ನಿವೃತ್ತಿ: ಸುರೇಂದ್ರ ದೊಡ್ಡಮನಿಗೆ ಬೀಳ್ಕೊಡುಗೆ
ಬ್ಯಾಡಗಿ: ಸಕರ್ಾರಿ ಸೇವೆಯಲ್ಲಿ ನೌಕರರ ನಿವೃತ್ತಿಯು ಅನಿವಾರ್ಯವಾಗಿದ್ದು, ಅವರು ತಮ್ಮ ಸೇವಾವಧಿಯಲ್ಲಿ ಸಲ್ಲಿಸುವ ಸೇವೆಯು ಜನಮನದಲ್ಲಿ ಸ್ಮರಣೀಯವಾಗಿರಬೇಕೆಂದು ತಹಶೀಲ್ದಾರ ತಿಪ್ಪೇಸ್ವಾಮಿ ಹೊಯ್ಸರ ಹೇಳಿದರು. ಸ್ಥಳೀಯ ತಾಪಂ ಸಭಾಭವನದಲ್ಲಿ ತಾಲೂಕಾ ಮಟ್ಟದ ಇಲಾಖೆಗಳ ವತಿಯಿಂದ ಮೇ 31ಕ್ಕೆ ಸಕರ್ಾರಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಲೋಕೋಪಯೋಗಿ ಉಪವಿಭಾಗದ ಸಹಾಯಕ ಕಾರ್ಯನಿವರ್ಾಹಕ ಇಂಜನೀಯರ್ ಸುರೇಂದ್ರ ದೊಡ್ಡಮನಿ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 36ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಸುರೇಂದ್ರ ದೊಡ್ಡಮನಿಯವರು ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದು, ನಿವೃತ್ತಿಯ ನಂತರದ ಅವರ ಜೀವನವು ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ ಮಾತನಾಡಿ, ಸುರೇಂದ್ರ ದೊಡ್ಡಮನಿ ಅವರು ಕಳೆದ 38ವರ್ಷಗಳ ನೌಕರಿ ಜೀವನದಲ್ಲಿ ಎರಡು ವರ್ಷ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಕರ್ಾರಿ ಸೇವೆಗೆ ನೇಮಕವಾಗಿ ಹಲವು ಇಲಾಖೆಗಳಲ್ಲಿ 36ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುರೇಂದ್ರ ದೊಡ್ಡಮನಿ ಅವರು, ಸಕರ್ಾರಿ ಸೇವೆಯಲ್ಲಿ ನಿವೃತ್ತಿ ಸಹಜ. ನಾವು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಜನರು ಗುರುತಿಸಿದರೆ ನಮ್ಮ ಸೇವಾ ಕಾರ್ಯ ಸಾರ್ಥಕವೆಂದು ಹೇಳಿದರಲ್ಲದೇ, ತಮ್ಮ ಸೇವಾವಧಿಯಲ್ಲಿ ತಮಗೆ ಸಹಕಾರವನ್ನು ನೀಡಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು. ಸುರೇಂದ್ರ ದೊಡ್ಡಮನಿ ಹಾಗೂ ಅವರ ಧರ್ಮಪತ್ನಿ ರಾಧಾ ದಂಪತಿಗಳನ್ನು ತಾಲೂಕಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಭಿನಂದಿಸಿ ಸನ್ಮಾನಿಸಿದರು.
ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ತಿಪ್ಪೇಸ್ವಾಮಿ ಹೊಯ್ಸರ ಅವರನ್ನು ಅಧಿಕಾರಿಗಳ ವರ್ಗದಿಂದ ಗೌರವಿಸಲಾಯಿತು. ಪುರಸಭಾ ಮುಖ್ಯಾಧಿಕಾರಿ ಏಸು ಬೆಂಗಳೂರ, ಎಇಇಗಳಾದ ಡಿ.ಎಲ್.ಕಲ್ಲೋಳ್ಕರ್, ಸುರೇಶ ಬೇಡರ, ಗ್ರೇಡ್ 2 ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ, ಇಂಜನೀಯರ್ ವೈ.ಕೆ.ಮೆಟಗಾರ, ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಧಿಕಾರಿಗಳ ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು