏಕಲವ್ಯ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. 

ಬಯಲಾಟ, ತತ್ವ ಪದಗಳು, ಭಜನೆ ಹಾಡುಗಳು, ಜನಪದ ಹಾಡುಗಳು ಸೇರಿದಂತೆ ವೈವಿಧ್ಯಮಯ ಸಾಹಿತ್ಯದ ಸೊಗಡನ್ನು ಬಿಂಬಿಸುವ ಗ್ರಾಮೀಣ ಪರಿಸರ ಉನ್ನತ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಗೋಚರಿಸುತ್ತಿದ್ದರೂ ಗ್ರಾಮೀಣ ಜನರು ತಮ್ಮ ಮೂಲ ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು. 

ಸಾನಿಧ್ಯವಹಿಸಿದ್ದ ಪ್ರವಚನಕಾರರಾದ ಶಿವಾನಂದ ಶಾಸ್ತ್ರಿಗಳು ಮಾತನಾಡಿ, ಏಕಲವ್ಯ ಸಾಮಾನ್ಯನಾಗಿದ್ದರೂ, ತನ್ನ ಸ್ವಪ್ರತಿಭೆಯಿಂದ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಉನ್ನತ ಸ್ಥಾನವನ್ನು ಗಳಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ಏಕಲವ್ಯ ನಿದರ್ಶನ. ದ್ರೋಣಾಚಾರ್ಯರನ್ನು ತನ್ನ ಮಾನಸ ಗುರುವಾಗಿ ಸ್ವೀಕರಿಸಿ, ಶುದ್ಧಾಂತಕರಣದಿಂದ ಆತ ಮಾಡಿದ ಕಾರ್ಯದಲ್ಲಿ ಜಯಶೀಲನಾಗುತ್ತಾನೆ ಎಂದರು. 

ಅಧ್ಯಕ್ಷತೆಯನ್ನು ಹಂದಿಹಾಳು ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಣ್ಣ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಯು.ಲಿಂಗಪ್ಪ, ಜಿ.ರಾಜಶೇಖರರೆಡ್ಡಿ, ರವೀಂದ್ರರೆಡ್ಡಿ, ಯು.ಕೇಶಪ್ಪ, ಕೆ.ವೆಂಕಣ್ಣ, ಮಠದ ಧರ್ಮದಶರ್ಿಗಳಾದ ಕೆ.ದೊಡ್ಡವೀರಣ್ಣ, ಕೆ.ಆದೆಪ್ಪ ಮುಂತಾದವರು ಹಾಜರಿದ್ದರು. 

ಸಕರ್ಾರಿ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ಆರಂಭದಲ್ಲಿ ನಾಟಕದ ನಿದರ್ೇಶಕ ಹಾಗೂ ನಟ ಕೆ.ಪರಶುರಾಮ ಸ್ವಾಗತಿಸಿ ನಿರೂಪಿಸಿದರು. 

ಸುದ್ದಿ ಓದಿ