ಚಿಕ್ಕೋಡಿ

ಚಿಕ್ಕೋಡಿ- ಮಿರಜ ರಸ್ತೆ ತಡೆ ಮಾಡಲು ಮನವಿ

ಚಿಕ್ಕೋಡಿ- ಮಿರಜ ರಸ್ತೆ ತಡೆ ಮಾಡಲು ಮನವಿ

ಲೋಕದರ್ಶನ ವರದಿ

ಕಾಗವಾಡ 16:  ಬೆಳಗಾವಿ ಸಕರ್ಾರಿ ಆಸ್ಪತ್ರೆಯಲ್ಲಿ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಈಕ್ಬಾಲ್ ಕನವಾಡೆ ಇವರನ್ನು ಕ್ವಾರಂಟೈನ್ ಮಾಡಿ ಸ್ವ್ಯಾಬ್ ತೆಗೆದುಕೊಂಡು 11 ದಿನ ಗತಿಸಿದರೂ ರಿಪೋಟರ್್ ನೀಡದೆ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ನೀಡುತ್ತಿರುವ ಮಾನಸಿಕ ಹಿಂಸೆ ಖಂಡಿಸಿ ಶನಿವಾರ ದಿ.18 ರಂದು ಬೆಳಿಗ್ಗೆಯಿಂದ ಚಿಕ್ಕೋಡಿ-ಮಿರಜ ರಸ್ತೆ ತಡೆ ಮಾಡುವ ನಿರ್ಣಯ ಕೈಗೊಂಡು ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಇವರಿಗೆ ಮನವಿ ಅಪರ್ಿಸಿದರು.

ಗುರುವಾರ ಸಂಜೆ ಶಿರಗುಪ್ಪಿ ಗ್ರಾಮದ ಮಾಜಿಗ್ರಾಪಂ ಸದಸ್ಯರು, ಮುಖಂಡರು ಒಂದುಗೂಡಿ ಕಾಗವಾಡ ತಹಸೀಲ್ದಾರ ಇವರಿಗೆ ಮನವಿ ಅಪರ್ಿಸಿ, ತಮ್ಮ ಆಕ್ರೋಶ ಹೊರ ಹಾಕಿದರು.

ಕಳೆದ 11 ದಿನಗಳಲ್ಲಿ ಪಾಸಿಟಿವ್ ಅಥವಾ ನೆಗೆಟಿವ್ ಯಾವುದಾದರೂ ರಿಪೋಟರ್್ ನೀಡಬೇಕಾಗಿತ್ತು. ಈ ವರೆಗೆ ನೀಡಲ್ಲಾ. ಪಾಸಿಟಿವ್ ಇದ್ದರೇ ಅಲ್ಲಿಗೆ ಉಪಚಾರಿಸಬಹುದಿತ್ತು. ಆಸ್ಪತ್ರೆಯಲ್ಲಿ ಉಪಚಾರ ನೀಡದೆಯಿದ್ದರೇ ಬೇರೆ ಆಸತ್ರೆಯಲ್ಲಿ ಉಪಚಾರಿಸಲು ಅವಕಾಶ ಮಾಡಿಕೊಡಿ. ಕಾಲಹರಣ ಮಾಡುವ ಕಾರಣವೆಂದು ಮಾಜಿ ಗ್ರಾಪಂ ಸದಸ್ಯ ರಾಮಗೌಡಾ ಪಾಟೀಲ, ಶಿವಾನಂದ ಪಾಟೀಲ, ವಿಜಯ ಅಕಿವಾಟೆ ತಹಸೀಲ್ದಾರರಿಗೆ ಪ್ರಶ್ನಿಸಿ, ಮನವಿ ಅಪರ್ಿಸಿದರು.

ಶಿರಗುಪ್ಪಿ ಮಾಜಿಗ್ರಾಪಂ ಅಧ್ಯಕ್ಷ ಈಕ್ಬಾಲ್ ಕನವಾಡೆ ಓರ್ವ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು. ಜುಲೈ 6 ರಂದು ಆರೋಗ್ಯ ತಪಾಸಣೆ ಮಾಡಿಕೊಂಡು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ವ್ಯಾಬ್ ತೆಗೆದುಕೊಂಡಿದ್ದಾರೆ. ದಿ. 8ರಂದು ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ವಾಗಿದ್ದಾರೆ. ಕಳೆದ 11 ದಿನಗಳಲ್ಲಿ ಯಾವುದೇ ರಿಪೋಟರ್್ ಬರಲಿಲ್ಲಾ. ಇದ್ದರಿಂದ ಈಕ್ಬಾಲ್ ಕನವಾಡೆ ಇವರಿಗೆ ಒಂದು ರೀತಿ ಮಾನಸಿಕ ಹಿಂಸೆ ನೀಡದಂತಾಗಿದೆ ಎಂದರು.

ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಮನವಿ ಸ್ವೀಕರಿಸಿ, ನಾನು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಮ್ಮ ವಿಷಯ ಮುಟ್ಟಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳುವದಾಗಿ ಭರವಸೆ ನೀಡಿದರು. ಶಿರಗುಪ್ಪಿ ಗ್ರಾಮದಸುರೇಶ ಚೌಗುಲೆ, ಭಾವುಸಾಹೇಬ ಕಾಗವಾಡೆ, ಅಪರಾಜು ಕನವಾಡೆ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ