ಗಣರಾಜ್ಯೋತ್ಸವ: ಕಿವುಡ, ಮೂಗ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಗಣರಾಜ್ಯೋತ್ಸವ: ಕಿವುಡ, ಮೂಗ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 28:ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಂತೋಷ ದಿಂದ ಆಚರಿಸಿ ಶಾಲಾ ಮಕ್ಕಳಯಿಂದ ಮೂಡಿ ಬಂದ ದೇಶದ ಏಕತೆಯ ಪ್ರತೀಕವಾಗಿ ನಮೋ ಭಾರತ ಎಂಬ ನೃತ್ಯ ಸಂಗೀತ ನಾಟಕ ಪ್ರದರ್ಶನ ನೀಡಿದರು.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿ ಇದರ ಉದ್ಘಾಟನೆ ಸಮಾರಂಭ ವನ್ನು ನಗರದ ಶಾಸಕರಾದ ಜಿ,ಸೋಮಶೇಖರ್ ರೆಡ್ಡಿ ಯವರು ಚಾಲನೆ ನೀಡಿದರು. 

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿವುಡ ಮತ್ತು ಮೂಗ ಮಕ್ಕಳ ಜೈ ಇಂಡಿಯಾ ಎಂಬ ನೃತ್ಯ ನಾಟಕ ಅದ್ಬುತ ವಾಗಿ ಮೂಡಿಸುವ ಮೂಲಕ ಎಲ್ಲರ ಮೈ ಜುಮ್ಮೆನ್ನುವಂತೆ ಪ್ರದರ್ಶನವನ್ನು ಮಾಡಿದರು. ಸಾಲು ಮರದ ತಿಮ್ಮಕ್ಕ ಅವರನ್ನು ನೆನಪಿಸುವ ಒಂದು ನೃತ್ಯ ಪುಟ್ಟ ಮಕ್ಕಳಿಯಿಂದ ಮೂಡಿಸಿ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂಬ ಸಂದೇಶ ಸಾರಿದರು, ಇದಕ್ಕಿಂತ ಮುಂಚೆ ಗಾಲಿ ಜನಾರ್ದನ ರೆಡ್ಡಿ ಯವರ ಚಂಗರೆಡ್ಡಿ ಸ್ಮಾರಕ ಶಾಲೆಯ ಮಕ್ಕಳು ರಾಧೆ ಕ್ರಿಷ್ಣ ಅದ್ಬುತ ಗೀತೆಯನ್ನು ನೃತ್ಯ ದ ಮೂಲಕ ತೊರ್ಪಡಿಸಿ ಕಿವುಡ ಆದರೆ ಮೂಗ ಆದರೆ ನಾವು ಯಾವುದಕ್ಕೆ ಕಡಿಮೆ ಇಲ್ಲ ಎಂಬುದು ಜನರಿಗೆ ನೃತ್ಯದ ಮುಖಾಂತರ ತಿಳಿಸಿದರು. ಕಾಡಿನ ಸೌಂದರ್ಯ ವನ್ನು ಹಾಡಿನ ಮೂಲಕ ತೋರ್ಪಡಿಸಿದ ಎಂ ಎ ಕೆ ಆಜಾದ್ ಶಾಲೆಯ ಮಕ್ಕಳು ಜನರು ಈ ರೀತಿಯಲ್ಲಿ ಇರುತ್ತಾರೆ ಎಂಬುದು ಸಾಕ್ಷಿ ಕರಿಸಿದರು,ಬಾಲ ಭಾರತಿ ಶಾಲೆಯ ಮಕ್ಕಳಿಯಿಂದ ದೇಶ ಭಕ್ತಿ ಸಂಗೀತ ಹಾಡುವುದರ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿದರು, ಈ ಒಂದು 70 ನೇ ಗಣ ರಾಜ್ಯೋತ್ಸವ ಸಾಂಪ್ರದಾಯಿಕ ಶೈಲಿಯ ಕಲೆಯನ್ನು ಒಳಗೊಂಡಂತೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದು ಯಶಸ್ವಿಯಾಗಿ ನಿರ್ವಹಿಸಿದರು ನಗರದ ಶಾಸಕಾರಾದ ಜಿ ಸೋಮಶೇಖರ್ ರೆಡ್ಡಿ ಯವರು ಭಾಗವಹಿಸಿದ ಪ್ರತಿಯೊಂದು ತಂಡಕ್ಕೆ ಎರಡು ಸಾವಿರ ರೂಪಾಯಿಗಳು ನೆನಪಿನ ಕಾಣಿಕೆ ನೀಡಿ ಸಾರ್ಥಕತೆ ಮೆರೆದರು, ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರು ನಗರದ ಎಲ್ಲಾ ಶಾಲೆಯ ಮಕ್ಕಳು ಮತ್ತು ಪೋಷಕರು ಸೇರಿದಂತೆ ಹಲವು ಗಣ್ಯಮಾನ್ಯರು ನೆರೆದಿದ್ದವರಗೆ ರಸದೌತಣ ಉಣಬಡಿಸಿದರು.

 

ಸುದ್ದಿ ಓದಿ