ದೇವಸ್ಥಾನ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ದೇವಸ್ಥಾನ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ 29:ನಗರದ ಆರಾಧ್ಯ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆಡಳಿತ ಸೂಕ್ತ ರೀತಿಯಲ್ಲಿ ನಡೆಯದೇ ದೇವಸ್ಥಾನಗಳಿಗೆ ನೀಡಿದ ಖಾಣಿಕೆ, ಸೇವಾ ವಿವರ, ಪೂಜಾರಿಗಳ ಕಿರುಕುಳ, ಮೊದಲಾದವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಕನರ್ಾಟಕ ಜನ ಸೈನ್ಯ ಸಂಘಟನೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ದೇವಸ್ಥಾನವು ದಿನನಿತ್ಯ ಸಾವಿರಾರು ಜನ ಭೇಟಿ ನೀಡಿ ದೇವರಿಗೆ ಸೇವೆಯನ್ನು ಮತ್ತು ಭಕ್ತಿಯನ್ನು ಸಲ್ಲಿಸುತ್ತಾರೆ. ಜಿಲ್ಲೆಯಲ್ಲಿ ಪ್ರಸಿದ್ದ ದೇವಸ್ಥಾನದಲ್ಲಿ ಒಂದಾಗಿದ್ದು. ಇಲ್ಲಿಗೆ ಸುತ್ತ-ಮುತ್ತಲಿನ ಜನತೆ ಆಂಧ್ರ, ತೆಲಂಗಾಣ, ರಾಜ್ಯಗಳಿಂದ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ದೇವಸ್ಥಾನದಲ್ಲಿ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತಿವೆ. ದೇವಸ್ಥಾನದಲ್ಲಿ  ಇಲಾಖೆಯ ಹುಂಡಿಗಳು ಅಲವಡಿಸಿದ್ದರೂ ಅರ್ಚಕರು ಮೂರರಿಂದ ನಾಲ್ಕೂ ಹುಂಡೆಯ ಕೊಡಗಳನ್ನು  ಅಳವಡಿಸಿರುತ್ತಾರೆ. ಇದರಿಂದ ದೇವಸ್ಥಾನಕ್ಕೆ ದಕ್ಕೆ ಉಂಟಾಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಖಾಳಜಿ ವಹಿಸದೇ ಇರುವುದು ಅವರ ಕುಮ್ಮಕ್ಕು ಇರಬಹುದು ಎಂದು ತಿಳಿಯುತ್ತದೆ. ದೇವಸ್ಥಾನದ ಹುಂಡಿಗಳನ್ನು ಪ್ರತಿ ಮೂರು, ನಾಲ್ಕೂ ತಿಂಗಳಿಗೊಮ್ಮೆ ಎಣಿಕೆ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೇ ಎಣಿಕೆ ಮಾಡುತ್ತಿದ್ದು ಹಲವು ಅನುಮಾನಗಳಿಗೆ ಕಾರಣವಾಗಿರುತ್ತದೆ. ದೇವಸ್ಥಾನಕ್ಕೆ ನೀಡುವ ಭಕ್ತಾಧಿಗಳ ಕಾಣಿಕೆ, ಸೀರೆಗಳು, ನೀಡಿದ ಸಮಯದಲ್ಲಿ ಪಾವತಿಸಿದ ರಸೀದಿ ಕೇಳಿದರೆ ನೀಡುವುದಿಲ್ಲ. ಇಲ್ಲಿಯವರೆಗೆ ಎಷ್ಟು ಸೀರೆಗಳು ಬಂದಿವೆ. ಅವುಗಳನ್ನು ಹೇಗೆ ವಿಕ್ರಯ ಮಾಡಲಾಗುತ್ತದೆ. ಎಂದು ಅಲ್ಲಿಯ ಅಧಿಕಾರಿಗಳಿಗೆ ವಿಚಾರಿಸಿದರೆ ಸಮರ್ಪಕ ಉತ್ತರ ಸಿಗುವುದಿಲ್ಲ. ದೇವಿಗೆ ಸಲ್ಲಿಸಿದ ಬೆಳ್ಳಿ, ಬಂಗಾರದ ಆಭರಣಗಳನ್ನು ರಸೀದಿ ಹಾಕಿಸಿ ಪೂಜೆ ಮಾಡಲು ನೀಡಿದರೇ ಅರ್ಚಕರು ಪೂಜೆ ಮಾಡಲು ನಿರಾಕರಿಸುತ್ತಾರೆ. ಈ ಹಿಂದೆ ಈ ವಿಷಯದ ಬಗ್ಗೆ ಹಲವಾರು ಪ್ರಕರಣಗಳು ಆಗಿವೆ. ಹೀಗೆ ದೇವಸ್ಥಾನದಲ್ಲಿ ಜರುಗುವ ವಿವಿದ ಸೇವೆಗಳಿಗೆ ಭಕ್ತರಿಂದ ಅಧಿಕ ಮೊತ್ತದ ಹಣವನ್ನು ನೇರವಾಗಿ ಪಡೆದು ಅಭಿಷೇಕ, ಎಲೆಪೂಜೆ, ಕುಂಬಪೂಜೆ, ಮಾಡುತ್ತಾರೆ. ದೇವಸ್ಥಾನದಲ್ಲಿ ಅರ್ಚಕರಿಗೆ ಬೇರೆ-ಬೇರೆ ಮಂತ್ರ ಬರದೇ ಇರುವುದು ಮಂತ್ರವನ್ನು ಸರಿಯಾದ ವ್ಯೆವಸ್ಥೆಯಲ್ಲಿ ಕಲಿಸಬೇಕು. ಶ್ರದ್ಧಾಭಕ್ತಿಯಿಂದ ಪೂಜೆ ನಡೆಸಬೇಕು. ಸೇವಾ ದರಗಳ ಮಾರ್ಗಸೂಚಿ ಫಲಕವನ್ನು ಅಳವಡಿಸದೇ ಇರುವುದು ಭಕ್ತರಿಗೆ ಮೋಸದ ಚಿಂತನೆ ನಿತ್ಯ ಜರುಗುತ್ತಿದೆ. ಜೊತೆಗೆ ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ, ಪೂಜಾ ಸಾಮಾಗ್ರಿಗಳು, ಹೆಚ್ಚಿನ ದರದಲ್ಲಿ ಭಕ್ತಾಧಿಗಳಿಗೆ ನೀಡುತ್ತಿರುವುದು ನೋವಿನ ಸಂಗತಿ. ಇಲ್ಲಿಯ ವ್ಯಾಪಾರಿಗಳು ಬಾಯಿಗೆ ಬಂದ ರೀತಿ ದರಗಳನ್ನು ನಿಗದಿಪಡಿಸಿ ಬಂದ ಭಕ್ತರಿಗೆ ನೋವನ್ನುಂಟು ಮಾಡುತ್ತಾರೆ. ಅದಕ್ಕಾಗಿ ಈ ಎಲ್ಲಾ ಆಡಳಿತ ವ್ಯೆವೆಸ್ಥೆಯನ್ನು ವ್ಯೆವಸ್ಥಿತವಾಗಿ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವಿಷಯ ಕುರಿತು ವಿಳಂಭ ದೊರಣೆ ಮಾಡಿದರೆ ಭಕ್ತಾಧಿಗಳ ಸಮಕ್ಷಮದಲ್ಲಿ ಕನರ್ಾಟಕ ಜನ ಸೈನ್ಯವತಿಯಿಂದ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತದೆ ಎಂದು ಸಂಸ್ಥಾಪಕ ರಾಜ್ಯಧ್ಯಕ್ಷ ಕೆ.ಎರಿಸ್ವಾಮಿ, ರಾಜ್ಯ ಉಪಾಧ್ಯಕ್ಷ ಹೊನ್ನುರಪ್ಪ, ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಎಸ್.ಅಶೋಕಕುಮಾರ, ಸೇರಿದಂತೆ ಸಂಘಟನೆಯ ಅಮರನಾಥ, ಕೃಷ್ಣಾ, ರಾಜೇಶ್ ಹುಂಡೆಕರ್, ರವಿತೇಜ, ನಾಸಿರ್, ಸಿದ್ದಲಿಂಗಮ್ಮ, ರಾಧಕೃಷ್ಣ, ಫಯಾಜಬಾಷಾ, ಇಬ್ರಾಹಿಂ, ಖಾಜಾ, ಆಯಿಶಾ ಸಿದ್ದಿಕ್, ಸೇರಿದಂತೆ ನೂರಾರು ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಸಹಾಯಕರಾದ ಶ್ರೀಮತಿ ಮೇಗಾ ಸಿರಸ್ದಾರ್ ಅವರು ಸ್ವಿಕರಿಸಿದರು.  


ಸುದ್ದಿ ಓದಿ