ಇಂದಿನಿಂದ ಧಾರ್ಮಿಕ ಪಥ ಸಂಚಲನ
ಯರಗಟ್ಟಿ 20: ಸಮೀಪದ ಮುನವಳ್ಳಿ ಪಟ್ಟಣದ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿ ವರ್ಷದಂತ ಶ್ರಾವಣ ಮಾಸದ ಅಂಗವಾಗಿ ಪಟ್ಟಣದಲ್ಲಿ ಆ. 21 ರಿಂದ ಪ್ರತಿದಿನ ಬೆಳಿಗ್ಗೆ ಪ್ರಮುಖ ವಾರ್ಡಗಳಲ್ಲಿ ಪಥ ಸಂಚಲನ ಜರುಗಲಿದೆ.
ವಿಶೇಷ ಶಿವಾನುಭವ ಕಾರ್ಯಕ್ರಮ ಗಾಂಧಿನಗರದ ಹನುಮಾನ ದೇವಸ್ಥಾನದಲ್ಲಿ, ನಿರ್ಮಲ ನಗರದ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶಿಕ್ಷಕ ಬಿ.ಬಿ.ಹುಲಿಗೊಪ್ಪ ತಿಳಿಸಿದ್ದಾರೆ