ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ
ರಾಣಿಬೆನ್ನೂರ 13: ಸುಕ್ಷೇತ್ರ ಚೌಡಯ್ಯದಾನಪುರದಲ್ಲಿ ನೂತನವಾಗಿ ಪ್ರೌಢಶಾಲೆ ಮಂಜೂರಾಗಿದ್ದು, ಶೀಘ್ರವೇ ನೂತನ ಕಟ್ಟಡ, ಆಟದ ಮೈದಾನ, ಪ್ರಯೋಗಾಲಯ, ವಾಚನಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜೆ.ಎಂ.ಮಠದ ಅವರು ಸ್ಥಳೀಯ ಶಾಸಕರಲ್ಲಿ ಆಗ್ರಹಿಸಿದ್ದಾರೆ.
ಈಗಾಗಲೇ ಪ್ರಾಥಮಿಕ ಶಾಲೆಯ ನೂತನ ಕಟ್ಟಡವು ಅತ್ಯುತ್ತಮವಾಗಿ ನಿಮರ್ಾಗೊಂಡು ಕಾರ್ಯರಂಭಗೊಂಡಿದೆ. ಇದಕ್ಕೆ ಶಾಸಕ ಅರುಣಕುಮಾರ ಪೂಜಾರ ಅವರ ಪ್ರಯತ್ನ ಬಹಳಷ್ಟಿದೆ. ಈ ಶಾಲೆಗೆ ಆಟದ ಮೈದಾನವನ್ನೂ ಸಹ ಕಲ್ಪಿಸಬೇಕು. ಒಂದರಿಂದ 5 ನೇ ತರಗತಿವರೆಗೆ ಇಲ್ಲಿಯ ವಿದ್ಯಾಥರ್ಿಗಳಿಗೆ ಬೋಧನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
6 ರಿಂದ ಎಸ್ಎಸ್ಎಲ್ಸಿ ವರೆಗೆ ಪ್ರೌಢಶಾಲೆಯ ನೂತನ ಕಟ್ಟಡದಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಶಾಸಕರು ಪ್ರೌಢಶಾಲೆ ಮಂಜೂರಾತಿ ಮಾಡಿವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲ ಮಾಡಿದ್ದಾರೆ. ಗುತ್ತಲ, ಹೊನ್ನತ್ತಿ, ರಾಣಿಬೆನ್ನೂರಿಗೆ ವಿದ್ಯಾರ್ಥಿಗಳು ಬರುವುದನ್ನು ತಪ್ಪಿಸಿದ್ದಾರೆ. ಶೀಘ್ರವೇ ಪ್ರೌಢಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮಠದ ಅವರು ಒತ್ತಾಯಿಸಿದ್ದಾರೆ.
ಶಾಸಕರ ಈಗಿನ ಅಧಿಕಾರವಧಿಯಲ್ಲಿಯೇ ಪ್ರೌಡಶಾಲೆಯ ನೂತನ ಕಟ್ಟಡದ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶಾಸಕ ಅರುಣಕುಮಾರ ಪೂಜಾರ ಅವರು ನಿರಂತರವಾಗಿ ಶ್ರಮಿಸುತ್ತಿದ್ದು ಅವಧಿಯೊಳಗೆ ಪೂರ್ಣಗೊಳಿಸಿ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡುವುದಾಗಿ ಶಾಸಕರು ಆಶ್ವಾಸನೆ ನೀಡಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಸ್ಪಷ್ಠನೆ ನೀಡಿದ್ದಾರೆ